ಆಫ್ರೀನ್...ಪುಟ್ಟ ಗಜಲ್!

ಆಫ್ರೀನ್...ಪುಟ್ಟ ಗಜಲ್!

 ನಾನು ಮತ್ತೆ ಮತ್ತೆ ಬರುತ್ತೇನೆ ಈ ಮಣ್ಣಿನಿಂದಲೇ

ಗಿಡದ ಎಸ್ಟೋ ರೆಂಬೆಗಳು ಕವಲೊಡೆಯುತ್ತವೆ ಈ ಮಣ್ಣಿನಿಂದಲೇ.....


ನನ್ನದೆ ಮೂಗು,ನನ್ನದೇ ಕಣ್ಣು ಕಾಣದಿರಬಹುದು,

ಆ ತೊದಲುಮಾತಿನ ನಗುವಿನ ಸದ್ದು ಕೇಳುತ್ತದೆ ಈ ಮಣ್ಣಿನಿಂದಲೇ...


ಮರುಭೂಮಿಯಲ್ಲಿ ಹನಿಗಳು ಒಡಲ ತಲುಪದಿರಬಹುದು,

ಆದರೂ ಓಯಸಿಸ್ಸುಗಳು ಹುಟ್ಟುತ್ತವೆ ಈ ಮಣ್ಣಿನಿಂದಲೇ...


ಹಣ್ಣಾದ ಎಲೆಗಳು ಗಿಡದಿಂದ ಉದುರುವುದು ನಿಯಮ

ಹಾಡುಹಗಲೇ ಚಿಗುರೆಲೆಯ ಚಿವುಟಿ ನಡೆದವನು ಹುಟ್ಟಿದ್ದು ಈ ಮಣ್ಣಿನಲ್ಲಿಯೇ...


ನಿನಗೆ ನಾನು ಬೇಡವಾಗಿರಬಹುದು ಆದರೇನು,

ನಿನ್ನನ್ನು ಹೊತ್ತು ಹೆತ್ತು ಸಾಕಲು ಬರಲೇಬೇಕಾಗಿದೆ ಈ ಮಣ್ಣಿನಿಂದಲೇ...

 

Rating
No votes yet

Comments