ಆ ಹುಡುಗ ಹುಡುಗಿ

ಆ ಹುಡುಗ ಹುಡುಗಿ

ಆ ಹುಡುಗ ಒಳ್ಳೆ ಸ್ಮಾರ್ಟ್ ಆದವ . ಆಗಿನಿಂದ ಹುಡುಕುತ್ತಲೇ ಇದ್ದ.


ಅವಳೂ ಅಷ್ಟೇ ಚಂದದ ಮುದ್ದಿನ ಬೆಡಗಿ . ಕಾಯುತ್ತಲೇ ಇದ್ದಳು.


ಇಬ್ಬರೂ ಜನುಮದ ಜೋಡಿಯಲ್ಲಿನ ಜೋಡಿಗಳು ಸಂತೆಯಲ್ಲಿ ಹುಡುಕುತ್ತಾ ಅಲೆಯುತ್ತಿದ್ದಂತೆ ಫೋರಮ್ ನಲ್ಲಿ ಅಲೆಯುತ್ತಿದ್ದರು


ಅವನಿಗೋ ನೋಡಲೇ ಬೇಕೆಂಬ ತವಕ . ಅವಳಿಗೋ ನೆನೆಸಿಕೊಂಡರೇ ಮೈ ಪುಳಕ . ಒಟ್ಟಿನಲ್ಲಿ  ಇಬ್ಬರ ಮನಸು ಮಂಗನಂತಾಗಿತ್ತು


ಅಲ್ಲಲ್ಲಿ ಹಾರುತ್ತಾ  ಅಲ್ಲಿ ಇಲ್ಲಿ ಹೋಗುತ್ತಾ  ಜೊತೆಗಿದ್ದ ಹೆತ್ತವರ ಕಣ್ಣು ತಪ್ಪಿಸುವ ಹುನ್ನಾರ ಬೇರೆ. ಎಲ್ಲಿ ನೋಡಿಬಿಟ್ಟಾರೋ  ಎಂಬ ಭಯ . ಬೇಡ ಎನ್ನುತ್ತ್ತಾರೇನೋ ಎಂಬ ಆತಂಕ ಅವರಿಬ್ಬರ ಕಣ್ಣುಗಳಲ್ಲಿ ಮನೆ ಮಾಡಿತ್ತು.


ಕೊನೆಗೂ


ಅವನ ಕಣ್ಣು ಅಲ್ಲಿ ಹಾಯಿತು. ಅವನು ನೋಡಿಯೇ ಬಿಟ್ಟ


ಅವಳೂ ಅಷ್ಟೆ ಅವಳ ಮನದಾಸೆಯನ್ನು ಇದಿರೇ ಕಂಡೇಬಿಟ್ಟಳು


ಅಪ್ಪನ ದೃಷ್ಟಿ ತಪ್ಪಿಸಿ ಅವಳು ಓಡಿ  ಬಂದಳು


ಅವನೂ ಅಷ್ಟೇ


ಇಬ್ಬರೂ ಎದಿರು ಬದಿರಾದರು


ಇಬ್ಬರ ಕಣ್ಣಲ್ಲೂ ಏನೋ ಆಸೆ


ಎಲ್ಲವನ್ನೂ ಒಮ್ಮೆಗೇ ಸವಿಯುವ  ಹೀರಿಬಿಡುವ ಕಾತುರ


ಅರಿವಿಲ್ಲದೆ ಅವರಿಬ್ಬರ ನಾಲಿಗೆ ತಮ್ಮ ತುಟಿಗಳನ್ನು ಸವರಿಕೊಂಡವು


ಇನ್ನು ತಡೆಯಲಾರೆವೆಂದುಕೊಂಡರು.


ತಮ್ಮ ಸರದಿಗಾಗಿ ಕಾಯುವ ವ್ಯವಧಾನವೇ ಇರಲಿಲ್ಲ


ಮೊದಲು ಅವಳೇ ಮಾತಾಡಿದಳು


"ಅಂಕಲ್ ನಂಗೊಂದು ಕೋನ್ ಐಸ್ ಕ್ರೀಮ್ ಕೊಡಿ" ಮುದ್ದು ಮುದ್ದಾಗಿ ಉಲಿದಳು


ಅವನೂ ಕೇಳಿದ


"ನಂಗೂ ಅಷ್ಟೇ ಅಂಕಲ್" ಬಾಲಭಾಷೆಯಲ್ಲಿ ಕೇಳಿದ.

Rating
No votes yet

Comments