ಇಗೋ ಬಂತು ಯುಗಾದಿ

ಇಗೋ ಬಂತು ಯುಗಾದಿ

ಇಗೋ ಬಂತು ಯುಗಾದಿ
ನವ ವರುಷದ ನಾಂದಿಗೆ
ಬೇವು ಬೆಲ್ಲ ಹಂಚಿ ತಿನ್ನಿರೆಲ್ಲ
ಮರಳಿ ಬರಲಿ ಚಿತ್ತ ಶಕ್ತಿ ಬಾಳಿಗೆ.
 
ಮರಗಳಲ್ಲಿ ಎಲೆಗಳುದುರಿ
ಕುಳಿರ್ಗಾಳಿ ತೊಲಗಿದೆ
ಎದೆಗಳಲ್ಲಿ ಹೂಗಳರಳಿ
ಮಧುರ ಭಾವ ಮೊಡಿದೆ.
 
ಮಾಂದಳಿರಿನ ತೋರಣದಲಿ
ಹಸಿರು ಹೊನ್ನು ಕರೆದಿದೆ
ಮನೆ ಮನಗಳ ಓರಣದಲಿ
ಪ್ರೀತಿ ಪ್ರೇಮ ಮೆರೆದಿದೆ.

ಪಂಚಾಗದ ಶ್ರವಣದಲಿ
ಗ್ರಹಗತಿ ವಿಶ್ಲೇಷಣೆ ನಡೆದಿದೆ
ಅಷ್ಟಾಂಗ ಯೋಗದಲಿ
ನೆಮ್ಮದಿಗೆ ಸಾಧನೆಯೆ ಕಾದಿದೆ.
 
ಹರೆಯದ ಮಧು ಪಲ್ಲವದಲಿ
ಹೊಸ ಹರುಷವೆ ತೇಲಿದೆ
ಚಂದ್ರಮನ ಡೊಂಕಿನಲ್ಲೂ
ನಗೆಮುಗುಳೇ ಹರಿದಿದೆ.
 
ಚೈತ್ರದ ಕೋಗಿಲೆಯುಲಿಯಲಿ
ಚಿಂತನೆಗಳು ಗರಿಗೆದರಿ ನಿಂತಿವೆ
ಒಳಗಿನ ಚಿರಚೇತನ ಹುರುಪಿನಲಿ
ಚಿನ್ಮಯ ರೂಪ ತಾಳಿದೆ.         

                      ನನ್ನ "ಮಾರ್ದನಿ" ಕವನ ಸಂಕಲನದಿಂದ
-ಎಚ್.ಶಿವರಾಂ

Rating
No votes yet