ಇದಪ್ಪ ಮಾತು!!!

ಇದಪ್ಪ ಮಾತು!!!

ಸಾರ್ಥಕ ಬದುಕನ್ನು ಕಟ್ಟಿಕೊಳ್ಳಲು ಹಿರಿಯರ,ಮಹನೀಯರ ಅನುಭವದ ಹಿತನುಡಿಗಳು ದಾರಿದೀಪವಾಗಿವೆ.ಇತಂಥ ನುಡಿಮುತ್ತುಗಳನ್ನು ಕೇಳುವುದರಿಂದ,ಓದುವುದರಿಂದ ಮನಸ್ಸು ಒಳ್ಳೆಯದನ್ನೇ ಚಿಂತಿಸುತ್ತದೆ.ನಾನು ಕೇಳಿದ,ಓದಿದ್ದ ಕೆಲವು ಮಹನೀಯರ ಹಿತನುಡಿಗಳು ಸಂಗ್ರಹಿಸಿ ಈ ಕೆಳಗೆ ಕೊಟ್ಟಿದ್ದೇನೆ.

ಜ್ಞಾನ ಎಂಬುದನ್ನು ಕಮ್ಮಾರನ ಕುಲುಮೆಯಲ್ಲಿ ಈಟಿಯನ್ನು ಆಗಾಗ್ಗೆ ಸಾಣೆ ಹಿಡಿಯುವಂತೆ ಹಿಡಿಯುತ್ತಿರಬೇಕು.
-ಕನ್ಪ್ಯುಶಿಯಸ್

ಅವನಿಗೆ ಇಪ್ಟವಾದ ಪುಸ್ತಕ ತೋರಿಸು,ಅವನು ಎಂತಹವನೆಂದು ಹೇಳುತ್ತೇನೆ.
-ಎಸ್.ವಿ.ಮಿಟೆಜಲ್

ಕಷ್ಟ ಮತ್ತು ಬಡತನ ಕಲಿಸುವಷ್ಟು ಪಾಠಗಳನ್ನು ನಮಗೆ ಬೇರೆಯಾವುವೂ ಕಲಿಸುವುದಿಲ್ಲ.
-ಶ್ರೀ ಸ್ವಾಮಿ ವಿವೇಕಾನಂದರು

ಪುಸ್ತಕ ಓದುವ ಹವ್ಯಾಸ ಉಳ್ಳವನು ಎಲ್ಲಿಗೆ ಹೋದರೂ ಸಂತೋಷವಾಗಿರಬಲ್ಲ.
-ಮಹಾತ್ಮಗಾಂಧಿ

ನಿನಗಿಂತ ಉತ್ತಮರನ್ನು ಬೇಟಿಯಾದಾಗ ಅವರ ಮಟ್ಟಕ್ಕೆ ನಿನ್ನ ಆಲೋಚನೆಗಳನ್ನು ಬೆಳೆಸು.ನಿನಗಿಂತ ಕನಿಷ್ಟನನ್ನು ಕಂಡಾಗ ನಿನ್ನ ಆತ್ಮವನ್ನು ಒಮ್ಮೆ ನೋಡಿಕೊ.
-ಕನ್ಫೂಷಿಯಸ್

ಒಳ್ಳೆಯ ಪುಸ್ತಕಗಳನ್ನು ಓದಿಲ್ಲದವನು,ಅವುಗಳನ್ನು ಓದಲಾಗದ ಕುರುಡನಿಗಿಂತ ಉತ್ತಮನಲ್ಲ.
-ಮಾರ್ಕ ಟ್ವೈನ್

ಬೆಳಗಿನ ಹೊತ್ತು ದೀರ್ಘ ಸಮಯದವರೆಗೆ ನಿದ್ರಿಸುತ್ತಿದ್ದ ಯಾರೂ ಕೀರ್ತಿ ಹಾಗೂ ಐಶ್ವರ್ಯವನ್ನು ಪಡೆದುದ್ದಾಗಿ ನನಗೆ ತಿಳಿದಿಲ್ಲ.
-ಸ್ಲಿಪ್ಟ್

ಮನುಷ್ಯನ ಅತ್ಯಮೂಲ್ಯ ಆಸ್ತಿ ಎಂದರೆ ಸಹಾನುಭೂತಿಯಿಂದ ವರ್ತಿಸುವ ಹೆಂಡತಿಯೇ.
-ಅನಾಮಿಕ

ಕೀರ್ತಿಗಾಗಿ ಅಪೇಕ್ಷೆ ಪಡುವವನು ಟೀಕೆಗಳಿಗೆ ಹೆದರಬಾರದು.
-ಸಿಮೆನ್ಸ್

ಆಕಳಿಸುತ್ತಾ ಕೂರಬೇಡಿ,ಜೀವಂತ ಮನುಷ್ಯನಿಗೆ ಕಟ್ಟುವ ಗೋರಿಯೇ ಆಕಳಿಕೆ.
-ಟೇಲರ್

ಮನುಷ್ಯನನ್ನು ಪರಿಪೂರ್ಣನನ್ನಾಗಿ ರೂಪಿಸುವುದು ಅವನ ಚಿಂತನೆ.
-ಟೇಲರ್

Rating
No votes yet