ಇದುವರೆಗೆ ಪುರುಷರಿಗೆ ಸಮಾನರೆಂದು ತಿಳಿದಿದ್ದೆವು ನಾವು!!!

ಇದುವರೆಗೆ ಪುರುಷರಿಗೆ ಸಮಾನರೆಂದು ತಿಳಿದಿದ್ದೆವು ನಾವು!!!

"ಸಖೀ ಯಾಕಿಂದಿಲ್ಲಿ ಈ ರೀತಿ ಮೋಡ ಕವಿದ ವಾತಾವರಣ

ಮಹಿಳಾ ದಿನದಂದೇ ಏಕೆ ನಿನ್ನೀ ಮೊಗದ ಸಂತಸ ಹರಣ

 

ಸೂರ್ಯೋದಯಕೆ ಮೊದಲೇ ನಾನಿನಗೆ ಶುಭ ಹರಸಿಯಾಗಿದೆ

ನಿನ್ನೀ ಮುನಿಸಿಗೆ ಕಾರಣವೇನೆಂದೆನಗೆ ತಿಳಿಯ ಬೇಕಾಗಿದೆ"

 

"ನಿಮಗೊಂದಿಷ್ಟೂ ಗೊತ್ತಾಗೋದಿಲ್ಲ ಈ ಮಹಿಳೆಯರ ಕಷ್ಟ

ಮೀಸಲಾತಿ ತರುತ್ತಿದ್ದಾರೆ ನೋಡಿ ನಮಗಿಲ್ಲದಿದ್ದರೂ ಇಷ್ಟ

 

ಸರ್ಕಾರ ಅಂತಿದೆ ಇದು ಎಲ್ಲಾ ಮಹಿಳೆಯರಿಗೆ ಬಹುಮಾನ

ಬಹುಮಾನ ಅಲ್ಲವದು ಭಾರತೀಯ ಸ್ತ್ರೀಯರಿಗೆ ಅಪಮಾನ

 

ಇದುವರೆಗೆ ಪುರುಷರಿಗೆ ಸಮಾನರೆಂದು ತಿಳಿದಿದ್ದೆವು ನಾವು

ಇನ್ನು ಬರೀ ಮೂವತ್ಮೂರು ಉಳಿದ ಅರುವತ್ತ ಏಳು ನೀವು

 

ಮಹಿಳೆಯರಿನ್ನು ಯಾವ  ವಿಷಯಕ್ಕೆ ಹೋರಾಡುವುದು ಹೇಳಿ

ಹೀಗೆ ಹೋರಾಡುವವರ ಬಾಯ್ಮುಚ್ಚಿಸಿದರಲ್ಲಾ ನೀವೇ ಹೇಳಿ

 

ಈ ದಿನವನ್ನೂ ಕೂಡ ಸಂತಸದಿ ಆಚರಿಸಲು ಬಿಡಲಿಲ್ಲ ಏಕೆ

ಅವರ ರಾಜಕೀಯದಾಟಕ್ಕೆ ಮಹಿಳೆಯರನ್ನು ಬಲಿ ಕೊಡಬೇಕೆ"
Rating
No votes yet