ಇಂಡಿಯಾ ಇಂದಿರಾ ಹಾಗು ತುರ್ತುಪರಿಸ್ಥಿತಿ

ಇಂಡಿಯಾ ಇಂದಿರಾ ಹಾಗು ತುರ್ತುಪರಿಸ್ಥಿತಿ

ಚಿತ್ರ

ಈಚೆಗೆ ಸಂಪದದಲ್ಲಿ ತುರ್ತುಪರಿಸ್ಥಿತಿ ದೇಶದಲ್ಲಿ ಜಾರಿಯಾದ ಬಗ್ಗೆ,  ಶ್ರೀಮತಿ ಇಂದಿರಾಗಾಂದಿಯವರ ನಡೆಸಿದ ಆಡಳಿತದ ಬಗ್ಗೆ  ಬರಹಗಳು ಬಂದವು ಅದನ್ನು ಓದುವಾಗ ನನಗೆ ನೆನಪಿದ್ದ ಹಲವು ವಿಷಯಗಳಿಗೆ ಹೋಲಿಕೆ ಮಾಡುತ್ತ ನೆಟ್ ನಲ್ಲಿ ಆ ಬಗ್ಗೆ ವಿವರ ಹುಡುಕಿದೆ. ದೇಶದ ಇತಿಹಾಸದಲ್ಲಿ ಇಂದಿರಾಗಾಂದಿಯವರದು ವರ್ಣಮಯ ವ್ಯಕ್ತಿತ್ವ. ಅವರ ಬದುಕು ಹಲವು ಏರಿಳಿಗಳಿಂದ ತುಂಬಿದ್ದು ಯಾವುದೇ ಸಂದರ್ಭದಲ್ಲಿಯೂ ಅದನ್ನು ತನಗೆ ಬೇಕಾದಂತೆ ಎದುರಿಸಿ ನಿಲ್ಲುವ ವ್ಯಕ್ತಿತ್ವದವರಾಗಿದ್ದರು. ಹಿಂದಿನ  ಹಿರಣಯ್ಯವನರ ನಾಟಕದ ಒಂದು ಸಾಲು ನೆನೆಯುವದಾಗಿದ್ದರೆ, ಭಾರತದ ಪಾರ್ಲಿಮೆಂಟಿನಲ್ಲಿ ಇದ್ದ ಒಬ್ಬರೆ ಒಬ್ಬ ಗಂಡಸು ಅಂದರೆ ಇಂದಿರಾಗಾಂದಿ. ಆದರೆ ಅವರ ಸಾರ್ವಜನಿಕ ಬದುಕಾಗಲಿ, ಸ್ವಂತ ಬದುಕಾಗಲಿ ಕಳಂಕರಹಿತವಾಗಿರಲಿಲ್ಲ.

೧೯೭೫ ರ ಸುಮಾರಿನಲ್ಲಿ ನಡೆದ ತುರ್ತುಪರ್ತಿಸ್ಥಿತಿ ಸಂದರ್ಭವನ್ನು ನೋಡುವದಾದರೆ, 

ಲೋಕಸಭೆಗೆ ಚುನಾಯಿತರಾಗಿದ್ದ ಇಂದಿರಾ ಗಾಂಧಿ ಆಯ್ಕೆಯನ್ನು ಚುನಾವಣಾ ದುರಾಚಾರದ ಹಿನ್ನೆಲೆಯಲ್ಲಿ ಅನೂರ್ಜಿತ ಎಂದು ಅಲಹಾಬಾದ್‌ ಉಚ್ಚ ನ್ಯಾಯಾಲಯ 1975ರ ಜೂನ್ 12ರಂದು ತೀರ್ಪು ನೀಡಿತು. ರಾಜ್ ನಾರಾಯಣ್‌ ಸಲ್ಲಿಸಿದ ಚುನಾವಣಾ ತಕರಾರು ಅರ್ಜಿಯಲ್ಲಿ ಚುನಾವಣಾ ಪ್ರಚಾರಕ್ಕಾಗಿ ಗಾಂಧಿ ಸರಕಾರೀ ಯಂತ್ರವನ್ನೂ ಹಾಗೂ ಸಂಪನ್ಮೂಲಗಳನ್ನೂ ಹೇಗೆ ದುರುಪಯೋಗ ಮಾಡಿಕೊಂಡಿದ್ದಾರೆ ಎಂಬುದನ್ನು ವಿವರವಾಗಿ ಎತ್ತಿ ತೋರಿಸಿದ್ದರು 

ವಿಚಾರಣೆಯ ಸಂದರ್ಭದಲ್ಲಿ ರಕ್ಷಣೆಗಾಗಿ ಸಾಕ್ಷಿಯನ್ನು ನೀಡಿದ ಗಾಂಧಿಯವರನ್ನು, ಅಪ್ರಾಮಾಣಿಕ ಚುನಾವಣಾ ತಂತ್ರದಲ್ಲಿ ತೊಡಗಿದ್ದಕ್ಕಾಗಿ, ಮಿತಿಮೀರಿದ ಚುನಾವಣಾ ಖರ್ಚು ಮಾಡಿದ್ದಕ್ಕಾಗಿ ಮತ್ತು ಪಕ್ಷದ ಉದ್ಧೇಶಕ್ಕಾಗಿ ಸರಕಾರೀ ಯಂತ್ರ ಮತ್ತು ಅಧಿಕಾರಿಗಳನ್ನು ಬಳಸಿಕೊಂಡಿದ್ದಕ್ಕಾಗಿ ತಪ್ಪಿತಸ್ಱರೆಂದು ತೀರ್ಮಾನಿಸಲಾಯಿತು. ಇಂದಿರಾ ವಿರುದ್ಧ ಮಾಡಲಾದ ಲಂಚಗಾರಿಕೆಯ ಗುರುತರ ಆರೋಪಗಳನ್ನು ನ್ಯಾಯಾಧೀಶರು ತಳ್ಳಿಹಾಕಿದರು.

ಆದರೆ ಗಾಂಧಿಯವರು ರಾಜಿನಾಮೆ ನೀಡುವಂತೆ ಮಾಡಿದ ಒತ್ತಾಯಗಳನ್ನು ತಳ್ಳಿಹಾಕಿದರು ಮತ್ತು ಸರ್ವೋಚ್ಚ ನ್ಯಾಯಾಲಕ್ಕೆ ಮೇಲ್ಮನವಿ ಸಲ್ಲಿಸುವ ತಮ್ಮ ಯೋಜನೆಯನ್ನು ಪ್ರಕಟಿಸಿದರು 

  ಕಾನೂನಿನ ಮೂಲಕ ಹೋರಾಡಬೇಕಿದ್ದ ಗಾಂದಿಯವರು, ಪ್ರಜಾಪ್ರಭುತ್ವಕ್ಕೆ ಭಂಗತರುವ ಒಳಸಂಚು ನಡೀತಿದೆ ಎಂಬ ಸಬೂಬು ನೀಡಿದ ಇಂದಿರಾ ರಾಷ್ಟ್ರದ ಮೇಲೆ ವಿವಾದಾತ್ಮಕ ತುರ್ತು ಪರಿಸ್ಥಿತಿ ಹೇರಿದರು. 22 MPಗಳನ್ನೂ ಒಳಗೊಂಡಂತೆ ಸಾವಿರಾರು ಮಂದಿ ಬಂಧನಕ್ಕೀಡಾದರು ಮತ್ತು ಭಾರತೀಯ ಸ್ವತಂತ್ರ ಮಾಧ್ಯಮದ ಮೇಲೆ ಅಂಕುಶ ವಿಧಿಸಲಾಯಿತು.

  ಈ ಸಂದರ್ಭವನ್ನೇ ರಾಜಕೀಯ ಬಂಡವಾಳ ಮಾಡಿಕೊಂಡ ಪ್ರತಿ ಪಕ್ಷಗಳು ಮತ್ತು ಅವರ ಬೆಂಬಲಿಗರು ಒಟ್ಟಾಗಿ ಈ ಘೋಷಣೆಯ ವಿರುದ್ಧ ಬೃಹತ್ ಪ್ರತಿಭಟನೆ ನಡೆಸಿ ಅವರ ರಾಜೀನಾಮೆಗೆ ಆಗ್ರಹಿಸಿದವು. ಈ ಪ್ರತಿಭಟನೆಯಲ್ಲಿ ಬೇರೆಬೇರೆ ಸಂಘ ಸಂಸ್ಥೆಗಳು ಪಾಲ್ಗೊಂಡ ಕಾರಣ ಅನೇಕ ರಾಜ್ಯಗಳಲ್ಲಿ ಜನಜೀವನ ಅಸ್ತವ್ಯಸ್ತಗೊಂಡಿತು. ನಿರಾಯುಧ ಜನಜಂಗುಳಿಯ ಮೇಲೆ ಗುಂಡುಹಾರಿಸುವ ಆದೇಶಗಳನ್ನು ಧಿಕ್ಕರಿಸುವಂತೆ J.P. ನಾರಾಯಣ್ ಪೋಲೀಸರಿಗೆ ಕರೆ ನೀಡಿದ್ದರಿಂದ ಆಂದೋಲನ ಮತ್ತಷ್ಟು ಬಲಯುತವಾಯಿತು. 

ಆಂದೋಲನದಲ್ಲಿ ಭಾಗವಹಿಸಿದ ಎದುರಾಳಿಗಳನ್ನು ಬಂಧಿಸುವಂತೆ ಗಾಂಧಿ ಆದೇಶ ನೀಡುವ ಮೂಲಕ ಸಹಜ ವಾತಾವರಣ ಪುನಃಸ್ಥಾಪಿಸಲು ಮುಂದಾದರು. ಅಲಹಾಬಾದ್ ಉಚ್ಚ ನ್ಯಾಯಾಲಯದ ತೀರ್ಪು ಹೊರಬಿದ್ದ ನಂತರ ಕಾನೂನು ಕುಸಿತ ಮತ್ತು ಅವ್ಯವಸ್ಥೆ ಭುಗಿಲೆದ್ದಿದ್ದನ್ನು ಗಮನಿಸಿದ ಅವರ ಸಚಿವ ಸಂಪುಟ ಮತ್ತು ಸರಕಾರವು ತುರ್ತು ಪರಿಸ್ಥಿತಿ ಘೋಷಿಸುವಂತೆ ರಾಷ್ಟಾಧ್ಯಕ್ಷ ಫಕ್ರುದ್ದೀನ್ ಆಲಿ ಅಹಮದ್‌ ಅವರಿಗೆ ಶಿಫಾರಸು ಮಾಡಿತು.ತತ್ಪರಿಣಾಮವಾಗಿ, ಅಹಮದ್‌ರವರು ಆಂತರಿಕ ಅವ್ಯವಸ್ಥತೆಯ ಕಾರಣ ಒಡ್ಡಿ ಸಂವಿಧಾನದ 352ರ ನಿಬಂದನೆಗೆ ಅನುಗುಣವಾಗಿ 1975ರ ಜೂನ್ 26ರಂದು ರಾಷ್ಟ್ರದ ಮೇಲೆ ತುರ್ತು ಪರಿಸ್ಥಿತಿ ಹೇರಿದರು.

ಕೆಲವೇ ತಿಂಗಳುಗಳಲ್ಲಿ, ವಿರೋಧ ಪಕ್ಷಗಳು ಆಡಳಿತ ನಡೆಸುತ್ತಿದ್ದ ಗುಜರಾತ್ ಮತ್ತು ತಮಿಳುನಾಡು ಎರಡು ರಾಜ್ಯಗಳಲ್ಲಿ ರಾಷ್ಟ್ರಪತಿ ಆಡಳಿತವನ್ನು ಘೋಷಿಸಲಾಯಿತು. ಅಷ್ಟೆ ಅಲ್ಲ  ಕಾಂಗ್ರೆ ಸ್ ರಾಜ್ಯಬಾರ ನಡೆಸುತ್ತಿದ್ದ ರಾಜ್ಯಗಳಲ್ಲು , ತನ್ನಗೆ ಒಲ್ಲದ ಮುಖ್ಯಮಂತ್ರಿಗಳನ್ನು ಕಿತ್ತೊಗೆಯಲಾಯಿತು, ತನಗೆ ನಿಷ್ಟರಾದ ಮುಖ್ಯಮಂತ್ರಿಗಳನ್ನು  ಮಾತ್ರ ಉಳಿಸಿಕೊಳ್ಳಲಾಯಿತು.

ಸ್ವತಃ ತಮಗೆ ವಿಶೇಷ ಅಧಿಕಾರಗಳನ್ನು ನೀಡುವಂತೆ ತುರ್ತುಪರಿಸ್ಥಿತಿ ನಿಯಮಾವಳಿಯನ್ನು ಇಂದಿರಾ ಪರಿವರ್ತಿಸಿದರು.

ತುರ್ತು ಪರಿಸ್ಥಿತಿಯನ್ನು ಎರಡು ಬಾರಿ ವಿಸ್ತರಿಸಿದ ಇಂದಿರಾ ಗಾಂಧಿ ತಮ್ಮ ಆಡಳಿತವನ್ನು ಸಮರ್ಥಿಸಲು ಮತದಾರರಿಗೆ ಒಂದು ಅವಕಾಶ ನೀಡುವುದಕ್ಕಾಗಿ 1977ರಲ್ಲಿ ಚುನಾವಣೆ ಘೋಷಿಸಿದರು. ಅತಿಯಾದ ನಿಯಂತ್ರಣಕ್ಕೆ ಒಳಪಟ್ಟ ಪತ್ರಿಕಾ ಲೇಖನಗಳನ್ನು ಓದಿದ ಇಂದಿರಾ ಇದು ತಮ್ಮ ಜನಪ್ರಿಯತೆಯ ಪರಾಕಾಷ್ಠೆ ಎಂದು ತಪ್ಪಾಗಿ ಗ್ರಹಿಸಿದರು. ಇವರ ಪ್ರತಿಯೊಂದು ಹೆಜ್ಜೆಯನ್ನೂ ಜನತಾ ಪಕ್ಷ ವಿರೋಧಿಸಿತು. ಜಯ ಪ್ರಕಾಶ್ ನಾರಾಯಣ್‌‌ರನ್ನು ತಮ್ಮ ಆಧ್ಯಾತ್ಮಿಕ ಮಾರ್ಗದರ್ಶಿಯಾಗಿ ಇಟ್ಟುಕೊಂಡು, ಇಂದಿರಾರ ದೀರ್ಘಕಾಲೀನ ದ್ವೇಷಿಯಾದ ದೇಸಾಯಿ ನೇತೃತ್ವದ ಜನತಾ ಪಕ್ಷವು "ಪ್ರಜಾಪ್ರಭುತ್ವ ಮತ್ತು ನಿರಂಕುಶಾಧಿಕಾರ" ಎರಡರ ನಡುವಿನ ಆಯ್ಕೆಗೆ ಈ ಚುನಾವಣೆ ಕಟ್ಟ ಕಡೆಯ ಅವಕಾಶ ಎಂದು ಸಾರಿತು. ಇಂದಿರಾರ ಕಾಂಗ್ರೆಸ್ ಪಕ್ಷ ಭಾರೀ ಸೋಲುಂಡಿತು. 

ಆದರೆ ಇಂದಿರಾ ಮೇಲಿನ ದ್ವೇಶವೊಂದನ್ನೆ ಸಾಮಾನ್ಯ ವಿಷಯವಾಗಿಟ್ಟುಕೊಂಡು ಗೆದ್ದ ಜನತಾಪಕ್ಷ ,  ಒಗ್ಗಟ್ಟಾಗಿ ಆಡಳಿತ ನಡೇಸಲು ಸೋತು ಹೋಯಿತು. ಗೆದ್ದಷ್ಟೆ ವೇಗವಾಗಿ ಪಕ್ಷವು ಬಿದ್ದುಹೋಯಿತು ಅನ್ನುವುದು ದುರಂತ. 

ನಂತರ ಇಂದಿರಾಗಾಂದಿಯವರು ಪುನಃ ಆರಿಸಿ ಬಂದಿದ್ದು , ಮತ್ತೆ ಪ್ರಧಾನಿಯಾದುದ್ದು, ಪಂಜಾಬಿನ ಬ್ಲೂಸ್ಟಾರ್ ಕಾರ್ಯಚಣೆಯ ಕಾರಣವಾಗಿ ಅವರು ಕೊಲೆಯಾಗಿದ್ದು ಇತಿಹಾಸ.  

ಹಾಗೆ ಬಡವರಿಗಾಗಿ ಎಂದು ಅವರು ರೂಪಿಸಿದ ಇಪ್ಪತು ಅಂಶದ ಕಾರ್ಯಕ್ರಮಗಳು ಅವರಿಗೆ ಸಾಕಷ್ಟು ಜನಪ್ರಿಯತೆ ಕೊಟ್ಟಿತ್ತು. ದೆಹಲಿಯ ಇಮಾಂ ರವರ ಜೊತೆ ಚರ್ಚಿಸಿ ೧೦ ಅಂಶದ ಕಾರ್ಯಕ್ರಮ ರೂಪಿಸಿ ಮುಸ್ಲೀಂ ಮತಗಳನ್ನು ಕಾಂಗ್ರೆಸ್ ಗೆ ದೊರಕಿಸಿಕೊಡುವದರಲ್ಲಿ ಅವರು ಸಫಲರಾಗಿದ್ದರು

ಅವರ ವ್ಯಯುಕ್ತಿಕ ಬದುಕು ಸಹ ಹಲವೂ ಏರಿಳಿತಕ್ಕೆ ಒಳಪಟ್ಟಿತ್ತು, ಸಂಜಯಗಾಂದಿ ಹುಟ್ಟಿದ ನಂತರ ಪತಿಯಿಂದ ಬೇರೆಯಾಗಿದ್ದರು ಅನ್ನುತ್ತದೆ ಇತಿಹಾಸ.  ನೆನಪಿರುವಂತೆ ಅವರ ಬದುಕನ್ನು ಆದರಿಸಿ ಒಂದು ಸಿನಿಮಾ ಸಹ ಬಂದಿತ್ತು ಹಿಂದಿಯಲ್ಲಿ ಹೆಸರು 'ಆಂಧೀ'.

ಪ್ರಧಾನಿ ಲಾಲ್ ಬಹುದ್ದೂರ್ ಶಾಸ್ತ್ರಿಯವರು ಅನುಮಾನಾಸ್ತ್ಪದವಾಗಿ ಕೊಲೆಯಾದ ಹಿನ್ನಲೆಯಲ್ಲಿ ಕೆ ಕಾಮರಾಜ್ ರವರ ಸಹಾಯದಿಂದ ಪ್ರದಾನಿಯಾದ ಶ್ರೀಮತಿ ಇಂದಿರಾಗಾಂದಿಯವರು ಸುಧೀರ್ಘಕಾಲ ಭಾರತವನ್ನು ಆಳಿದರು. ಅವರ ನಂತರ ಅವರಷ್ಟು ಪ್ರಭಾವಿ ರಾಜಕಾರಣಿ ಕಾಂಗ್ರೆಸನಲ್ಲಿ ಬರಲಿಲ್ಲವೆಂಬುದು ಸತ್ಯ. 

ಆದಾರ : 
http://kn.wikipedia.org/wiki/%E0%B2%87%E0%B2%82%E0%B2%A6%E0%B2%BF%E0%B2%...

http://en.wikipedia.org/wiki/Indira_Gandhi 

http://en.wikipedia.org/wiki/State_of_Uttar_Pradesh_v._Raj_Narain

Rating
No votes yet

Comments

Submitted by partha1059 Sun, 03/09/2014 - 10:53

ಮರೆತ‌ ಒಂದು ವಿಷಯ‌ : ಚುನಾವಣೆಯಲ್ಲಿ ಇಂದಿರಾ ಸೋತ‌ ನಂತರ‌ ಜನತಾ ಸರ್ಕಾರ‌ ಅವರನ್ನು ಬಂದಿಸಿತು. ಆದರೆ ಕೋರ್ಟಿನಲ್ಲಿ ಅವರ‌ ವಿರುದ್ದ‌ ನಿಲ್ಲ‌ ಬಹುದಾದ‌ ಯಾವುದೆ ಕಾರಣ‌ ಕೊಟ್ಟಿರಲಿಲ್ಲ‌. ಅವರು ಅರೆಸ್ಟ್ ಆಗಿದ್ದು ಜನರ‌ ಕರುಣೆ ಅವರತ್ತ‌ ಹರಿಯುವಂತಾಯಿತು. ಜನತಾಪಾರ್ಟಿಯ‌ ಅತಂತ್ರ‌ ಸರ್ಕಾರ‌ ಹಾಗು ಇಂದಿರಾ ಬಗೆಗಿನ‌ ಕರುಣೆ ಅವರು ಮತ್ತೊಮ್ಮೆ ಗೆದ್ದುಬರುವಂತಾಯಿತು. ಕರ್ನಾಟಕದ‌ ಚಿಕ್ಕಮಗಳೂರು ಒಮ್ಮೆ ಇಂದಿರಾರವರಿಗೆ ನೆಲೆ ಒದಗಿಸಿ ಗೆಲ್ಲಿಸಿತು.
‍ _ ಪಾರ್ಥಸಾರಥಿ

Submitted by kavinagaraj Sun, 03/09/2014 - 13:22

ಒಂದು ಸಣ್ಣ ತಿದ್ದುಪಡಿ: ಆಗ ಹೋರಾಟವೆಂದರೆ, ಪ್ರತಿಭಟನೆ ಎಂದರೆ ಈಗಿನಂತೆ ಸುಲಭ ಮತ್ತು ದಾರಿ ತಪ್ಪಿಸುವುದಾಗಿರಲಿಲ್ಲ. ಒಂದು ರೀತಿಯ ಮಿಲಿಟರಿ ಆಡಳಿತವಿದ್ದಂತೆ ಇದ್ದ ಸ್ಥಿತಿಯಲ್ಲಿ ಸಾಮಾನ್ಯ ಜನರು ಮಾತನಾಡಲೂ ಅಂಜುತ್ತಿದ್ದರು. ವಿರೋಧ ಪಕ್ಷಗಳು ಅಕ್ಷರಶಃ ಮೂಲೆ ಸೇರಿದ್ದವು. ಹೋರಾಡುವ ಕೆಚ್ಚು ಅವುಗಳಲ್ಲಿ ಇರಲಿಲ್ಲ. ಲೋಕ ಸಂಘರ್ಷ ಸಮಿತಿ ಹೆಸರಿನಲ್ಲಿ ರಾಜಕೀಯೇತರ ಸಂಘಟನೆ ಜಯಪ್ರಕಾಶ ನಾರಾಯಣರ ನೇತೃತ್ವದಲ್ಲಿ ರಚಿತಗೊಂಡು ನಡೆದ ಹೋರಾಟಕ್ಕೆ ಬೆನ್ನೆಲುಬು ಆರೆಸ್ಸೆಸ್ ಆಗಿತ್ತು. ತುರ್ತು ಪರಿಸ್ಥಿತಿ ಹಿಂತೆಗೆತದ ನಂತರ ಬುದ್ಧಿ ಕಲಿತ ವಿರೋಧ ಪಕ್ಷಗಳು ಒಂದಾಗಿ ಕಾಂಗ್ರೆಸ್ಸನ್ನು ಮಣಿಸಿದ್ದವು. ಆಗ ಕೇವಲ ನಾಲ್ಕೈದು ತರುಣರು ತುರ್ತು ಪರಿಸ್ಥಿತಿ ವಿರೋಧಿಸಿ ಸತ್ಯಾಗ್ರಹ ಮಾಡಿದರೆಂದರೆ ಅದೊಂದು ಸಾಹಸವೆಂದೇ ಹೇಳಬೇಕಾಗಿತ್ತು.

Submitted by kavinagaraj Sun, 03/09/2014 - 13:24

In reply to by kavinagaraj

ಇಂದಿರಾಗಾಂಧಿಯವರ ವಿರುದ್ಧ ತೀರ್ಪಿತ್ತಿದ್ದ ನ್ಯಾಯಾಧೀಶರು ನಿಗೂಢ ರೀತಿಯಲ್ಲಿ ಅಪಘಾತದಲ್ಲಿ ಸಾವನ್ನಪ್ಪಿದ್ದರು.

Submitted by partha1059 Sun, 03/09/2014 - 17:52

ನಾಗರಾಜ್ ಸರ್ , ಹಾಗು ಗುಣಾಶೇಕರ‌ ಮೂರ್ತಿಯವರಿಗೆ ನಮಸ್ಕಾರಗಳು.
ಭಾರತದಲ್ಲಿ ತುರ್ತುಪರಿಸ್ಥಿತಿ ಎನ್ನುವುದು ಒಂದು ಕರಾಳ‌ ಅಧ್ಯಾಯ‌ ಆಗಿತ್ತೆನುವುದು ಸತ್ಯ‌. ಭಾರತದಲ್ಲಿ ಪ್ರಜಾಪ್ರಭುತ್ವವೆ ಅಘಾತಕ್ಕೆ ಒಳಗಾಗಿದ್ದ‌ ಸನ್ನಿವೇಶ‌ ಅದು. ಪ್ರಜಾಪ್ರಭುತ್ವದ‌ ಉಳಿವಿಗಾಗಿ ಹೋರಾಡಿದ‌ ಕಾಲವದು, ಈಗ‌ ದಿನ‌ ನಿತ್ಯವೂ ಅರ್ಭಟಿಸುವ‌ ಮಾಧ್ಯಮಗಳು ಆಗ‌ ಮೌನವಾಗಿದ್ದವು ಅನ್ನುವದನ್ನು ಗಮನಿಸಬೇಕು. ಆದರೆ ಭಾರತದ‌ ಸಾಮಾನ್ಯ‌ ಪ್ರಜೆ , ಎಂದಿಗೂ ತನ್ನ‌ ನ್ಯಾಯ‌ ನಿರ್ಣಯವನ್ನು ಸರಿಯಾಗಿಯೆ ಮಾಡಿದ್ದಾನೆ. ತುರ್ತುಪರಿಸ್ಥಿತಿ ವಿದಿಸಿದ‌ ಇಂದಿರಾರವರನ್ನು ತಿರಸ್ಕರಿಸಿದ‌ ನಂತರ‌ ಅವರಿಗೆ ತಪ್ಪು ತಿದ್ದಿಕೊಳ್ಳಲು ಅವಕಾಶನೀಡಿ , ತನ್ನ‌ ತಪ್ಪನ್ನು ಒಪ್ಪಿ ಕ್ಷಮಿಸಿ ಎಂದು ಕೇಳಿದ‌ ಇಂದಿರಾರವರನ್ನು ಮತ್ತೆ ಗೆಲ್ಲಿಸಿದ‌, ಹಾಗೆ ಇಂದಿರರನ್ನು ವಿರೋದಿಸಿ ಅಧಿಕಾರಕ್ಕೆ ಬಂದ‌ ಜನತಾಪಕ್ಷ‌ ತನ್ನ‌ ಕರ್ತ್ಯವ್ಯವನ್ನು ಮರೆತು ಸ್ವಾರ್ಥಸಾಧನೆಗೆ ನಿಂತಾಗ‌ ಮತ್ತೆ ಅವರನ್ನು ತಿರಸ್ಕರಿಸಿದ‌. ಅಲ್ಲವೆ ?
ಭಾರತದ‌ ಪ್ರಜೆಗಳಲ್ಲಿ ಪ್ರಜಾಪ್ರಭುತ್ವದ‌ ತತ್ವಗಳು ಆಳವಾಗಿ ಬೇರೂರಿವೆ. ಒಂದು ಮಾತು ಸತ್ಯ‌ ರಾಜಕಾರಣಿಗಳು ಪ್ರಜೆಗಳಿಗೆ ಕೈಕೊಟ್ಟಿದ್ದಾರೆ ಮೋಸ‌ ಮಾಡಿದ್ದಾರೆ, ಆದರೆ ಪ್ರಜೆಗಳು ಎಂದಿಗೂ ರಾಜಕಾರಣಿಗಳನ್ನು ಕೈಬಿಟ್ಟಿಲ್ಲ‌.
‍_ ಪಾರ್ಥಸಾರಥಿ

Submitted by partha1059 Sun, 03/09/2014 - 18:38

ಮತ್ತೊಂದು ವಿಚಿತ್ರ ಪ್ರತಿಕ್ರಿಯೆ ಓದಿದೆ ಆಗ ಲಾಲ್ ಬಹುದ್ದೂರ್ ಶಾಸ್ತ್ರಿಯವರ ಮರಣದ ನಂತರ ಕಾಮರಾಜ್ ರವರಿಗೆ ಪ್ರದಾನಿಯಾಗಲು ಕೆಲವರು ಕೇಳಿದರು ಆದರೆ ಅವರಿ ನೀಡಿದ ಉತ್ತರ , ಭಾರತದ ಪ್ರಧಾನಿಯಾಗಲು ಹಿಂದಿ ಅಥವ ಇಂಗ್ಲೀಷ್ ಬಾಷೆ ಗೊತ್ತಿರಬೇಕೆ ನನಗೆ ಹಿಂದಿ ಹಾಗು ಇಂಗ್ಲೀಷ್ ಎರಡೂ ಬರಲ್ಲ ಹಾಗಾಗಿ ಪ್ರದಾನಿಯಾಗಲ್ಲ !!!