ಇಂದ್ರಿಯಗಳಿಗೆ....
ಕಣ್ಣು ರೆಪ್ಪೆಗಳೇ.....ಒತ್ತಿ ಹಿಡಿಯಿರಿ
ತುಂಟ ಕಣ್ಣುಗಳ ತುಡುಗಾಟದಲ್ಲಿ,
ತುಟಿಗಳೇ .......ರಪ್ಪನೆ ಮುಚ್ಚಿಬಿಡಿ
ಚಪಲ ಹಲ್ಲುನಾಲಿಗೆಗಳ ತೆರೆಯುವಿಕೆಯಲ್ಲಿ,
ಕೂದಲುಗಳೇ....ಕವಿದು ಬಿಡಿ,
ಕದ್ದುಕೇಳುವ ಕಿವಿಗಳ ಕನಲುವಿಕೆಯಲ್ಲಿ,
ಚರ್ಮವೇ ನಿಷ್ಟುರವಾಗಿಬಿಡು.....
ನೀಚ ಸ್ಪರ್ಷಸುಖ ಹಂಬಲಿಕೆಯಲ್ಲಿ,
ಇಂದ್ರಿಯಗಳೇ ನೀವು ಕ್ರೀಯಾರಹಿತರಾಗಿ,
ದುಷ್ಟಮನಸ್ಸುಗಳು ಸುಳಿಯುವಲ್ಲಿ
Rating