"ಆವರಣ ಎಂಬ ಕೆಟ್ಟ ಕೃತಿ ಮತ್ತು ತಲೆಕೆಟ್ಟ ಭೈರಪ್ಪ" - ’ಅಗ್ನಿ’ ಉವಾಚ

"ಆವರಣ ಎಂಬ ಕೆಟ್ಟ ಕೃತಿ ಮತ್ತು ತಲೆಕೆಟ್ಟ ಭೈರಪ್ಪ" - ’ಅಗ್ನಿ’ ಉವಾಚ

ನನಗನಿಸ್ತದ ಬಹುಶ: ಅನಂತಮೂರ್ತಿಗಳು ಸೈತ ಈ ಥರದ ವಿಕೃತಿಯನ್ನು ವಿರೋಧಿಸುತ್ತಾರ ಅಂತ!

ಅನಂತಮೂರ್ತಿ ಮತ್ತು ಭೈರಪ್ಪ ವಿವಾದ ಇನ್ನೂ ಪತ್ರಿಕೆಗಳ ವಾಚಕರ ವಾಣಿಯಲ್ಲಿ ತಣ್ಣಗಾಗದೆ ಸಣ್ಣಗ ನಡೆಯೂ ಮುಂದೆ almost ಎಲ್ಲಾ ಕನ್ನಡ tabloid ಗಳು ಇದರ ಬಗ್ಗೆ ಈ ಸಲ ಬರ್ದಾರ. ಏನಪಾ ಅಂದ್ರ ಒಬ್ಬೊಬ್ರು ಒಂದೊಂದ ಥರಾ ಬರ್ದಾರ, ಅದೂ cover page ಸ್ಟೋರಿ ಆಗಿ. ಆದ್ರ ಅದರೊಳಿಗಿನ ಕೆಲವು ನೋಡಿದ್ರ ಯಾಕೋ ಕೆಲವರಿಗೆ ಭೈರಪ್ಪನವರ ಹೆಸರ ಕೇಳಿದ್ರ ಆಗಿ ಬರೂದಿಲ್ಲ ಇನ್ನ ಅವರ ಕೃತಿಗಳ ಬಗ್ಗೆ ಮಾತಡೂದಂತೂ ದೂರದ ಮಾತು.

ಉದಾಹರಿಣಿಗಿ ಈ ಸಲದ ಅಗ್ನಿ ವಾರಪತ್ರಿಕೆ(೦೭-೦೬-೨೦೦೭)ಯೊಳಗ ಮೇಲೇ ಹೇಳದಂತಾ ಮಾತುಗಳನ್ನು ಅದ್ರ ಸಂಪಾದಕರೇ ಬರ್ದಾರ ಅಂದ್ರ, ಆ ಪತ್ರಿಕೆಯ ಧೋರಣೆ, ನಿಲುವು, ಒಲುವು ಇತ್ಯಾದಿ ಇತ್ಯಾದಿ ಎಲ್ಲಾ ನೀವು ಅಗ್ದೀ ಸರಳ ಆಗಿ guess ಮಾಡಬಹುದು. ಅದೂ ಅನಂತಮೂರ್ತಿಯವರನ್ನ cover page ಮ್ಯಾಲೇ ಹಾಕಿ ಒಳಗ ಹಿಂತಾ ಮಾತು ಬರಿಯೂದು ಅಂದ್ರ ತಪ್ಪಲ್ಲೇನು? ಇಷ್ಟೊಂದು ವಿಚಾರವನ್ನ ಬಿಟ್ಟು ಬರೇ ವ್ಯಕ್ತಿ ಮ್ಯಾಲೆ ವಿಷ ಕಾರೂದ್ರ ಇವರ ಒಳ ಉದ್ದೇಶ ಏನು? ಯಾಕ balanced ಆಗಿ, neutral ಆಗಿ ಬರಿಬಾರ್ದು? ಭೈರಪ್ಪನವರ ಆವರಣ ಯಾವ ಕಾರಣಕ್ಕ ಬೈತಾ ಇದ್ದಾರೋ ಅದ್ರಕ್ಕಿಂತಾ ಹೊಲ್ಸ ಕೆಲಸಾ ಇವ್ರು ಮಾಡ್ಲಿಕತ್ಯಾರ ಅಂತ ನನಗನಸ್ತದ. :-(

ಇದ್ದಿದ್ದ್ರಾಗೇ ಛೋಲೋ ಅನ್ಸಿದ್ದು, ಹಾಯ್ ಬೆಂಗಳೂರು. ಆದ್ರ ಅವರು ಸೈತ ಸಾಹೇಬ್ರು, ಅವರಿಗೂ ಬಯ್ದಂಗ ಮಾಡಿ, ಇವರಿಗೂ ಬಯ್ದಂಗ ಮಾಡಿ, ಕೊನಿಗೊಂದಿಷ್ಟು ಪ್ರಶ್ನಿ ಕೇಳಿ ಕೈ ತೊಳಕೊಂಡಾರ. ಒಟ್ಟಿನಾಗ ಅಡ್ದಗ್ವಾಡಿ ಮ್ಯಾಲ ದೀಪಾ ಇಟ್ಟಹಂಗ ಮಾಡ್ಯಾರ. ಎಷ್ಟಾದ್ರೂ tabloid circulationಗಾಗಿ ಎಲ್ಲಾರ್ದೂ ಮರ್ಜಿ ಕಾಯಬೇಕಾಗ್ತದ್ರಿ ಶಿವಾ!! ಆದ್ರ ಕೇಳಿದಂಥಾ ಪ್ರಶ್ನಿ ಮಾತ್ರ ಕೆಲವೊಂದು ಅಗ್ದೀ relevant ಅನ್ಸತ್ತಾವ, ಮತ್ತ ಅವನ್ನ ಇದೇ ಬೆಳೆಗೆರೆ ಭಾಳ ಹಿಂದಕ ಕೇಳಿದ್ರ ಇನ್ನೂ ಛೋಲೋ ಅಗ್ತಿತ್ತೇನೋ? ಇನ್ನೊಂದು ಮಾತು : ಬೆಳೆಗೆರೆ, ವಿ.ಕ ಓದುಗರ ಅಭಿಪ್ರಾಯ ಕೇಳಿದ್ದು ತಪ್ಪು ಅಂದಾರ. ನಿಮಗೂ ಹಂಗೇ ಅನಸ್ತದೇನೂ? ಹಂಗಂದ್ರ ಓದುಗರಿಗೆ ಯಾವುದೇ ಅಭಿಪ್ರಾಯ ಇರುದಿಲ್ಲಾ ಅಂತೋ ಅಥವಾ ಅವರ ಅಭಿಪ್ರಾಯಕ್ಕ ಯಾವುದೇ ಬೆಲೆ ಇಲ್ಲಾ ಅಂತೋ?

ಕೊನಿಗಿ, ನಮ್ಮ ಸಂಪದ ಬಳಗದ ಸದಸ್ಯರಾದ ಅಬ್ದುಲ್ ರಶೀದ್ ’ಚುರಮುರಿ’ಯಲ್ಲಿರುವ ವಿಡಿಯೋದಲ್ಲಿ ಕೆಲವೊಂದು ಅಗ್ದೀ ಕಹಿ ಸತ್ಯಗಳನ್ನು ಹೇಳ್ಯಾರ. ಅನಂತಮೂರ್ತಿಯವರು utra progressive ಆಗ್ತಾ ಇದ್ದಾರೇನೋ ಅದಕ್ಕೇ ಅವರ ಭಾಷಣ ಜಾಸ್ತಿ ಹೊತ್ತ ಕೇಳ್ಲಿಕ್ಕೇ ಆಗುದಿಲ್ಲ ಅಂತ ಅಂದಾರ. ಅಲ್ಲದೇ ’ಬುದ್ಧಿಜೀವಿ’ ಜಿ.ಕೆ.ಗೋವಿಂದರಾವ ಬಗ್ಗೆಯ ಒಂದು ಘಟನೆಯನ್ನು ಅಲ್ಲಿ ನೆನಪಿಸಿಕೊಂಡಾರ, ಅದೂ ನನಗಂತೂ ಒಳ್ಳೆ ನಗೂ ತರಿಸಿತು. ಕೆ.ಪಿ. ಒಳ್ಳೆ ಕೆಲ್ಸಾ ಮಾಡ್ಯಾರ, ನೀವೂ ನೋಡ್ರಿ. "URA should stop preaching, start writing" http://churumuri.wordpress.com/2007/06/02/ura-should-stop-preaching-start-writing/

Rating
No votes yet

Comments