ಆ ಭೂಮಿಯಿಂದ ಬರಲೊಂದು ಸೊಸೆ!

ಆ ಭೂಮಿಯಿಂದ ಬರಲೊಂದು ಸೊಸೆ!

ಆ ಭೂಮಿಯಿಂದ ಬರಲೊಂದು ಸೊಸೆ!

 

ಅಲ್ಲೆಲ್ಲೋ ಇನ್ನೂ ಒಂದು ಭೂಮಿ ಇದೆಯೆಂಬ ಸುದ್ದಿ ಇದೆ
ಇಲ್ಲಿರುವಂತೆ, ಮಳೆ, ಗಾಳಿ,ಬೆಳೆ ಅಲ್ಲೂ ಇದ್ದಿರುವಂತಿದೆ

ಇದ್ದಿರಬಹುದೇನೋ ಹಿಂದೆ ಅಲ್ಲೂ ಆದಮ್ಮ ಮತ್ತು ಈವ
ಅನುಭವಿಸಿರಬಹುದು ಅವರೀರ್ವರೂ ಕಾಮಜ್ವರದ ಕಾವ

ಹುಟ್ಟಿಕೊಂಡಿರಬಹುದು ನಮ್ಮ ನಿಮ್ಮಂತೆ ಅಲ್ಲಿ ಮಾನವರು
ರೈತ, ವೈದ್ಯ, ಸಾಹಿತಿ, ವಿಜ್ಞಾನಿ, ರಾಜಕೀಯ ನಾಯಕರು

ನನ್ನ ತಲೆಯಲಿಂದು ಹೊಸತೊಂದು ಯೋಚನೆ ಮೂಡುತಿದೆ
ಹೊಸ ಸಂಬಂಧ ಬೆಳೆಸುವತ್ತ ಎನ್ನ ಚಿತ್ತ ಮನ ಮಾಡುತಿದೆ

ರಾಹುಲ ಮದುವೆಯಾಗದೇ ಉಳಿದದ್ದು ಒಳ್ಳೆಯದೇ ಆಯ್ತು
ರಾಜೀವನಂತೇ ದೂರದೂರಿನ ಮದುಮಗಳ ತಂದರಾಯ್ತು

ರಾಜೀವನ ಹಿಂದೆ ಬಂದವಳು ಈ ದೇಶವನ್ನಾಳಲು ಕೂತಂತೆ
ಆ ಭೂಮಿಯಿಂದ ಬಂದವಳು ಈ ಭೂಮಿಯನೇ ಆಳಬಹುದಂತೆ
*************************
 

Rating
No votes yet

Comments