ಇಂದು: ಮಾದನೂರು ವಿಷ್ಣು ತೀರ್ಥರ ಆರಾಧನೆ

ಇಂದು: ಮಾದನೂರು ವಿಷ್ಣು ತೀರ್ಥರ ಆರಾಧನೆ

ಇಂದು ಮಾದನೂರು ವಿಷ್ಣು ತೀರ್ಥರ ಆರಾಧನೆ. ಇವರ ಕಾಲ ಕ್ರಿ.ಶ. ೧೭೫೬-೧೮೦೬. ಇವರ ಜನ್ಮ ಸ್ಥಳ ಧಾರವಾಡ ಜಿಲ್ಲೆಯ ಸಿದ್ಧಾಪುರ.
ಇವರ ಜನ್ಮ ನಾಮ ಜಯತೀರ್ಥ, ಇವರಿಗಿದ್ದ ಇತರ ಹೆಸರುಗಳು: ಅರಣ್ಯಕಾಚಾರ್ಯರು, ಅಡವಿ ಸ್ವಾಮಿಗಳು. ಇವರು ಸನ್ಯಾಸ ಸ್ವೀಕಾರ ಮಾಡಿದ್ದು ೪೦ ನೆಯ ವಯಸ್ಸಿನಲ್ಲಿ ಅಂದರೆ ಕ್ರಿ.ಶ. ೧೭೯೪ ರಲ್ಲಿ.
ಆಶ್ರಮಗುರುಗಳು - ಶ್ರೀ ಸತ್ಯವ್ರತ ತೀರ್ಥರು.
ವೃಂದಾವನ ಪ್ರವೇಶ - ೧೮೦೬ ಮಾಘ ಬಹುಳ ತ್ರಯೋದಶಿ, ಶಿವರಾತ್ರಿಯಂದು.

ಸಾಕಷ್ಟು ಅನುಕೂಲದಿಂದ ಸಂಸಾರ ನಡೆಸುತ್ತಿದ್ದಾಗ ಇವರು ಪುರಂಧರ ದಾಸರ
ಮಂಚ ಬಾರದು ಮಡದಿ ಬಾರಳು, ಕಂಚು ಕನ್ನಡಿ ಬಾರವು|
ಸಂಚಿತಾರ್ಥದ ದ್ರವ್ಯ ಬಾರದು ಮುಂಚೆ ಮಾಡಿರೊ ಧರ್ಮವ |
ಗೋವಿಂದ ನಮೋ, ಗೋವಿಂದ ನಾರಾಯಣ |
ಗೋವರ್ಧನ ಗಿರಿಯನೆತ್ತಿದ ಗೋವಿಂದಾ ನಮ್ಮನ್ನು ರಕ್ಶಿಸು ||

ಹಾಡನ್ನು ಕೇಳಿ ಮನಃಪರಿವರ್ತನೆಗೊಂಡರು. ನಂತರ ಸಂಸಾರವನ್ನು ಮಗನಿಗೆ ವಹಿಸಿ ಶಾಸ್ತ್ರ, ಆಧ್ಯಾತ್ಮ ಪ್ರವಚನಗಳಲ್ಲಿ ತೊಡಗಿಕೊಂಡು ಮಧುಕರ ವೃತ್ತಿ ಆಶ್ರಯಿಸಿದರು. ಇವರಿಗೆ ಸ್ವಪ್ನದಲ್ಲಿ ಶ್ರೀ ಬದರೀನಾರಾಯಣ ದರ್ಶನವಾಗಿತ್ತೆಂದೂ, ಸ್ವಪ್ನ ಸೂಚಿತ ಸ್ಠಳದಲ್ಲಿ ದೊರೆತ ಬದರೀನಾರಾಯನ ವಿಗ್ರಹವನ್ನು ಇಂದಿಗೂ ಬೃಂದಾವನದ ಮೇಲಿಟ್ಟು ಪೂಜಿಸಲಾಗುತ್ತಿದೆ. ಇವರಕಾಲದಲ್ಲಿ ಕೆಲವು ಮಹಿಮೆಗಳು, ಪವಾಡಗಳು ನಡೆದಿವೆ.
ಇವರು ಆಧ್ಯಾತ್ಮ ರಸರಂಜಿನೀ, ಮುಕ್ತಮಾಲಾ, ಶ್ರೀರಮಾಸ್ತೋತ್ರಾ, ಶ್ರೀಮದ್ಭಾಗವತ ಸಾರೋದ್ಧಾರ ಇತ್ಯಾದಿ ಕೃತಿಗಳನ್ನು ರಚಿಸಿದ್ದಾರೆ.

Rating
No votes yet

Comments