ಆಸ್ತಿಕ ವಾದ ಮತ್ತು ನಾಸ್ತಿಕ ವಾದ
ಇದೇ ಮಾರ್ಚ್ ೧೬ ರಂದು ಬೆಂಗಳೂರಿನ ಯಲಹಂಕದ ಶ್ರೀ ರಾಘವೇಂದ್ರ ಮಠದಲ್ಲಿ ’ಆಸ್ತಿಕ ವಾದ’ ಮತ್ತು ’ನಾಸ್ತಿಕ ವಾದ’ ದ ಬಗ್ಗೆ ಚರ್ಚೆ ಏರ್ಪಡಿಸಲಾಗಿದೆ. ಆ ಕಾರ್ಯಕ್ರಮ ಸಂಜೆ ೪.೩೦ ರಿಂದ ೬.೩೦ರ ವರೆಗೆ ನಡೆಯಲಿದೆ. ಮಂತ್ರಾಲಯದ ಶ್ರೀ ಸುಷಮೀಂದ್ರ ತೀರ್ಥರ ಉಪಸ್ಥಿತಿಯಲ್ಲಿ ಈ ಕಾರ್ಯಕ್ರಮ ನಡೆಯಲಿದೆ. ಆಸಕ್ತ ವಿಚಾರ ವಾದಿಗಳು, ಪ್ರಗತಿಪರರು, ಬಲ ಪಂಥೀಯರು, ಬುಧ್ಧಿ ಜೀವಿಗಳು ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡು ತಮ್ಮ ಸಂದೇಹಗಳಿಗೆ ಪರಿಹಾರ ಕಂಡುಕೊಳ್ಳಲು ಪ್ರಯತ್ನಿಸಬಹುದು. ಆಸ್ತಿಕವಾದದ ಬಗ್ಗೆ ವಿಚಾರ ಮಂಡಿಸುವವರು ಪೂರ್ಣ ಪ್ರಜ್ಞ ವಿದ್ಯಾ ಪೀಠದ ಶ್ರೀ ರಾಮ ವಿಠಲಾಚಾರ್ಯರು ಹಾಗೂ ನಾಸ್ತಿಕವಾದದ ಬಗ್ಗೆ - ಶ್ರೀ ಶೇಷಗಿರಿ ಕೆ.ಎಂ ರವರು.
Rating