ಆ ಕಡೆ - ಈ ಕಡೆ ...

ಆ ಕಡೆ - ಈ ಕಡೆ ...

ಆ ಕಡೆ - ಈ ಕಡೆ

ನಮ್ಮ ನುಡಿಯ ವೈವಿಧ್ಯತೆ ಬಗ್ಗೆ ಯೋಚಿಸುತ್ತಿದ್ದೆ. ಆಗ ನನ್ನ ಅನುಭವಕ್ಕೆ ಬಂದ, ಒಂದೇ ಅರ್ಥ ಕೊಡುವ(ಹೆಚ್ಚು-ಕಡಿಮೆ) ಬೇರೆ ಬೇರೆ ಪ್ರದೇಶಗಳಲ್ಲ್ಲಿ ಬಳಕೆಯಲ್ಲಿರುವ ಪದಗಳನ್ನು ಪಟ್ಟಿ ಮಾಡಿದ್ದೆ. 

ಆ ಕಡೆ - ಈ ಕಡೆ ( ಸಾಮಾನ್ಯವಾಗಿ ಉಪಯೋಗಿಸುವ ಪದ)
ಆ ಕಡಿ - ಈ ಕಡಿ (ಉತ್ತರ ಕರ್ನಾಟಕದ ಕಡೆ ಬಳಕೆಯಲ್ಲಿದೆ)
ಆ ಚೊರಿ - ಈ ಚೊರಿ (ನಂಜನಗೂಡು ತಾಲ್ಲೂಕಿನ ಹಳ್ಳಿಗಳಲ್ಲಿ ಬಳಕೆಯಿದೆ!!)
ಆ ತಪು  - ಈ ತಪು (ಚಾಮರಾಜನಗರ ಮತ್ತು ಗುಂಡ್ಲುಪೇಟೆಯ ತಾಲ್ಲೂಕಿನ ಹಳ್ಳಿಗಳಲ್ಲಿ ಬಳಕೆಯಿದೆ!!)
ಅಂಗಾಣ - ಇಂಗಾಣ (ಮಂಡ್ಯ ಜಿಲ್ಲೆಯ ಹಳ್ಳಿಗಳಲ್ಲಿ ಬಳಕೆಯಿಲ್ಲದೆ)
ಅಂಗಾಸು - ಇಂಗಾಸು (ಹಳ್ಳಿ ಕಡೆ ಬಳಸುತ್ತಾರೆ ..ಎಲ್ಲಿ ಅಂತ ಸರಿಯಾಗಿ ಗೊತ್ತಿಲ್ಲ)

ನಿಮಗೆ ತಿಳಿದಿರುವ ಇದಕ್ಕೆ ಸಮಾನಾರ್ಥ ಪದಗಳು ಇದ್ದರೆ ದಯವಿಟ್ಟು ತಿಳಿಸಿ

-ಜೈ ಕರ್ನಾಟಕ

Rating
No votes yet

Comments