"ಇಂಟರ್‌ನೆಟ್‌ನಲ್ಲಿ ನವಗ್ರಹ ಕಾಟ" ಮತ್ತಿತರ 2007 ರ ಪೂರ್ವಾರ್ಧದ 26 ಲೇಖನಗಳು

"ಇಂಟರ್‌ನೆಟ್‌ನಲ್ಲಿ ನವಗ್ರಹ ಕಾಟ" ಮತ್ತಿತರ 2007 ರ ಪೂರ್ವಾರ್ಧದ 26 ಲೇಖನಗಳು

ಇವು 2007 ರ ಜನವರಿಯಿಂದ ಜುಲೈ ವರೆಗೆ ಬರೆದಿರುವ ಅಂಕಣ ಲೇಖನಗಳು. ಇವುಗಳೊಂದಿಗೆ ನಾನು ಇಲ್ಲಿಯವರೆಗೆ ಅಂಕಣಕ್ಕೆ ಬರೆದಿರುವ ಎಲ್ಲಾ ಲೇಖನಗಳನ್ನೂ ಅಂತರ್ಜಾಲಕ್ಕೆ ಸೇರಿಸಿದಂತಾಯಿತು. ಇದೇ ಸಮಯದಲ್ಲಿ ಅಂಕಣಕ್ಕಲ್ಲದೆ ಪತ್ರಿಕೆಗೆ ಬರೆದ ಇತರ ಇನ್ನೂ ಒಂದೆರಡು ಲೇಖನಗಳಿವೆ. ನಿಧಾನಕ್ಕೆ ಸೇರಿಸಬೇಕು.

ಈಗ ಈ ಲೇಖನಗಳನ್ನು ಮತ್ತೆ ನೋಡುತ್ತಿದ್ದಾಗ ತೇಜಸ್ವಿ ಮತ್ತು ಭೈರಪ್ಪನವರು ಒಂದಲ್ಲ ಒಂದು ಸಂದರ್ಭದಲ್ಲಿ ಈ ಅವಧಿಯಲ್ಲಿ (ಅಂದರೆ 2007 ರ ಪೂರ್ವಾರ್ಧದಲ್ಲಿ) ನನಗೆ ಪ್ರಸ್ತುತರಾಗಿದ್ದು ಕಾಣಿಸುತ್ತದೆ. ತೇಜಸ್ವಿಯವರು ಸಾಯುವ ನಾಲ್ಕೈದು ದಿನಗಳ ಹಿಂದೆ ಬರೆದಿದ್ದ "ಆದರ್ಶವಾದಿಗಳೊಡನೆ ಒಂದು ಬೆಳಗ್ಗೆ..." ಲೇಖನದಲ್ಲೂ ಅವರಿದ್ದಾರೆ. ಅವರು ತೀರಿಕೊಂಡ ಸಂದರ್ಭದಲ್ಲಿ ಬರೆದದ್ದು "ಜೀವಂತ ರೋಲ್ ಮಾಡೆಲ್ ಇನ್ನಿಲ್ಲ...". ಹಾಗೆಯೆ, ರಾಮದಾಸರು ತೀರಿಕೊಂಡ ಸಂದರ್ಭದಲ್ಲಿ ಬರೆದ "ಕಾಲಕ್ಕಿಂತ ಮುಂದಿದ್ದ ದಾರ್ಶನಿಕರು..." ಲೇಖನದಲ್ಲೂ ನೆನಪಾಗಿದ್ದಾರೆ.

ಇನ್ನು ಭೈರಪ್ಪನವರೂ ಮೂರ್ನಾಲ್ಕು ಕಡೆ ಕಾಣಿಸಿಕೊಂಡಿರುವುದನ್ನು ಕಂಡಾಗ ನನಗೇನಾದರೂ ಭೈರಪ್ಪ-ಫೋಬಿಯ ಇತ್ತೆ ಎನ್ನುವ ಸಂದೇಹ ಬರುತ್ತದೆ. ಆದರೆ ಅದು ನನ್ನೊಬ್ಬನದೆ ಕತೆಯಲ್ಲ, ಹಾಗೂ ಆ ಸಮಯದಲ್ಲಿ ವರ್ತಮಾನಕ್ಕೆ ಪ್ರತಿಕ್ರಿಯಿಸುತ್ತಿದ್ದ ಕನ್ನಡ ಬರಹಗಾರರು ಈ ವಿಚಾರದಲ್ಲಿ ಪದೆಪದೆ ಭೈರಪ್ಪನವರನ್ನು (ಪರ-ವಿರೋಧ) ಚರ್ಚಿಸಿದ್ದಾರೆ ಎನ್ನಿಸುತ್ತದೆ. ಯಾಕೆಂದರೆ, ಅದು ಆವರಣದ ಮಾಯೆ ಆವರಿಸಿಕೊಂಡಿದ್ದ ಕಾಲ. ಭೈರಪ್ಪನವರನ್ನು ಪ್ರತ್ಯಕ್ಷ-ಪರೋಕ್ಷವಾಗಿ ನೆನಪಿಸಿಕೊಂಡಿರುವ ಲೇಖನಗಳು:

ಇನ್ನು, ಸಂಪದದ ಬಗ್ಗೆ:

"ಹಾಗೆಯೆ, ಸಂಪದ.ನೆಟ್ ಎಂಬ ಇನ್ನೊಂದು ವೆಬ್‌ಸೈಟ್ ಮತ್ತು ತಂಡದ ಬಗ್ಗೆಯೂ ಹೇಳಬೇಕು. ಇನ್ನೂ 25-30 ದಾಟದ ಚುರುಕು ಕನ್ನಡ ಹುಡುಗರ ಈ ಗುಂಪಿನಲ್ಲಿ ಅನೇಕ ಮೌಲ್ಯಯುತ ಬರಹಗಳು, ಚರ್ಚೆಗಳು, ಕಂಪ್ಯೂಟರ್‌ನಲ್ಲಿ ಕನ್ನಡ ತಂತ್ರಾಂಶ ಅಭಿವೃದ್ಧಿ ದಿಸೆಯಲ್ಲಿನ ಕೆಲಸಗಳು ನಡೆಯುತ್ತಿವೆ. ಕನ್ನಡ ಪಂಡಿತರಲ್ಲದ, ಮಡಿಮೈಲಿಗೆ ಇಲ್ಲದ, ಹೊಸವಿಚಾರಗಳಿಗೆ, ಪ್ರಯೋಗಗಳಿಗೆ ಮೈಯೊಡ್ಡಿಕೊಳ್ಳುವ ಇಂತಹ ಒಂದು ಸಕ್ರಿಯ ಗುಂಪು ಇದೆ ಎನ್ನುವುದೆ ಹೆಮ್ಮೆಯ ವಿಚಾರ. ... "

ಇದು "ಕಂಪ್ಯೂಟರ್‌ನಲ್ಲಿ ಕನ್ನಡ - ಯಾಹೂ!!!" ಲೇಖನದಲ್ಲಿ ಪ್ರಸ್ತಾಪವಾಗಿದೆ.

ಇತ್ತೀಚೆಗೆ ಗೆಳೆಯ ನರೇಂದ್ರ ಪೈ ಕತೆಗಾರ ವಿವೇಕ್ ಶಾನುಭೋಗರ ಆಡಿಯೊ ಸಂದರ್ಶನ ಮಾಡಿದ್ದ ಪಾಡ್‍ಕ್ಯಾಸ್ಟ್ ನೀವೆಲ್ಲ ಕೇಳಿರಬಹುದು. ಸಂಪದ ತಂಡದ ಇಂತಹ ಪ್ರಯತ್ನಗಳ ಬಗ್ಗೆ ಹೆಮ್ಮೆ ಪಟ್ಟುಕೊಂಡು

"http://www.sampada.net/podcasts ವೆಬ್‌ಸೈಟಿನಲ್ಲಿ ತೇಜಸ್ವಿ, ಕಂಬಾರ, ಅನಂತಮೂರ್ತಿ, ಜಿಎಸ್ಸೆಸ್, ನಿಸಾರ್ ಅಹ್ಮದ್ ಮತ್ತಿತರ ಕನ್ನಡ ಸಾಹಿತಿಗಳ ಬಿಚ್ಚುಮಾತಿನ ಸಂದರ್ಶನಗಳ ಧ್ವನಿಮುದ್ರಣಗಳೂ ಇವೆ. ಓ.ಎಲ್.ಎನ್. ಸ್ವಾಮಿ, ಉದಯವಾಣಿಯ ಇಸ್ಮಾಯಿಲ್ ಮುಂತಾದವರು ಮಾಡಿರುವ ಈ ಕೆಲಸ ನಿಜಕ್ಕೂ ಶ್ಲಾಘನೀಯ. ಇದನ್ನೆಲ್ಲ ಇವರು ಮಾಡಿರುವುದು ತಮ್ಮ ಬಿಡುವಿನ ವೇಳೆಯಲ್ಲಿ. ಇಂಟರ್‌ನೆಟ್‌ನಲ್ಲಿ ಸುಮ್ಮನೆ ಬಡಬಡಿಸುವ, ಸ್ವರತಿಯಲ್ಲಿ ಮುಳುಗಿರುವ ಅನೇಕ ಕನ್ನಡಿಗರು ಮಾತಿಗಿಂತ ಕೃತಿಯಲ್ಲಿ ತೊಡಗಿಕೊಳ್ಳಲು ಇವೆಲ್ಲ ಪ್ರೇರಣೆಯಾಗಬೇಕಿದೆ. ಅಲ್ಲವೆ?"

ಎಂದು ಬರೆದದ್ದು "ಪಿ.ಬಿ.ಎಸ್.: ಅಣ್ಣಾವ್ರಂತೆ ಅಮರ." ಲೇಖನದಲ್ಲಿ.

ಎಂದಿನಂತೆ, ಪ್ರತಿಕ್ರಿಯೆಗಳಿಗೆ ಮತ್ತು ವಿಮರ್ಶೆಗಳಿಗೆ ಮುಕ್ತ ಸ್ವಾಗತವಿದೆ.

ನಮಸ್ಕಾರ,
ರವಿ...

Rating
No votes yet