ಆ ದಿನಗಳನೆಂತು ಮರೆಯಲಿ ನಾನು 6

ಆ ದಿನಗಳನೆಂತು ಮರೆಯಲಿ ನಾನು 6

ನಮ್ಮೂರ ಹೈದರೆಲ್ಲರೊಂದಾಗಿ ಹಿರಿಯರೊಡಗೂಡಿ

ಪೌರಾಣಿಕ, ಐತಿಹಾಸಿಕ ನಾಟಕದ ತಾಲಿಮೂ ನಡೆಸಿ

ರಂಗುರಂಗಿನ ಉಡುಗೆತೊಟ್ಟು ವಿವಿಧ ವೇಷ ಹಾಕಿ

ಶಸ್ತ್ರಾಸ್ತ್ರವ ಬಿಡದೆ ಧರಿಸೆಲ್ಲ ಪಾತ್ರವ ಧರೆಗೆ ಇಳಿಸಿ

ರಂಗಮಂಟಪವನೇರಿ ಕೋಳಿ ಕೂಗು ಕೇಳುವರೆಗೂ

ರಂಜಿಸಿದ ಆ ದಿನಗಳನೆಂತು ಮರೆಯಲಿ ನಾನು

ನಮ್ಮೂರ ಜಾತ್ರೆಗೆ ಸುತ್ತಿಪ್ಪತ್ತು ಹಳ್ಳಿಯ ಜನಸೇರಿ

ನಮ್ಮೂರ ದೇಗುಲಕೆ ಸುಣ್ಣಬಣ್ಣ ಕಾರಣೆಯ ಮಾಡಿ

ನಮ್ಮೂರ ಬೀದಿಗಳ ತಳಿರು ತೋರಣದಿಂ ಅಲಂಕರಿಸಿ

ನಮ್ಮೂರ ತೇರುಮನೆಯ ತೆರೆದು ತೇರನಂದಗೊಳಿಸಿ

ನಮ್ಮೂರ ಸಿರಿ ದೇವಿಯನಿನ್ನಿಲದಂತಲಂಕರಿಸಿ ಸಿಂಗರಿಸಿ

ನಮ್ಮೂರ ದೇವಿಯೊಡನೆ ಸುತ್ತೂರ ದೇವಿಯರು ತೇರನೇರೆ

ನಮ್ಮೂರ ಸುತ್ತಿನವರೆಲ್ಲಾ ಕೂಡಿ ಉಘೇ ಉಘೇ ಎಂದು ಕೂಗಿ

ತೇರನೆಳೆದು ಸಂಭ್ರಮಿಸಿದ ಆ ದಿನಗಳನೆಂತು ಮರೆಯಲಿ ನಾನು

ನಾನೆಂದಿಗೂ ಮರೆಯಲಾಗದ ಆ ದಿನ ಇಂದಿಲ್ಲವಲ್ಲ

ನಾ ಮರೆಯಲಾಗದಾ ದಿನ ಮತ್ತೊಮ್ಮೆ ಬರುವುದೇ?

ಬೇಗ ಬರಲಿ ಆ ಮಧುರ ಕ್ಷಣ

ನಾ ಮರೆಯಲಾಗದಾ ದಿನ.

Rating
No votes yet

Comments