ಆಫ್ರೀನ್...ಪುಟ್ಟ ಗಜಲ್!
ನಾನು ಮತ್ತೆ ಮತ್ತೆ ಬರುತ್ತೇನೆ ಈ ಮಣ್ಣಿನಿಂದಲೇ
ಗಿಡದ ಎಸ್ಟೋ ರೆಂಬೆಗಳು ಕವಲೊಡೆಯುತ್ತವೆ ಈ ಮಣ್ಣಿನಿಂದಲೇ.....
ನನ್ನದೆ ಮೂಗು,ನನ್ನದೇ ಕಣ್ಣು ಕಾಣದಿರಬಹುದು,
ಆ ತೊದಲುಮಾತಿನ ನಗುವಿನ ಸದ್ದು ಕೇಳುತ್ತದೆ ಈ ಮಣ್ಣಿನಿಂದಲೇ...
ಮರುಭೂಮಿಯಲ್ಲಿ ಹನಿಗಳು ಒಡಲ ತಲುಪದಿರಬಹುದು,
ಆದರೂ ಓಯಸಿಸ್ಸುಗಳು ಹುಟ್ಟುತ್ತವೆ ಈ ಮಣ್ಣಿನಿಂದಲೇ...
ಹಣ್ಣಾದ ಎಲೆಗಳು ಗಿಡದಿಂದ ಉದುರುವುದು ನಿಯಮ
ಹಾಡುಹಗಲೇ ಚಿಗುರೆಲೆಯ ಚಿವುಟಿ ನಡೆದವನು ಹುಟ್ಟಿದ್ದು ಈ ಮಣ್ಣಿನಲ್ಲಿಯೇ...
ನಿನಗೆ ನಾನು ಬೇಡವಾಗಿರಬಹುದು ಆದರೇನು,
ನಿನ್ನನ್ನು ಹೊತ್ತು ಹೆತ್ತು ಸಾಕಲು ಬರಲೇಬೇಕಾಗಿದೆ ಈ ಮಣ್ಣಿನಿಂದಲೇ...
Rating
Comments
ಉ: ಆಫ್ರೀನ್...ಪುಟ್ಟ ಗಜಲ್!
ಉ: ಆಫ್ರೀನ್...ಪುಟ್ಟ ಗಜಲ್!