ಆಹ್ವಾನ
ನಿನ್ನ ನಯನಗಳೇನನ್ನೋ ಹುಡುಕುತ್ತಿವೆ
ನನ್ನ ಇರುವನ್ನೇನೋ
ನಿನ್ನ ಕಿವಿಗಳೇನನ್ನೋ ಆಲಿಸುತ್ತಿವೆ
ನನ್ನ ದನಿಯನ್ನೇನೋ
ನಿನ್ನ ಅಧರಗಳೇಕೋ ಆದುರುತ್ತಿವೆ
ನನ್ನ ಮುಗುಳ್ನಗೆಗೇನೋ
ನಿನ್ನ ಕೆನ್ನೆಗಳು ನಾಚಿ ಕೆಂಪಾಗಿವೆ
ನನ್ನ ಕಣ್ಸನ್ನೆಗೇನೋ
ನಿನ್ನ ಕೂದಲುಗಳು ನನ್ನೆಡೆಗೆ ಹಾರುತ್ತಿವೆ
ನನ್ನ ಆಹ್ವಾನದ ಸೂಚನೆಯನ್ನರಿತೇನೋ
ನಿನ್ನ ನಾಸಿಕವು ನಾಚಿ ಅರಳಿದೆ
ನನ್ನ ಕುಡಿನೋಟಕ್ಕೇನೋ
ನಿನ್ನ ಕೈಗಳು ನನ್ನೆಡೆಗೆ ಚಾಚುತ್ತಿವೆ
ನನ್ನ ಕೈಗೆ ಕೈಯನ್ನು ಬೆಸೆಯಲೇನೋ
ನಿನ್ನ ಪಾದಗಳು ಹೆಜ್ಜೆ ಹಾಕುತ್ತಿವೆ
ನನ್ನ ಬಳಿ ಸೇರಿ ಜೊತೆಯಾಗಿ ಸಾಗಲೇನೋ
Rating
Comments
ಉ: ಆಹ್ವಾನ
ಉ: ಆಹ್ವಾನ
In reply to ಉ: ಆಹ್ವಾನ by makara
ಉ: ಆಹ್ವಾನ: Some-ಶಯ...!!:()))
ಉ: ಆಹ್ವಾನ
ಉ: ಆಹ್ವಾನ
ಉ: ಆಹ್ವಾನ