ಆನ್ ಡ್ರೊಯ್ಡ್
ಏನಿದು ಆನ್ ಡ್ರೊಯ್ಡ್ ?ಕಂಡ ಕಂಡ ಮೊಬೈಲ್ ಕಂಪನಿಗಳೆಲ್ಲ ದಿನೇ ದಿನೇ ಒಂದು ಪ್ರೊಡಕ್ಟ್ ಹೊರತಂದಾಗ ಇದು ಆನ್ ಡ್ರೊಯ್ಡ್ ಫೋನ್ ಎಂದು ಹೇಳಿಕೊಳ್ಳುತ್ತಿವೆ.ಹಾಗಾದರೆ ಏನಿದೆ ಇದರಲ್ಲಿ ಅಂಥ ವಿಶೇಷ?
ಮೊಬೈಲ್ ಕಂಪನಿಗಳಲ್ಲಿ ನೊಕಿಯ,ಸಾಮ್ ಸಂಗ್,ಸೋನಿ,ಎಲ್ ಜಿ ,ಹೆಚ್ ಟಿ ಸಿ,ಬ್ಲ್ಯಾಕ್ ಬೆರ್ರಿ,ಐ ಫೋನ್ ದಿಗ್ಗಜರು.ಇವರ ಜೊತೆಗೆ ಈಗ ಕೆಲವು ಹೊಸ ಕಂಪನಿಗಳು ಈಗ ಅವರಿಗೆ ತಾವೇನು ಕಮ್ಮಿ ಎಂಬಂತೆ ತಮ್ಮ ಪ್ರೊಡಕ್ಟ್ ಗಳನ್ನು ಹೊರತರುತ್ತಿವೆ.ಅವರಿಗೆ ಬೇಕಾದ (Operating System)ಗಳನ್ನು ಬಳಸಿಕೊಳ್ಳುತ್ತವೆ.ಇದರಲ್ಲಿ ಸಿಂಬಿಯನ್ ,ಆನ್ ಡ್ರೊಯ್ಡ್,ಬ್ಲ್ಯಾಕ್ ಬೆರ್ರಿ ಇತ್ಯಾದಿ.
ಆನ್ ಡ್ರೊಯ್ಡ್ ಶುರು ಆಗುವ ಮುನ್ನ ಬ್ಲಾಕ್ ಬೆರಿ ಸಿಮ್ಬಿಯನ್ ಸ್ವಲ್ಪ ಜಾಸ್ತಿ ಪ್ರಚಲಿತದಲ್ಲಿದ್ದ (ಈಗಲೂ ಇರುವ )ಮೊಬೈಲ್ ಆಪೆರೇಟಿಂಗ್ ಸಿಸ್ಟಮ್.ಆದರೆ ಈ ಆನ್ ಡ್ರೊಯ್ಡ್ ಅನ್ನುವ ಒ ಎಸ್ ಮೊದಲು Android.inc ಎಂಬ ಅಮೆರಿಕಾದ ಕ್ಯಾಲಿಫೊರ್ನಿಯದ ಕಂಪನಿಯು ಶುರು ಮಾಡಿತು.ಆದರೆ ಇದನ್ನು ೨೦೦೫ ರಲ್ಲಿ ಗೂಗಲ್ ಕೊಂಡುಕೊಂಡಿತು.ಈಗ ಇದು ಗೂಗಲ್ ಆನ್ ಡ್ರೊಯ್ಡ್ ಎಂದು ಹೆಸರು ಪಡೆದುಕೊಂಡಿದೆ.
Open Handset Alliance ಎಲ್ಲಾ ಟೆಕ್ಸಾಸ್ ಇನ್ಸ್ಟ್ರುಮೆಂಟ್,ಗೂಗಲ್ ,ಹೆಚ್ ಟಿ ಸಿ ,ಇಂಟೆಲ್ ,ಮೋಟೊರೋಲ,ಎಲ್ ಜಿ ,ಏನ್ ವಿಡಿಯ ನವೆಂಬರ್ ೨೦೦೭ ರಲ್ಲಿ ಒಪ್ಪಂದ ಮಾಡಿ ಕೊಂಡರು.ಅದೇ ತರಹ ಇನ್ನು ಕೆಲವು ಕಂಪನಿಗಳು ಡಿಸೆಂಬರ್ ೨೦೦೮ ರಲ್ಲಿ ಈ ಆನ್ ಡ್ರೊಯ್ಡ್ ಪ್ರಾಜೆಕ್ಟ್ ನಲ್ಲಿ ಸೇರಿಕೊಂಡವು.
೨೦೦೮ ರಲ್ಲಿ ಇದರ ಲೈಸೆನ್ಸ್ (Open Source) ಫ್ರೀ ಸಾಫ್ಟ್ ವೇರ್ ಆಗಿ ಮಾರ್ಪಟ್ಟಿತು.ಗೂಗಲ್ ಅಪಾಚಿ ಲೈಸೆನ್ಸ್ ನ ಅಡಿಯಲ್ಲಿ ಎಲ್ಲ ಸೋರ್ಸ್ ಕೋಡ್ ಗಳನ್ನು ಹೊರತಂದಿತು.ಅಂದಿನಿಂದ ಹಲವು ಆನ್ ಡ್ರೊಯ್ಡ್ ವರ್ಶನ್ ಗಳು ಹೊರ ಬಂದಿವೆ.
ಮೊದಲ ವರ್ಶನ್ ೧.೧ ಸೆಪ್ಟೆಂಬರ್ ೨೦೦೮ ರಲ್ಲಿ ಹೊರತಂದರು.೧.೨ ರಿಂದ ೧.೫ ರ ತನಕ ೨೦೦೯ ಫೆಬ್ರವರಿ ಒಳಗೆ ಗ್ರಾಹಕರಿಗೆ ಹೊರ ಬಂದವು .
೧.೫ (Cup Cake)ಅನ್ನು ೩೦ ಏಪ್ರಿಲ್ ೨೦೦೯,೧.೬ (Donut)೧೫ ಸೆಪ್ಟೆಂಬರ್ ೨೦೦೯,೨.೦/೨.೧ (Eclair)೨೬ ಅಕ್ಟೋಬರ್ ೨೦೦೯,೨.೨ (Froyo)೨೦ ಮೇ ೨೦೧೦,೨.೩ (GingerBread)೬ ಡಿಸೆಂಬರ್ ೨೦೧೦ ರಂದು ಸತತ ವಾಗಿ ಹೊರಬಂದಿವೆ.
೨.೩.(GingerBread)ಅನ್ನು ನೊಕಿಯ ಕೂಡ ಬಳಸುತ್ತಿರುವುದು ಆಶ್ಚರ್ಯದ ಸಂಗತಿ .
ಚಿತ್ರ ಕೃಪೆ:http://www.flickr.com/photos/samuraispy/2394268353/
Comments
ಉ: ಆನ್ ಡ್ರೊಯ್ಡ್
In reply to ಉ: ಆನ್ ಡ್ರೊಯ್ಡ್ by sm.sathyacharana
ಉ: ಆನ್ ಡ್ರೊಯ್ಡ್
ಉ: ಆನ್ ಡ್ರೊಯ್ಡ್
In reply to ಉ: ಆನ್ ಡ್ರೊಯ್ಡ್ by gopinatha
ಉ: ಆನ್ ಡ್ರೊಯ್ಡ್