ಆಸುಮನಕ್ಕೆ ವರುಷ ತುಂಬುತಿರುವ ಹರುಷ!!!

ಆಸುಮನಕ್ಕೆ ವರುಷ ತುಂಬುತಿರುವ ಹರುಷ!!!

 


ಕಳೆದ ವರುಷ ಪ್ರೇಮಿಗಳ ದಿನಕ್ಕೆ ಒಂದು ದಿನ ಮೊದಲು
ಜನರು "ನಾಳೆ ಏನಾಗಬಹುದು" ಎಂದು ಕಾಯುತ್ತಲಿರಲು


ಪ್ರೀತಿಸುವವರನ್ನು ಬೆಂಬಲಿಸಲು ಆಸುಮನ ಸ್ಪಂದಿಸಿತ್ತು
’ಪಿಂಕ್’ ಚಡ್ಡೀ ಹಗರಣದವರಿಗಂದು ಸವಾಲನ್ನೇ ಹಾಕಿತ್ತು


ಮತ್ತೆ ಎಂದಿಗೂ ಹಿಂದಿರುಗಿ ನೋಡದೇ ಮುನ್ನಡೆದು ಸರಾಗ
ಎರಡನೆಯ ವರುಷಕ್ಕೆ ಕಾಲಿಡುವ ಹುಮ್ಮಸ್ಸಿನಲ್ಲಿದೆ ಅದೀಗ


ಹದಿಮೂರರ ಶುಕ್ರವಾರ ಅವಲಕ್ಷಣ ಎಂಬುದಕೇ ಬದಲಾಗಿ
ಸಾಗುತ್ತಿದೆ ಫೆಭ್ರವರಿ ೧೩ರ ಶುಕ್ರವಾರದಂದೇ ಆರಂಭವಾಗಿ


ಈ ಮನ ಸ್ಪಂದಿಸಿದ ದಿನಗಳಂದೆಲ್ಲಾ ಮಿಡಿದಿತ್ತು ಆಸುಮನ
ಪಿಸು ಮಾತುಗಳ ಜೊತೆ ಜೊತೆಗೆ ಸ್ಪಂದಿಸಿತ್ತು ಓದುಗ ಮನ


ಬೆನ್ನು ತಟ್ಟಿ ಹುರಿದುಂಬಿಸುವ ಓದುಗರು ಇರುವಂತೆಯೇ ಅಲ್ಲಿ
ಸರಿ ಕಾಣದ್ದನ್ನು ಸರಿ ಅಲ್ಲವೆಂದು ಟೀಕಿಸುವವರು ಜೊತೆಯಲ್ಲಿ


ಬರೆದೆಲ್ಲಾ ಪುಟಗಳು ಇದನ್ನೂ ಸೇರಿಸಿ ಇನ್ನೂರು ಆಗುತ್ತಿರುವಾಗ
ಭೇಟಿಗಳ ಸಂಖ್ಯೆ ಹದಿನೈದು ಸಾವಿರದ ಗಡಿ ತಲುಪಿದೆ ಅಲ್ಲೀಗ


ವರುಷ ಪೂರ್ತಿಯಾಗುತಿರುವಾಗ ನಾನು ಎಳೆಯ ಕಂದನಂತೆ
ಬೇಡುವೆನು ಪ್ರತ್ಯಕ್ಷ ದೇವರಾದ ಅಮ್ಮ ನನಗೂ ಹರಸುವಂತೆ


ಓದುಗರ ನಿರೀಕ್ಷೆಯ ಮೀರಿ ಬೆಳೆವ ಪ್ರಯತ್ನದಿ ಸದಾ ಇರುವೆ
ಓದುಗರಿಗೆ ಹೃತ್ಪೂರ್ವಕ ಧನ್ಯವಾದಗಳನ್ನು ಅರ್ಪಿಸುತಿರುವೆ


ಆಸುಮನಕ್ಕೆ ಇದೀಗ ನಿಜಕ್ಕೂ ವರುಷ ತುಂಬುತಿರುವ ಹರುಷ
ಇದು ಹೀಗೆಯೇ ಮಿಡಿಯುತಿರಲೆಂದು ಹರಸಿ ವರ್ಷಾನುವರುಷ!
******************************

Rating
No votes yet

Comments