ಆಮ್ಮ

ಆಮ್ಮ

ಅಮ್ಮ..ಅಮ್ಮ ಈ ಪದದಲ್ಲಿ ಅದೆಷ್ಟು ಶಕ್ತಿ, ಪಾವಿತ್ರತ್ಯೆ, ವಾತ್ಸಲ್ಯಇದೆ ನೋಡ್ರಿ,ಯಾವ ಪದನಾದ್ರು ಇದುಕ್ಕೆ ಸರಿಸಾಟಿ ಇದಿಯೇನ್ರಿ.........ಅಬ್ಬ ನಂಗಂತು ಇವತ್ತು ಅಮ್ಮನ ನೆನಪು ತುಂಬಾ ಆಗ್ತಾಇದೇರಿ ಆದ್ರೆ ಎನ್ ಮಾಡೋದು ಮದುವೆ ಆದ್ಮೇಲೆ ಅಮ್ಮನ ಪ್ರೀತಿನ ತುಂಬಾ ಮಿಸ್ ಮಡ್ಕೊತೀವ್ರಿ. ಅಮ್ಮ ಅದೊಂದು ಪ್ರೀತಿ, ವಾತ್ಸಲ್ಯ ತುಂಬಿದ ಭೋರ್ಗರೆವ ಕಡಲು ಕಣ್ರಿ ಅವಳಲ್ಲಿ ಅದೆಷ್ಟು ಜವಾಬ್ದಾರಿ, ನೋವು, ಸಂಕಟ, ಕನಸುಗಳು, ಆಸೆಗಳು.........ಅಮ್ಮನೆ ಹಾಗೆ ತನ್ನೆಲ್ಲ ನೋವು, ಸಂಕಟ, ಕನಸುಗಳು, ಆಸೆಗಳು ಎಲ್ಲವನ್ನು ಜೀವ ಕೊಡ್ದೆ ಕಟ್ಟಿಟ್ಟು ಬಿಡ್ತಾಳೆ ಕಣ್ರಿ.... ತನ್ನ ಮಕ್ಕಳ ತನ್ನ ಸಂಸಾರದವರ ನಲಿವಿನಲ್ಲಿ ತನ್ನ ನೋವು ಮರಿತಾಳೆ, ಅವರ ಕನಸಿನಲ್ಲೆ ತನ್ನ ಕನಸನ್ನು ಕಾಣ್ತಾಳೆ, ಅವ್ರ ಖುಷಿಯಲ್ಲೆ ತನ್ನ ಸಂಕಟ ಮರಿತಾಳೆ, ತನ್ನ ಹಸಿವನ್ನು ಹಿಂಗಿಸಿ ಮಕ್ಕಳ ಹೊಟ್ಟೆ ತುಂಬುಸ್ತಾಳೆ, ಅವಳಿಗೆ ಅವಳದೆ ಆದ ಜೀವನಾನೆ ಇಲ್ವೇನೊ ಅನ್ಸುತ್ತೆ,ಎಷ್ಟೊ ಸಾರಿ ಎಲ್ಲರಿಂದಾನು ದೂರಾಗಿ ಅಮ್ಮ ಒಬ್ಬಳು ಜೊತೆನೆ ಒಂದು ನಾಲಕ್ಕು ದಿನ ಹಾಯಾಗಿ ಕಳಿಬೇಕು ಅನ್ಸುತ್ತೆರಿ ಮತ್ತೆ ಅವಳದೆ ಆದ ಜೀವಕ್ಕೆ ಜೀವ, ಅವಳ ಕನಸಿಗೆ ನನಸು , ಅವಳ ಆಸೆಗೆ ಪ್ರತಿರೂಪ ಎಲ್ಲವನ್ನು ಕೊಡಬೇಕು ಅನ್ಸುತ್ತೆ ಆದ್ರೆ ಅವಳನ್ನು ಎಷ್ಟು ಕೇಳಿದ್ರು ಅವಳ ಪ್ರತಿಯೊಂದು ನೋವು, ಸಂಕಟ, ಕನಸುಗಳು, ಆಸೆಗಳು ಎಲ್ಲ ನಾವೆ ಆಗೆರ್ತೀವಿ......... ಅಮ್ಮ ಯಾಕ್ ಹೀಗೆ..........ಆದರೆ ಅದುಕ್ಕೆಲ್ಲ ಉತ್ತರ ಸಿಗೋದು ಒಂದು ಹೆಣ್ಣು ತಾನು ಅಮ್ಮನಾದಾಗ ಮಾತ್ರ....ಯಾಕೆ ನನ್ನ ಅಮ್ಮ ತನ್ನೆಲ್ಲ ಕಣ್ಣೀರನ್ನು ತನ್ನಲ್ಲೆ ಹಿಂಗಿಸಿಕೊಳ್ತಾಇದ್ಲು ,ಯಾಕೆ ನನ್ನ ಅಮ್ಮ ತನ್ನ ನೋವೆಲ್ಲ ನಮ್ಮ ನಲಿವಿನಲ್ಲಿ ಮರೀತಿದ್ಲು,,ಯಾಕೆ ನನ್ನ ಅಮ್ಮ ತನ್ನ ಸಂಕಟನೆಲ್ಲ ತನ್ನಲ್ಲೆ ಹುದುಗಿಸಿಕೊಳ್ತಾ ಇದ್ಲು,ಯಾಕೆ ನನ್ನ ಅಮ್ಮ ತನ್ನ ಕನಸನ್ನೆಲ್ಲ ಜೀವ ಕೊಡದೆ ಕಟ್ಟಿಟ್ಟಿದ್ಲು ಅಂತ.

Rating
No votes yet

Comments