ಇಂದೊಂದು ದಿನ
ಚಿತ್ರ
ಇಂದೊಂದು ದಿನ
ಇಂದೊಂದು ದಿನ
ಗಾಂಧಿಯ ನೆನೆಯೋಣ
ಹೃದಯ ಹಣತೆಯ ಹಚ್ಚೋಣ
ಪಲ್ಲಕ್ಕಿ, ಹಣ, ಪಣ ಪಠಣ ನಿಲ್ಲಿಸೋಣ
ಅರೆಬೆತ್ತಲೆಗೆ ನಮಿಸೋಣ
ಗರಿಗರಿ ದಿರಿಸು ಧರಿಸುವ
ಪರಮಾಪ್ತ ಶಿಷ್ಯನಾಗುವ ಆಸೆ
ನಾಳೆವರೆಗಾದರೂ ಸರಿಸೋಣ!
ಅವನ ದಂಡಕ್ಕೆ ನಮನ
ಅಧಿಕಾರ ದಂಡ ದಾಹವನ್ನ
ನಾಳೆ ಸಂಚಲ್ಲಿ ಹಂಚಿಕೊಳ್ಳೋಣ!
ಅಹಿಂಸೆಯ ಪಾಠ ಹೇಳೋಣ
’ಕಂಸ’ದೊಳಗೆರೆಯಲ್ಲಿ ಕಾದು
ನಾಳೆ ಪರಿಪಾಠಕ್ಕೇ ತಿರುಗೋಣ!
ಇಂದೊಂದು ದಿನ ಗೋಣಾಡಿಸೋಣ
ಅವನ ನಡೆ ನುಡಿ ದುಡಿತ ತುಡಿತಗಳ
'ಮೆಚ್ಚಿ ಅಹುದಹುದು' ಅನ್ನೋಣ
ನಾಳೆ ಮಾಡೋಣ ಇಂದಿನೆಲ್ಲದರ ದಹನ!
- ಅನಂತ ರಮೇಶ್
Rating