ಆ......ಪ್ರೇಮ ಕವನ..!
"ನಿನ್ನ ನಗು....
ತೊರೆಯ ಬಂಡೆಗಳ ನಡುವೆ
ಕುಲು ಕುಲು ನಗುತ ಸಾಗುವ ಜಲ..
ನಿನ್ನ ಕಣ್ಣಿನ ಕೊನೆ......
ಮೊಳೆತ ಬೀಜದ
ತುದಿಯಂಚಿನ ಮೊನೆ..
ನಿನ್ನ ಮನ..
ನಿರ್ಮಲ ಬಾನಿನಲಿ
ಬಿಳಿರೆಕ್ಕೆಗಳಗಲಿಸಿ ತೇಲುವ ಹಂಸ.."
..............................................
..............ಆಕೆ ಬಚ್ಚಿಟ್ಟಿದ್ದಳು
ತನ್ನ ಪತಿ ಮದುವೆಗೆ ಮೊದಲು
ಬರೆದು ಕೊಟ್ಟಿದ್ದ ಆ ಪ್ರೇಮ ಕವನ !
ಈಗ.....
ಅದನೋದಿ ನಸುನಕ್ಕು
ಅಮಲಿನಲಿ ನಿಶ್ಚಲನಾಗಿರುವ ಪತಿ
ಎಚ್ಚರಗೊಳದಿರಲೆಂದು
ಮೆಲ್ಲನೆ ಮುರಿದ ಟ್ರಂಕಿನಲಿ ಮುಚ್ಚಿಟ್ಟಳು !
ಮೇಲೆ ಮುರಿದ ಛಾವಣಿಯ ರಂಧ್ರದಲಿ
ಕಿಸಕ್ಕನೆ ನಕ್ಕಂತೆ...! ನಕ್ಷತ್ರ ರಾಶಿ..
ಸೋತ ಕಣ್ಣಂಚಿನ ನೀರು..!
ಅವಳ ಆಸೆಯಾಗಸ ಈಗಲೂ ಬೆತ್ತಲೆಯ ಬಾನು.
ಆದರೆ ....ಅವನು ಬದಲಾಗಬಹುದೇ ?
ಮೊದಲಿನಂತೆ.!
ಈಗಲೂ ......ಕಾತರದ ಕಣ್ಣು..ಅದೇ ನಿರೀಕ್ಷೆ...
Comments
ಉ: ಆ......ಪ್ರೇಮ ಕವನ..!
In reply to ಉ: ಆ......ಪ್ರೇಮ ಕವನ..! by gopinatha
ಉ: ಆ......ಪ್ರೇಮ ಕವನ..!
ಉ: ಆ......ಪ್ರೇಮ ಕವನ..!
In reply to ಉ: ಆ......ಪ್ರೇಮ ಕವನ..! by prasannakulkarni
ಉ: ಆ......ಪ್ರೇಮ ಕವನ..!
In reply to ಉ: ಆ......ಪ್ರೇಮ ಕವನ..! by ಭಾಗ್ವತ
ಉ: ಆ......ಪ್ರೇಮ ಕವನ..!
In reply to ಉ: ಆ......ಪ್ರೇಮ ಕವನ..! by sachetan
ಉ: ಆ......ಪ್ರೇಮ ಕವನ..!
ಉ: ಆ......ಪ್ರೇಮ ಕವನ..!
In reply to ಉ: ಆ......ಪ್ರೇಮ ಕವನ..! by ksraghavendranavada
ಉ: ಆ......ಪ್ರೇಮ ಕವನ..!