ಇತಿಹಾಸ ಮರುಕಳಿಸುತ್ತಿದೆಯೆ...??

ಇತಿಹಾಸ ಮರುಕಳಿಸುತ್ತಿದೆಯೆ...??

೧ ವರ್ಷದ ಹಿಂದೆ

ದೇವ ಮಾನವವನ ಬಣ್ಣ ಬಯಲು, ಸನ್ಯಾಸಿ ನಿತ್ಯಾನಂದನ ನಿಜ ಮುಖ ಸಮಾಜಕ್ಕೆ ಪರಿಚಯ ಮಾಡಿಕೊಟ್ಟ ದೂರದರ್ಶನ ವಾಹಿನಿಗಳು. ಆತನ ಮೇಲೆ ಕಾನೂನು ರೀತಿಯ ಕ್ರಮ. ನಿತ್ಯಾನಂದ ಜೈಲು. ಬೇಲ್ನ ಮೇಲೆ ನಿತ್ಯಾನಂದ ಜೈಲಿನಿಂದ ಹೊರಗೆ. ಇನ್ನು ಮುಂದೆ ತಿದ್ಕೋತೀನಿ ಎಂದ ನಿತ್ಯಾನಂದ ಸ್ವಾಮಿ ಮತ್ತೆ ಸಮಾಜದ ಜೊತೆಯಲ್ಲಿ.

ಕೆಲವು ತಿಂಗಳ ಹಿಂದೆ, ಮುಖ್ಯಮಂತ್ರಿ ಪದವಿಗಾಗಿ ಯಡ್ಯೂರಪ್ಪ ಮತ್ತು ಅವರ ಬಣದಿಂದ ವರಿಷ್ಟರ ಮೇಲೆ ಒತ್ತಡ. ಸ್ವಲ್ಪದಿನ ಕಾಯುವಂತೆ ವರಿಷ್ಠರಿಂದ ಸಮಾಧಾನ. ಸರಿ ಎಂದ
ಯಡ್ಯೂರಪ್ಪ. ಯಡ್ಯೂರಪ್ಪ ಬಣದಿಂದ ದೆಹಲಿ ಭೇಟಿ.

ಇತ್ತೀಚೆಗೆ ದೇವ ಮಾನವನ ಬಣ್ಣ ಬಯಲು, ಸ್ವಾಮಿ ನಿತ್ಯಾನಂದನ ನಿಜ ಮುಖ ಸಮಾಜಕ್ಕೆ ಪರಿಚಯ ಮಾಡಿಕೊಟ್ಟ ದೂರದರ್ಶನ ವಾಹಿನಿಗಳು, ಆತನ ಮೇಲೆ ಕಾನೂನು ರೀತಿಯ ಕ್ರಮ. ನಿತ್ಯಾನಂದ ಜೈಲು. ಬೇಲ್ನ ಮೇಲೆ ನಿತ್ಯಾನಂದ ಜೈಲಿನಿಂದ ಹೊರಕ್ಕೆ. ಹಿಂದೆ ತಿದ್ಕೋತೀವಿ ಅಂತ ಹೇಳಿದ್ವು ಈಗ ತಬ್ಕೋಂಡಿದೀವಿ ಎಂದು ಹೇಳಿ ಮತ್ತೆ ಸಮಾಜದ ಜೊತೆಯಲ್ಲಿ.

ಇತ್ತೀಚೆಗೆ ಮುಖ್ಯಮಂತ್ರಿ ಪದವಿಗಾಗಿ ಯಡ್ಯೂರಪ್ಪ ಮತ್ತು ಅವರ ಬಣದಿಂದ ವರಿಷ್ಟರ ಮೇಲೆ ಒತ್ತಡ. ವರಿಷ್ಠರಿಂದ ಭರವಸೆ, ಸಮಾಧಾನ. ದೆಹಲಿ ಭೇಟಿಗಾಗಿ ಸಜ್ಜಾಗಿರುವ ಸಹ ಮನಸ್ಕರ ಬಣ.

ಇನ್ನು ತಮಗೆಲ್ಲಾ ತಿಳಿದಿರುವಂತೆ ಡೀಸೆಲ್ ಮತ್ತು ಪೆಟ್ರೋಲ್ ಹಾಗೂ ದಿನಬಳಕೆಯ ವಸ್ತುಗಳ ಬೆಲೆ ಏರಿಕೆ ಇತಿಹಾಸ ಹೆಚ್ಚೂ ಕಡಿಮೆ ದಿನನಿತ್ಯವೂ ಮರುಕಳಿಸುತ್ತಿದೆ.

ಇದು ಕೇವಲ ಕೆಲವೊಂದು ವಿಷಯಗಳಷ್ಟೆ.

ನಾವೆಲ್ಲ ಏನೂ ಮಾಡ(ಲಾಗ)ದ, ಇತಿಹಾಸ ಮತ್ತು ಇಹದ ಮೂಕ ಪ್ರೇಕ್ಷಕ ಸಾಕ್ಷಿಗಳು


-ರಾಮಮೋಹನ

Rating
No votes yet

Comments