ಆಮ್ಲೆಟ್ ಸಿಗುವುದು ಹೇಗೆ?

ಆಮ್ಲೆಟ್ ಸಿಗುವುದು ಹೇಗೆ?

ಆಮ್ಲೆಟ್ ಸಿಗುವುದು ಹೇಗೆ?
ಕೆಲವು ತಿಂಗಳುಗಳ ಹಿಂದೆ ಆರ್ಥಿಕ ತಜ್ಞರಾದ ಪ್ರೊ. ಬಿ. ಎಮ್. ಕುಮಾರಸ್ವಾಮಿ ಅವರು ವಿಶೇಷ ಆರ್ಥಿಕ ವಲಯಗಳಿಂದ (S.E.Z.) ಆಗುವ ಸಮಸ್ಯೆಗಳ ಬಗ್ಗೆ, ರೈತರು ಪಡುವ ಬವಣೆಗಳ ಬಗ್ಗೆ ಒಂದು ಉಪನ್ಯಾಸ ನೀಡಿದ್ದರು. ಅಲ್ಲಿ ಅವರು S.E.Z. ಬಗ್ಗೆ ಬರೆದ ಪುಸ್ತಕದ ಬಿಡುಗಡೆ ಸಮಾರಂಭವೂ ಇತ್ತು. ನಾನೂ ಆ ಭಾಷಣವನ್ನು ಕೇಳಲು ಹೋಗಿದ್ದೆ. ಆಗ ಅವರು, ಖ್ಯಾತ ಪತ್ರಕರ್ತೆಯಾದ ಚಿತ್ರಾ ಸುಬ್ರಮಣ್ಯಂ ಅವರು ಬರೆದ ಒಂದು ಪ್ರಸಿದ್ಧ ಗ್ರಂಥ `India is for sale’ (ಭಾರತ ಮಾರಾಟಕ್ಕಿದೆ) ಬಗ್ಗೆ ಪ್ರಸ್ತಾಪಿಸಿದರು. 1986-94ರ ಅವಧಿಯಲ್ಲಿ ಗ್ಯಾಟ್ ಮಾತುಕಥೆಗಳು ಜಿನೇವಾದಲ್ಲಿ ನಡೆಯುತ್ತಿದ್ದಾಗ, ಜಾಗತೀಕರಣದ ಹೆಸರಿನಲ್ಲಿ ಭಾರತದ ಮಾರುಕಟ್ಟೆಯನ್ನು ಆಕ್ರಮಿಸಲು ಶ್ರೀಮಂತ ರಾಷ್ಟ್ರಗಳು ಐ.ಎಂ.ಎಫ್. ಹಾಗೂ ವರ್ಲ್ಡ್ ಬ್ಯಾಂಕ್ ನೆರವಿನಿಂದ ನಡೆಸಿದ ಷಡ್ಯಂತ್ರಗಳು, ಅದಕ್ಕೆ ಸಂತೋಷವಾಗಿಯೇ ಕೈ ಜೋಡಿಸಿದ ಭಾರತದ ಹಿರಿಯ ರಾಜಕಾರಣಿಗಳು ಹೇಗೆ ಭಾರತವನ್ನು ಮಾರಾಟಕ್ಕಿಟ್ಟರು ಎಂಬ ದುರಂಥ ಕಥೆಯನ್ನು ‘India is for sale’ ನಲ್ಲಿ ವರ್ಣಿಸಿರುವುದನ್ನು ತಿಳಿಸಿದರು. ಆ ಗ್ರಂಥದಲ್ಲಿ ಬರುವ ಒಂದು ಸಂದರ್ಭದ ಬಗ್ಗೆ ತಿಳಿಸಿದರು. ಆ ಸಂದರ್ಭ ಹೀಗೆ ಬರುತ್ತದೆ. ವಿಶ್ವ ಬ್ಯಾಂಕಿನ ಹಿರಿಯ ಅಧಿಕಾರಿಯೊಬ್ಬನನ್ನು ಭಾರತೀಯ ಪತ್ರಕರ್ತನೊಬ್ಬ ಪ್ರಶ್ನಿಸುತ್ತಾನೆ. ಜಾಗತೀಕರಣದ ಕಟ್ಟುಪಾಡುಗಳು ಭಾರತದ ಕೋಟ್ಯಾಂತರ ಬಡವರ ಮೇಲೆ ಕೆಟ್ಟ ಪರಿಣಾಮ ಬೀರುವುದಿಲ್ಲವೇ? ಅದಕ್ಕೆ ಆ ಹಿರಿಯ ಅಧಿಕಾರಿ ಹೇಳುತ್ತಾನೆ, “You see unless you break some eggs, how can you make an omelet?” (ಕೆಲವು ಮೊಟ್ಟೆಗಳನ್ನು ಒಡೆಯದಿದ್ದರೆ ನಮಗೆ ಆಂಲೆಟ್ ಸಿಗುವುದಾದರೂ ಹೇಗೆ?) ಉತ್ತರ ಬಹಳ ಅರ್ಥಗರ್ಭಿತವಾಗಿದೆ. ಕೆಲವರ ಆಮ್ಲೆಟ್‍ಗಾಗಿ ಹಲವರ ತಲೆ ಒಡೆಯುವುದೇ ಜಾಗತೀಕರಣ. S.E.Z. ನೀತಿಯೂ ಹೀಗೆ ಈ ಬಡವರ ತಲೆ ಒಡೆಯುವ ಸರ್ಕಾರಿ ನೀತಿಯ ಮತ್ತೊಂದು ಕಾರ್ಯಕ್ರಮ ಎಂದರು. ಹೀಗೆಯೇ S.E.Z. ಎಂಬ ಪೆಡಂಭೂತಗಳು ಉಂಟು ಮಾಡುತ್ತಿರುವ ಸಮಸ್ಯೆಗಳ ಬಗ್ಗೆ ವಿವರಿಸುತ್ತಾ ಹೋದರು. ಹಲವರ ಮೊಟ್ಟೆ ಒಡೆದು ಕೆಲವರು ಆಮ್ಲೆಟ್ ಪಡೆಯುವುದು ಹೀಗೆ!

Rating
No votes yet

Comments