ಇದುವೆ ಜೀವ ಇದು ಜೀವನ - ಇನ್ನೊಂದು ಘಟನೆ

ಇದುವೆ ಜೀವ ಇದು ಜೀವನ - ಇನ್ನೊಂದು ಘಟನೆ

ಮುಂಜಾನೆ ಹತ್ತೂವರೆ ಗಂಟೆ, ಎಂದಿನಂತೆ ಆ ದಿನವೂ ಜನರು ಮುಂಬೈನ ಚರ್ಚ್ ಗೇಟ್ ಸ್ಟೇಶನ್ನಿನಿಂದ ಹೊರ ಬೀಳುತ್ತಿದ್ದರು. ಅಲ್ಲಿ ಸಬ್ ವೇ ಇದೆ ಒಂದು ಮೂವತ್ತು ಮೆಟ್ಟಿಲು ಇಳಿದು ಸ್ವಲ್ಪ ನೇರ ನಡೆದು ಮತ್ತೆ ಮೂವತ್ತು ಮೆಟ್ಟಿಲು ಹತ್ತಬೇಕು. ಇಂತಹ ಜನರಲ್ಲಿ ಒಬ್ಬಳು ವಿದ್ಯಾವಂತ , ಮಧ್ಯಮ ವರ್ಗದ , ಆದರೆ ಕುರುಡು ಹುಡುಗಿ. ಕರಿಯ ಕನ್ನಡಕ, ಕೈ ಗೋಲು. ಅವಳಿಗೆ ಕೈ ಹಿಡಿದು ನಡೆಸಲು ಒಬ್ಬ ಜತೆಗಾರ , ದಾರಿಯ ತಗ್ಗುದಿನ್ನೆ , ಎದುರಾಗುವ ಜನ , ಇತ್ಯಾದಿ ತಿಳಿಸುತ್ತ ಹೋಗುತ್ತಿದ್ದಾನೆ. ಇದಕ್ಕಿದ್ದಂತೆ ಅವಳ ನಡೆಯನ್ನು ತಡೆದು , ಸ್ವಲ್ಪ ಪಕ್ಕಕ್ಕೆ ಹೋಗುವ ಹಾಗೆ ಅವಳನ್ನು ಮಾಡಿದ , ಅವಳು ಏಕೆ ಅಂತ ಕೇಳಿರಬೇಕು, ಇವನು ಹೇಳಿರಬೇಕು - ಅಲ್ಲಿ ಕೆಳಗೆ ಒಬ್ಬ ಕುಂಟ ಭಿಕ್ಷುಕ ಕೂತಿದ್ದ - ಜನ ಓಡಾಡುವ ಹಾದಿಯಲ್ಲೇ ಭಿಕ್ಷೆ ಬೇಡುತ್ತ. ಇವಳು ತಡೆದು , ತನ್ನ ಬ್ಯಾಗ್ ಗೆ ಕೈ ಹಾಕಿ ಸ್ವಲ್ಪ ಹಣ ಕೊಟ್ಟಳು. ಆ ಭಿಕ್ಷುಕ ಕೂಡ ಬೆರಗಾಗಿ ಅವಳ ಕಡೆ ಕೃತಜ್ಞಾ ಭಾವದಿಂದ ನೋಡಿದ . ಉಳಿದೆಲ್ಲ ಜನರು ನನ್ನಂತೆ ಅವಸರದಲ್ಲಿ ಹೋಗುತ್ತಿದ್ದರು. ಇದೆಲ್ಲ ನಡೆದದ್ದು ಕೆಲವೇ ಸೆಕಂಡುಗಳಲ್ಲಿ.

ನಾವೆಲ್ಲ ಬಹು ಮಟ್ಟಿಗೆ - ಭಿಕ್ಷೆ ಕೊಡುವುದು ತಪ್ಪು ಎಂದೆಲ್ಲ ವಿಚಾರ ಮಾಡುತ್ತೇವೆ.
ಸಮಾನ ದುಃಖಿಗಳು ಮಾತ್ರವೇ ಒಬ್ಬರನ್ನೊಬ್ಬರು ಅರ್ಥ ಮಾಡಿಕೊಳ್ಳಬಲ್ಲರು!

Rating
No votes yet

Comments

Submitted by Priyanka.B Mon, 11/27/2017 - 14:30

ಕಣ್ಣಿಲ್ಲದಿದ್ದರೇನಂತೆ, ಆ ಹುಡುಗಿಯ ಹೃದಯ ಶ್ರೀಮಂತಿಕೆಯ ಮುಂದೆ ಕಣ್ಣಿದ್ದು ಒಮ್ಮೆಮ್ಮೆ ನಾವು ಕುರುಡರಾಗುತ್ತೇವೆ. ಸುಂದರ ಬರಹ ಕೆಲವೇ ಸಾಲುಗಳಲ್ಲಿ ಮನಸ್ಸಿಗೆ ತಲುಪುವಂತೆ ಬರೆದಿದ್ದೀರಿ. ಶುಭವಾಗಲಿ.