ಇಡ್ಲಿ ಮಂಚೂರಿ

ಇಡ್ಲಿ ಮಂಚೂರಿ


ಸ್ಕೂಲ್ ರಜಾ ಸಮಯದಲ್ಲಿ ಸಾಮಾನ್ಯವಾಗಿ ಕಾಣುವ ದೃಶ್ಯ-


ಸಂಜೆ ಆಟವಾಡುತ್ತಿರುವ ಮಕ್ಕಳನ್ನು "ಹಾಲು ಕುಡೀರಿ ಬನ್ನಿ" ಎಂದು ಗೋಗರೆಯುವಳು ಅಮ್ಮ.


"ತಿನ್ನಲು ಏನುಂಟು?" ಎಂದು ಅಲ್ಲಿಂದಲೇ ಕೇಳುವ ಮಕ್ಕಳು.


"ಬೆಳಗ್ಗೆಯ ಇಡ್ಲಿ-ಸಾಂಬಾರ್ ಉಳಿದಿದೆ. ಬೇಗ ಬನ್ನಿ."


"ನಮಗೆ ಹಸಿವಿಲ್ಲ ಅಮ್ಮ. ಮತ್ತೆ ಬರುತ್ತೇವೆ .."ಅಂದು ಆಟ ಮುಂದುವರೆಸುವರು. ಮಾರನೇ ದಿನ ಹಸುವಿಗೋ, ಬೀದಿನಾಯಿಗೋ ಉಳಿದ ಇಡ್ಲಿ ಹಾಕುವರು. :(


**********



ಉಳಿದ ಇಡ್ಲಿಯಿಂದ "ಇಡ್ಲಿ ಮಂಚೂರಿ" ಮಾಡುವುದು ಬಹಳ ಸುಲಭವಿದೆ. ಅದನ್ನ ಮಾಡಿ...


"ನಿಮಗಾಗಿ ಸ್ಪೆಷಲ್ ಮಂಚೂರಿ ಮಾಡಿದ್ದೇನೆ.ಬೇಗ ಬರದಿದ್ದರೆ ಎಲ್ಲಾ ಖಾಲಿಯಾಗುವುದು" ಎನ್ನಿ... ಮಕ್ಕಳೆಲ್ಲಾ ತಟ್ಟೆಮುಂದೆ ಹಾಜರ್!


*********


೨-೩ ಉಳಿದ ಇಡ್ಲಿಯನ್ನು ತೆಗೆದುಕೊಂಡು ತೆಳ್ಳಗೆ, ಉದ್ದಕ್ಕೆ ಕಟ್ ಮಾಡಿ.


ಸ್ವಲ್ಪ ಕಾರ್ನ್ ಪ್ಲೋರ್‌ನ್ನು ನೀರಲ್ಲಿ ಕಲಸಿ, ಅದರಲ್ಲಿ ಕಟ್ ಮಾಡಿದ ಇಡ್ಲಿ ಅದ್ದಿ ತೆಗೆದು, ಬಿಸಿ ಎಣ್ಣೆಯಲ್ಲಿ ಗರಿಗರಿ ಕಾಯಿಸಬೇಕು.


ಶುಂಠಿ, ಈರುಳ್ಳಿ, ಬೆಳ್ಳುಳ್ಳಿ, ಹಸಿಮೆಣಸಿನಕಾಯಿ ಎಲ್ಲವನ್ನು ಸಣ್ಣದಾಗಿ ಕತ್ತರಿಸಿ, ಬಾಣಲೆಯಲ್ಲಿ ಸ್ವಲ್ಪ ಎಣ್ಣೆ ಹಾಕಿ, ಎಲ್ಲವನ್ನು ಸ್ವಲ್ಪ ಹೊತ್ತು ಹುರಿಯಬೇಕು. ಆಮೇಲೆ ಟೊಮೆಟೋ ಸಾಸ್, ಹಾಗೂ ಸೋಯಾ ಸಾಸ್(ಸ್ವಲ್ಪ ಸಾಕು) ಹಾಕಿ, ಬಿಸಿಮಾಡಿ ಕಾಯಿಸಿದ ಇಡ್ಲಿ ತುಂಡುಗಳನ್ನೂ ಹಾಕಿ, (ಬೇಕಿದ್ದರೆ ಸ್ವಲ್ಪ ನೀರು ಚಿಮುಕಿಸಿ) ಚೆನ್ನಾಗಿ ಮಿಕ್ಸ್ ಮಾಡಿ, ಪುನಃ ಸ್ವಲ್ಪ ಹೊತ್ತು ಬಿಸಿಮಾಡಿ. ಕೊತ್ತಂಬರಿ ಸೊಪ್ಪು ಸಣ್ಣದಾಗಿ ಕತ್ತರಿಸಿ ಅದಕ್ಕೆ ಸೇರಿಸಿ..............


ಇಡ್ಲಿ ಮಂಚೂರಿ ರೆಡಿ...................ಅರೆರೆರೆ..ಖಾಲಿ. :)


ಸೂಚನೆ: ಚಿತ್ರ, ಬರಹ ಮಾತ್ರ ನನ್ನದು. ಮೊದಲು ತಯಾರಿಸಿ, ಎಲ್ಲರಿಗೂ ಹೇಳಿಕೊಟ್ಟ ಪುಣ್ಯಾತ್ಮರ ಹೊಟ್ಟೆ ತಣ್ಣಗಿರಲಿ.


-ಗಣೇಶ.


 



 



 

Rating
No votes yet

Comments