ಇಂದಿನ ಯೋಗ ಸುಬಯೋಗ ಇಂದಿನ ಕರಣ ಸುಬಕರಣ

ಇಂದಿನ ಯೋಗ ಸುಬಯೋಗ ಇಂದಿನ ಕರಣ ಸುಬಕರಣ

ಅವರವರ ಭಾವಕ್ಕೆ ಅವರವರ ಭಕ್ತಿಗೆ ಎನ್ನುವುದು ಹಳೆಯ ಮಾತಾಯಿತು. ಈಗ ಏನಿದ್ದರೂ, ಹಳೆಯದನ್ನು ಮರೆತು ಕನ್ನಡಕ್ಕೆ ಏನು ಬೇಕು ಎನ್ನುವುದನ್ನು ನೋಡುವ ಸಮಯ. ಕ್ಷಮಿಸಿ. ಸಮಯ ಎಂಬುದು ಸಂಸ್ಕೃತ ಪದ! ಇದಂತೂ ಉಪಯೋಗಿಸಲೇಬಾರದಲ್ಲ! ಸರಿ. ಹಾಗಾದರೆ ಹೀಗೆ ಹೇಳಲೇ? ಇದು ಕನ್ನಡಕ್ಕೆ ಏನುಬೇಕು ಎಂಬುದನ್ನು ನೋಡುವ ಕಾಲ. ಅಯ್ಯೋ! ಇದೂ ಉಪಯೋಗಿಸಬಾರದ ಪದ. ಮತ್ತಿನ್ನೇನು ಹೇಳಲಿ? ಇದು ಕನ್ನಡಕ್ಕೆ ಏನುಬೇಕು ಎಂಬುದನ್ನು ನೋಡುವ ಟೈಮು. ಈಗ ಸರಿಯಾಯಿತು. ಎಷ್ಟೇ ಎಂದರೂ ಕನ್ನಡಕ್ಕೆ ಪ್ರಪಂಚದಲ್ಲೆಲ್ಲ ಸುತ್ತಾಡುವ ಇಂಗ್ಲಿಷ್ ಭಾಷೆಯನ್ನು ಬೆರೆಸಿದರೆ ಸರಿಹೋಗಬಲ್ಲುದೇ ಹೊರತು, ನಮ್ಮ ನಾಡಿನದ್ದೇ, ನಮ್ಮ ಜೊತೆಗೇ ನಡೆದು ಬಂದಿರುವ, ನಮ್ಮ ಬರವಣಿಗೆಗೆ ತನ್ನ ಸ್ವಲ್ಪ ಕಾಣಿಕೆಯನ್ನು ಕೊಟ್ಟಿರುವ (ಹೆಸರು ಹೇಳಬಾರದ) ಸತ್ತ ಭಾಷೆ ಸರಿಯಾದೀತೇ ? ಅಪರಾಧ ಅಪರಾಧ - ಮನ್ನಿಸಿ ಮನ್ನಿಸಿ - ತಪ್ಪು ತಪ್ಪು. ನನ್ನ ಹಳೆ ಒಡನಾಡಿತನದಿಂದ ಬರಬಾರದ ಮಾತು ಹೊರಬರುತ್ತಿದೆ.

ಈಗ ಮೊದಲು ಬೇಕಾದ್ದು ನಮ್ಮ ನುಡಿದ ಸುಧಾರಣೆ. ಅದಕ್ಕಾಗಿ ನಾವು ಮೊದಲಿಗೆ ಹಕಾರವನ್ನು ಹೊರಗೆಸೆಯೋಣ. ಪಕ್ಕದ ಮನೆಯ ದ್ರಾವಿಡರಿಗೆ ಬೇಕಾಗದ ಈ ಹಕಾರ ನಮಗೇಕೆ? ನಾನು ಏನು ಏಳಲು ಬಯಸಿದ್ದೇನೆ ಎಂದು ತಿಳಿಯಿತು ಎಂದು ಭಾವಿಸಿರುವೆ. ಗೊತ್ತಾಗದಿದ್ದರೂ ಪರವಾಗಿಲ್ಲ. ಆಡು ಅಳೆಯದಾದರೇನು? ಭಾವ ನವನವೀನ. ಇಷ್ಟವಾಗಲಿಲ್ಲವಾದರೆ, ಪಾಡು ಪಳೆಯದಾದರೇನು? ಭಾವನವನವೀನ ಎನ್ನಿ. ಆಡ್ತಾ ಆಡ್ತಾ ರಾಗ ನರಳ್ತಾ ನರಳ್ತಾ ರೋಗ ಅಂತ ಗಾದೇನೇ ಇಲ್ಲವಾ? ಗಾದೆ ಅಂದಾಗ ನೆನಪಿಗೆ ಬಂದಾಗ ಒಳೀತು ನೋಡಿ ಇನ್ನೊಂದು ಗಾದೆ. ಅನುಮಂತನೇ ಅಗ್ಗ ತಿನ್ನೋವಾಗ ಪೂಜಾರಿ ಶಾವಿಗೆ ಬೇಡಿದನಂತೆ. ಇಂತ ಯಾರೋ ಕೆಲಸಕ್ಕೆ ಬಾರದ ಪೂಜಾರಿಗಳು ಮಂತ್ರ ಏಳಕ್ಕೆ ಬೆಳೆಸಿರೋ ಬೇರೆ ಭಾಷೆಯ ಮಆ ಪ್ರಾಣಗಳು, ಶಕಾರಗಳು ನಮಗ್ಯಾಕೆ ಅಂತೀರಾ? ನಾವೇನು ವಸಂತಸೇನೆ ನಾಟಕ ಮಾಡಬೇಕಾ? ಸರಿ ಮತ್ತೆ. ಮನಸ್ಸು ಅಗುರ ಆಗಬೇಕಾದ್ರೆ, ಮೊದಲು ಬೇಡದೇ ಇರೋ ಬಾರನ ಕೈ ಬಿಡಬೇಕು. ಅಲ್ಲವೇ? ಬಾರ್ ಸೋಪ್ ಅಲ್ಲ ಸ್ವಾಮೀ, ಬಾರ ಬಾರ. ನಾನು ಏಳ್ತಾ ಇರೋದು ಗೊತ್ತಾಗಿದೆ ಅಂದ್ಕೋತೀನಿ. ಕರೆ ಏಳ್ಬೇಕು ಅಂದರೆ, ಈಗ ಮಾತಾಡ್ತಿರೋ ಆಗೆ, ನನ್ನ ಅಳೆ ರೂಂ ಮೇಟ್ ಒಬ್ಬ ನೆನೆಪಿಗೆ ಬಂದ. ಅರ್ಸಕುಮಾರ ಅಂತ ಅವನ ಎಸರು. ನಮ್ಮೂರು ಆಸನ. ಆಗಾಗಿ ನಮ್ಮಲ್ಲಿ ಎಚ್ಚು ಕನ್ನಡನೇ ನಡೀತಿತ್ತು.ನನಗೋ ಮರಾಟಿ, ಇಂದಿ,ತಮಿಳು ಈ ಬಾಸೆಗಳೆಲ್ಲ ಬಾರವು. ಅವನಾದರೋ, ಕಾಸ್ಮೋಪಾಲಿಟನ್ ಸಿಟಿ ಬೆಂಗಳೂರಿನವನು. ಅವನಿಗೂ ನನಗೂ ಈ ವಿಸಯಕ್ಕೇ ಸಾವಿರಸಲ ಗರ್ಸಣೆ ಆಗಿತ್ತು. ಸುದ್ದ ಕನ್ನಡ ಮಾತಾಡು ಅಂತ ನಾನು. ಬರಿಮಾತಿಗೇನು, ಅರ್ತ ತಿಳಿದರಾಯಿತು ಅಂತ ಅವನು. ಅದಕ್ಕೇ ಅವನು ತಮಿಳರು ಸಿಕ್ಕರೆ ತಮಿಳಲ್ಲಿ, ತೆಲುಗರು ಸಿಕ್ಕರೆ ತೆಲುಗಲ್ಲಿ ಮಾತಾಡ್ತಿದ್ದ. ಅವರಿಗೂ ಕನ್ನಡ ಬರುತ್ತಲ್ಲೋ ಅಂದರೆ, ನಾವು ಪರಬಾಸೆಯವರ ಜೊತೆ ಕನ್ನಡದಲ್ಲಿ ಮಾತಾಡಿದರೆ, ನಾವು ಕನ್ನಡದವರಾಗಕ್ಕೇ ನಾಲಾಯಕ್ಕು, ಅಸ್ಟಕ್ಕೂ ಅವರಿಗೇನು ಸುದ್ದವಾಗಿ ಕನ್ನಡ ಬರಲ್ಲ ಅಂತ ವಿಪರೀತ ವಾದ ಮಾಡ್ತಿದ್ದ. ನಾನು ಸುದ್ದವೋ ಗಿದ್ದವೋ, ಅರ್ದಂಬರ್ದ ಮಾತಾಡ್ತಾರಲ್ಲ, ಅಸ್ಟು ಸಾಕಲ್ಲ ಎಂದ್ರೆ ಅವನು ಕೇಳ್ತಾನಾ? ಈಗೆ ಅವನ ಜೊತೆ ಮಾತಾಡಿದ್ರೇ ಒಂದು ಪಜೀತಿಗೆ ತಂದು ಇಟ್ಟುಬಿಡ್ತಾನಲ್ಲ ಅಂತ, ನಾನೂ ವಾದ ಮಾಡೋದು ಬಿಟ್ಟೆ ಅನ್ನಿ.

ಇಂಗೇ ಬಾಸೆನ ಸುಲಬ ಮಾಡಕ್ಕೆ ಎಸ್ಟೋ ಲೇಕಕರು ಪುಸ್ತಕಗಳನ್ನೇ ಬರೆದಿದಾರಂತೆ. ನಾನು ಓದಿಲ್ಲ. ಒಂದು ದಿನ ಲೈಬ್ರರಿಗೆ ಓಗಿ ನೋಡಬೇಕು. ಯಾವುದಾದರೂ ಸಿಕ್ಕತ್ತೋ ಅಂತ. ಈಗ ನೋಡಿ, ಐ ಔ ಅನ್ನೋದೇ ನಮ್ಮ ಬಾಸೆಯಲ್ಲಿಲ್ಲದ ಸಬ್ದ. ಅದನ್ನ ಅಯ್ ಅವ್ ಅಂತ ಬರೆದರೇ ಚಂದ ಅಂತ ನನ್ನ ಗೆಳೆಯರು ಒಬ್ಬರು ಸ್ವಲುಪ ದಿನದ ಇಂದೆ ಏಳಿಕೊಟ್ಟರು. ಇರಲಿ; ಒಂದು ಅಯ್ದು ಆರು ಸಲ ನಮ್ಮೂರಿನ್ಸ್ ಲಯ್‍ಬ್ರರಿಗೆ ಪೋನ್ ಮಾಡಿ ಕೇಳ್ದೆ. ಅವ್ರೋ ಎದ್ರಿಗೆ ಬಂದರೆ ನೋಡಿ ಏಳಬ‍ಉದು. ಪೋನಲ್ಲಿ ಅದೆಲ್ಲ ಡಿಟ‍ಯ್ಲ್ಸ್ ಎಲ್ಲ ಏಳಕ್ಕಾಗಲ್ಲ ಅಂದರು. ಅವ್‍ದು. ಅವರಾದ್ರೂ ನನ್ನ ತರದವರು ಪೋನ್ ಮಾಡ್ತಾ ಇದ್ದರೆ ಎಸ್ಟು ಜನಕ್ಕೆ ಏಳಕ್ಕಾಗತ್ತೇ? ಬೆಳಗ್ಗೆ ಕೆಲಸ ಅಚ್ಕೊಂಡು ಕೂತರೆ ಸಂಜೆ ಏಳೋ ತನಕ ಅವರಿಗೆ ಇಂತ ಎಸ್ಟು ಜನ ಪೋನ್ ಮಾಡ್ತಾರೋ? ಅದೆಲ್ಲ ನೋಡಿ ಏಳತಾ ಓದರೆ, ಸಂಜೆ ಕೆಲಸ್ ಮುಗಿಸಿ ಏಳೋ ಒತ್ತಿಗೆ ಅವರು ಬಾಯಿ ನೋವು ಬಂದು ಏನಾದ್ರೂ ಅವ್‍ಸದ ಕುಡೀಬೇಕಾಗುತ್ತೆ ಅಸ್ಟೇ.

ನನ್ನ ಕೆಲವು ತಮಿಳು ಗೆಳೆಯರು ಎಸ್ಟೋ ಸಲ ಏಳಿದಾರೆ. ಅವರ ಬಾಸೆಲಿ ಒತ್ತಕ್ಸರನೇ ಇಲ್ಲ. ಅದಕ್ಕೆ ಅದು ಓದೋದು ಬ‍ಅಳ ಸುಲಬ ಅಂತ. ಇಂದೇ ಎಸ್ಟೋ ದೊಡ್ಡವರೆಲ್ಲ ಈ ಮಾತನ್ನ ಏಳಿದಾರೆ. ನಾವು ಕೇಳಿಲ್ಲ ಅಸ್‍ಟೇ. ಇನ್‍ನು ಮೇಲಾದರೂ ಕೇಳಿದರೆ ಒಳ್‍ಳೇದಲ್‍ಲವೇ? ಯಾವುದಕ್‍ಕೂ ಒಂದು ದಿನ ಸುರು ಅಚ್‍ಕೊಳ್‍ಳಲೇ ಬೇಕಲ್‍ಲ? ಇಂದಿನ ದಿನವೇ ಸುಬದಿನವು ಇಂದಿನ ವಾರ ಸುಬವಾರ ಇಂದಿನ ಯೋಗ ಸುಬ ಯೋಗ ಇಂದಿನ ಕರಣ ಸುಬಕರಣ ಅಂತ ಪುರಂದರ ದಾಸರಂತಆ ದಾಸರೇ ಏಳಿರೋವಾಗ ಪ್‍ರಯತ್‍ನ ಮಾಡದೇ ಇರೋದು ನ್ನ್‍ನ ತಪ್‍ಪ್ಪೇ ಒರತು ಮತ್‍ತೇನೂ ಅಲ್‍ಲ ಅನ್ನ್‍ನೋದು ಇವತ್‍ತು ಮನವರಿಕೆ ಆಗಿ, ಆ ದಾರಿಯಲ್‍ಲಿ ಮೊದಲ ಎಜ್‍ಜೆ ಆಕ್‍ತಾ ಇದೀನಿ. ಎಸ್ಟು ದೂರ ಓಗ್‍ತೀನೋ ಅರಿಯೆ. ನಾ ಏಳಿದ್‍ರಲ್‍‍ಲಿ ತಪ್‍ಪಿದ್‍ರೆ ಒಟ್‍ಟೆಗೆ ಆಕಿಕೊಂಡು ನಿಮ್‍ಮ ಮನೆಯಂಗಳದ ಕೂಸು ನಾನು ಅಂದುಕೊಳ್‍ತೀರಾ ಅಂತ ನನ್‍ನ ಬಾವನೆ.

ಸ್‍ನೇ‍ಅದಲ್‍ಲಿ ನಿ‍ಮ್‍ಮ

ಅಂಸಾನಂದಿ

Rating
No votes yet

Comments