ಇತ್ತೀಚಿನ ಓದು-ರಾ.ಶಿ. ಅವರ 'ಕೊರವಂಜಿಯ ಪಡುವಣಯಾತ್ರೆ', 'ಜಗ್ಗೋಜಿ' ಮತ್ತು ಕೊರವಂಜಿ-ಅಪರಂಜಿ ರಾಶಿರಾಶಿ!
ಪ್ರಖ್ಯಾತ ನಗೆಸಾಹಿತಿ ಹಾಗೂ ವೈದ್ಯರಾಗಿದ್ದ ರಾ.ಶಿ. ಅವರ ಎರಡು ಪುಸ್ತಕಗಳನ್ನು ಇತ್ತೀಚಿಗೆ ಓದಿದೆ.
ಒಂದು - ಕೊರವಂಜಿಯ ಪಡುವಣ ಯಾತ್ರೆ. ಎರಡು ತಿಂಗಳ ಅವಧಿಯಲ್ಲಿ ದಿಲ್ಲಿ, ತಾಷ್ಕೆಂಟ್, ಮಸ್ಕ್ವಾ (ಮಾಸ್ಕೋವನ್ನು ಆ ಊರಿನವರು ಹೀಗೆ ಕರೆಯುವರಂತೆ-ನಿಮಗೆ ಗೊತ್ತಿತ್ತೇ?) ,ಲೆನಿನ್ ಗ್ರಾಡ್ ,ಸ್ಟಕ್ ಹೋಂ(ಸ್ಟಾಕ್ ಹೋಂ!),ಕೋಪನ್ ಹ್ಯಾಗನ್, ಲಂಡನ್,ಪ್ಯಾರಿಸ್,ಫ್ರಾಂಕ್ ಫೋರ್ಟ್ ,ಬರ್ಲಿನ್, ಮನ್ ಷನ್(ಮ್ಯೂನಿಕ್ ), ವಿಯೆನ್ನಾ,,,ಸ್ವಿಟ್ಜರ್ಲ್ಯಾಂಡ್ , ಜ್ಯೂರಿಕ್,ರೋಂ,ನೇಪಲ್ಸ್ , ಪಾಂಪಿ,ವ್ಯಾಟಿಕನ್ , ಗಳನ್ನು ನೋಡಿ ಕೈರೋ,ಮುಂಬೈ ಮಾರ್ಗವಾಗಿ ಬೆಂಗಳೂರಿಗೆ ಮರಳಿದ ಅವರ ಪ್ರವಾಸಕಥನ ಇದು.
ನಾನೂ ಪ್ಯಾರಿಸ್ ಗೆ ಹೋಗಿದ್ದೆನಾದರೂ ಅಲ್ಲಿನ ಪ್ರಸಿದ್ಧ ಲಿಡೋ ಶೋವನ್ನು ನೋಡಿರಲಿಲ್ಲ- ಐದಾರು ಸಾವಿರದ ಟಿಕೆಟ್ ದುಬಾರಿ ಅಂತ. ಆ ಲಿಡೋ ಪ್ರದರ್ಶನದ ಕುರಿತು ಇಲ್ಲಿ ರಾ.ಶಿ. ಅವರ ಕಣ್ಣಿನಿಂದ ತಿಳಿದುಕೊಂಡೆ.
ಅಲ್ಲಿಂದ ಆಯ್ದ ಒಂದು ಭಾಗ - ನಿಮಗಾಗಿ.
ರಾ.ಶಿ. ಅವರು ಒಂದು ನಾಟಕಕ್ಕೆ ಹೋಗಿದ್ದರು, ಜತೆಗೆ ಒಬ್ಬ ಸಹವೈದ್ಯೆ ಇದ್ದರು. ಮುಂದೆ ಅವರ ಮಾತಿನಲ್ಲಿ
"ಹೆಣ್ಣಿಗೆ ಕೋಪ ಬಂದಿತು. ಹೋಟೆಲಿಗೆ ಹಿಂತಿರುಗುವ ತನಕ ಮಾತಾಡಲಿಲ್ಲ. ನನಗೇನೂ ದುಃಖವಿಲ್ಲ.
ಹೆಣ್ಣಿಗೆ ೬೨ ರ ಪ್ರಾಯ."
ಇನ್ನೊಂದು ಪುಸ್ತಕ ಜಗ್ಗೋಜಿ- ಹೆಸರಾಂತ ಕಳ್ಳನ ಅನುಭಾವಿ ಜೀವನ ಕತೆ. ಜಗ್ಗೋಜಿಯ ಬಗ್ಗೆ ಬೇರೆಲ್ಲೋ ಓದಿದ್ದೆನಾದರೂ ಪುಸ್ತಕ ಕೈಗೆ ಸಿಕ್ಕಿದ್ದು ಇತ್ತೀಚೆಗೆ. ಕಳ್ಳತನವೂ ಒಂದು ಕಲೆಯೇ? ಅಲ್ಲೂ ನಿಯತ್ತು ,ನೀತಿ-ನಿಯಮ, ಟೀಂ-ವರ್ಕ್, ಸಂಪ್ರದಾಯ,ಶ್ರದ್ಧೆ , ಆಧ್ಯಾತ್ಮ, ಮತ್ತೆ ಅನುಭಾವಕ್ಕೆ ಅವಕಾಶ ಇದೆಯೇ? ಈ ಪುಸ್ತಕ ಓದಿ.
ಹಿಂದೊಮ್ಮೆ ರಾ.ಶಿ. ಅವರದೇ ಬರವಣಿಗೆಯಲ್ಲಿ ಒಬ್ಬ ಮೋಸಗಾರನ ಬಗ್ಗೆ ಓದಿದ್ದೆ. ಅವನು ಮಾಡುವುದು ಮೋಸ ಅಂತ ಲೋಕಕ್ಕೆ ಅನ್ನಿಸಿದರೂ ಅವನ ಪ್ರಕಾರ ಅದು ಒಂದು ಕಲೆ. ಒಂದು ಪೇಂಟಿಂಗ್ ಬೇಕಾಗೋ ಕ್ಯಾನ್ವಾಸ್ ಬೆಲೆ ಏನು? ಬಣ್ಣದ ಬೆಲೆ ಎಷ್ಟು, ಕಲಾವಿದನು ಒಂದು ಪೇಂಟಿಂಗ್ ಗೆ ತೆಗೆದುಕೊಳ್ಳುವ ಶ್ರಮ ಮತ್ತು ಸಮಯ ಎಷ್ಟು? ಆದರೆ ಆ ಪೇಂಟಿಂಗ್ ನ ಬೆಲೆ ನೂರಾರು, ಸಾವಿರಾರುಪಟ್ಟು ಇಟ್ಟು ಮಾರುವುದಿಲ್ಲವೇ ? ಅದು ಮೋಸವೇ ?. ಹಾಗೇ ತನ್ನ ಕಲೆ, ಅದು ತನ್ನ ದುಡಿಮೆ, ತನ್ನ ಗಳಿಕೆ ಯು ನ್ಯಾಯಯುತ, ಅಂತ ಅವನ ಅಂಬೋಣ. ಅವನು ಬೀದಿಯಲ್ಲಿ ಹೋಗುವವರಿಂದ ಸುಳ್ಳುಸುಳ್ಳೇ ತನಗೆ ಪೆಟ್ಟಾಯಿತು, ಅಪಘಾತವಾಯಿತು ಎಂದೆಲ್ಲ ನಟಿಸಿ ಅವರನ್ನು ನಂಬಿಸಿ ಹಣ ಪಡೆಯೋನು. ಯಾವುದೋ ಕಟ್ಟಡ ಕಟ್ಟುವಾಗ ಕೂಲಿ ಅಂತ ಸೇರಿ , ಬೇಕಂತಲೇ ಬಿದ್ದು, ಏನೂ ಆಗಿರದಿದ್ದರೂ , ಕೈಯೋ ಕಾಲೋ ಮುರಿಯಿತು ಅಂತ ನಂಬಿಸಿ ಪರಿಹಾರ ಪಡೆಯುವವನು ಅವನು. ಹೀಗೆ ಒಂದು ಸಲ ಬಿದ್ದಾಗ ನಿಜವಾಗಲೂ ಕಾಲು ಮುರಿದುಕೊಳ್ಳುತ್ತಾನೆ . ಆಗ ಮಾಲೀಕನು ಆಸ್ಪತ್ರೆ ಖರ್ಚು ಮತ್ತು ಪರಿಹಾರ ಕೊಡಲು ಬಂದರೆ ಅದನ್ನು ಇವನು ನಿರಾಕರಿಸುತ್ತಾನೆ! ಯಾಕಂದರೆ ತನ್ನ ಕಲಾಪ್ರದರ್ಶನದಲ್ಲಿ ತಾನು ವಿಫಲನಾದೆ ಅಂತ!!
ಅದು ನೆನಪಾಯಿತು.
ಅಂದ ಹಾಗೆ ಅಪರಂಜಿ ಕನ್ನಡದ ಹಾಸ್ಯಪತ್ರಿಕೆ ನಿಮಗೆ ಗೊತ್ತೇ ? ಅದರ ಹಿಂದಿನ ಅವತಾರ ಕೊರವಂಜಿಯೂ ಗೊತ್ತಿರಬೇಕಲ್ಲ. ಅಪರಂಜಿ ಕನ್ನಡದ ಒಂದೇ ಒಂದು ಹಾಸ್ಯಪತ್ರಿಕೆ ಅಂತ ಕಾಣುತ್ತದೆ. 'ವಿನೋದ' ಅಂತ ಇನ್ನೊಂದನ್ನು ನೋಡಿದ ನೆನಪು. ಈಗ ಅಪರಂಜಿಯು http://www.aparanjimag.in ತಾಣವನ್ನು ಹೊಂದಿದೆ. ಅಲ್ಲಿ ಇತ್ತೀಚಿನ ಕೆಲವು ಸಂಚಿಕೆಗಳೂ ಇವೆ. ಈ ಅಪರಂಜಿ ಮತ್ತು ಕೊರವಂಜಿ ಪತ್ರಿಕೆಗಳ ೫೩ ವರ್ಷಗಳ ೨೮,೦೦೦ ಪುಟಗಳ ನಗೆಸಾಹಿತ್ಯ ಈಗ CD/DVD ರೂಪದಲ್ಲಿ ಸಿಗುತ್ತದೆ. ನಾನು ಬೆಂಗಳೂರಿನ ಜಯನಗರದಲ್ಲಿರುವ ಟೋಟಲ್ ಕನ್ನಡ ಡಾಟ್ ಕಾಂ ನ ಮಳಿಗೆಯಲ್ಲಿ ಕೊಂಡುಕೊಂಡೆ. ಒಟ್ಟು ಆರುನೂರು ರೂಪಾಯಿಗೆ. ಈ ಸಾಹಿತ್ಯರಾಶಿಯನ್ನು ಓದುತ್ತ ಕೂತಿದ್ದೇನೆ. ನೀವೂ ಕೊಂಡು ಓದಿ ಆನಂದಿಸಿ.
Comments
ಉ: ಇತ್ತೀಚಿನ ಓದು-ರಾ.ಶಿ. ಅವರ 'ಕೊರವಂಜಿಯ ಪಡುವಣಯಾತ್ರೆ', 'ಜಗ್ಗೋಜಿ' ...
In reply to ಉ: ಇತ್ತೀಚಿನ ಓದು-ರಾ.ಶಿ. ಅವರ 'ಕೊರವಂಜಿಯ ಪಡುವಣಯಾತ್ರೆ', 'ಜಗ್ಗೋಜಿ' ... by venkatesh
ಉ: ಇತ್ತೀಚಿನ ಓದು-ರಾ.ಶಿ. ಅವರ 'ಕೊರವಂಜಿಯ ಪಡುವಣಯಾತ್ರೆ', 'ಜಗ್ಗೋಜಿ' ...
ಉ: ಇತ್ತೀಚಿನ ಓದು-ರಾ.ಶಿ. ಅವರ 'ಕೊರವಂಜಿಯ ಪಡುವಣಯಾತ್ರೆ', 'ಜಗ್ಗೋಜಿ' ...
ಉ: ಇತ್ತೀಚಿನ ಓದು-ರಾ.ಶಿ. ಅವರ 'ಕೊರವಂಜಿಯ ಪಡುವಣಯಾತ್ರೆ', 'ಜಗ್ಗೋಜಿ' ...
In reply to ಉ: ಇತ್ತೀಚಿನ ಓದು-ರಾ.ಶಿ. ಅವರ 'ಕೊರವಂಜಿಯ ಪಡುವಣಯಾತ್ರೆ', 'ಜಗ್ಗೋಜಿ' ... by shreekant.mishrikoti
ಉ: ಇತ್ತೀಚಿನ ಓದು-ರಾ.ಶಿ. ಅವರ 'ಕೊರವಂಜಿಯ ಪಡುವಣಯಾತ್ರೆ', 'ಜಗ್ಗೋಜಿ' ...