ಆರ್ ಎಫ್ ಐ ಡಿ (RFID) - ಗುರುತಿಸಿಕೊಳ್ಳಲೂ ಒಂದು ತಂತ್ರಜ್ಞಾನ !!!

ಆರ್ ಎಫ್ ಐ ಡಿ (RFID) - ಗುರುತಿಸಿಕೊಳ್ಳಲೂ ಒಂದು ತಂತ್ರಜ್ಞಾನ !!!

ಒಂದು ಕಡೆ ಮೊಬಿಲಿಟಿ ಆದಾಗ ಇನ್ನೊಂದು ತೊಂದರೆ ಇದೆ, ಎಲ್ಲವು ವೈರ್ ಲೆಸ್ ಆದರೆ ಎಲ್ಲವು ಚೆಲ್ಲಾ-ಪಿಲ್ಲಿಯಾಗೆ ಹೋಗುವ ಸಾದ್ಯತೆಗಳಿವೆ!!! ಆಗ ಈ-ವಸ್ತುಗಳನ್ನು, ಸಲಕರಣೆಗಳನ್ನು ಗುರುತಿಸುವುದೆ ಒಂದು ದೊಡ್ಡ ಕೆಲಸ !!! ಈ ತೊಂದರೆ ಮೊಬಿಲಿಟಿ ಆಗದಿದ್ದರು ಇದೆ !!!

ಇದಕ್ಕೆ ಪರಿಹಾರವಾಗಿ ಬರುತ್ತಿರುವುದೆ... ಆರ್ ಎಫ್ ಐ ಡಿ (RFID‍) Radio Frequency Identification 

ಈಗ ಡಾಟ ಸೆಂಟರ್‍ ಗಳಲ್ಲಿ ನಿಮ್ಮ ಮಷಿನುಗಳನ್ನು ಗುರುತಿಸಲು ಬಹಳ ಶ್ರಮಪಡುತ್ತಿದ್ದಾರೆ. ಏಕೆಂದ್ರೆ ಅಲ್ಲಿ ಆ ಮಷಿನ್ ಯಾರು ಬಳಸುತ್ತಿದ್ದಾರೆ ಎಂದು ಕಂಡುಹಿಡಿಯುವುದು ಕಷ್ಟ. ಇದರಿಂದ ಸಾಕಷ್ಟು ಈ-ಕಸ ನಿರ್ಮಾಣವಾಗುತ್ತಿದೆ.

ಈ ಆರ್ ಎಫ್ ಐ ಡಿ ಮುಖಾಂತರ ಆ ಈ-ವಸ್ತುಗಳ ಕುಲ-ಗೋತ್ರ(meta-information) ಎಲ್ಲ ತಿಳಿದುಕೊಳ್ಳಬಹುದು. ಅದು ಯಾವ ಮಹಡಿಯಲ್ಲಿ , ಎಲ್ಲಿ ಅಡಗಿಕುಳಿತುಕೊಂಡಿದೆ ಎಂದು ಕಂಡುಹಿಡಿಯಬಹುದು. ಸದ್ಯಕ್ಕೆ ಡಾಟಾಸೆಂಟರ್ ಗಳಲ್ಲಿ ಈ-ವಸ್ತುಗಳಿಗೆ ತಮ್ಮದೆ ಆದ "ನಾಮಪಲಕ" ಗಳನ್ನು ಹಾಕಿ ಕಂಡುಹಿಡಿಯುತ್ತಿದ್ದಾರೆ !!!

Rating
No votes yet