ಇದು ಆತ್ಮಹತ್ಯೆಯಾ? ಕೊಲೆಯಾ!?

ಇದು ಆತ್ಮಹತ್ಯೆಯಾ? ಕೊಲೆಯಾ!?


ಸಹನೆಗೂ ಒಂದು ಮಿತಿ ಇದೆ. ಒಂದೆರಡಲ್ಲ..ಹತ್ತು ವರ್ಷದಿಂದ ನನ್ನ ಹೊಟ್ಟೆಗೆ ಏನೂ ಹಾಕಿಲ್ಲ!!


ದೆಹಲಿ, ಮುಂಬೈ ಬಿಡಿ, ಪಕ್ಕದ ಮಂಡ್ಯಕ್ಕೆ ಹೋಗುವುದಿದ್ದರೂ ಮೊದಲು ನನ್ನನ್ನು ರೆಡಿ ಮಾಡಿ, ಬಳಿಕ ಈಯಪ್ಪ ಹೊರಡುತ್ತಿದ್ದರು. ಈಗ...ಈಗ..ತೆಳ್ಳಗೆ ಸಾಯಲು ಬಿದ್ದಾಗೆ ಇದ್ದಾಳೆ..ಅವಳ ಮೇಲೆ ಎಲ್ಲಿಲ್ಲದ ಮೋಹ!


"ನಾನಿನ್ನು ಬದುಕುವುದಿಲ್ಲ. ಫ್ಯಾನ್‌ಗೆ ನೇಣು ಹಾಕಿಕೊಂಡು ಸಾಯ್ತೇನೆ" ಅಂದಾಗ ನಿಮ್ಮ ಪ್ರೀತಿಯ ಗಣೇಶಣ್ಣ ನನ್ನ ತಡೆದರು!


ಸಾಯಲು ಬಿಡಲಿಲ್ಲ!!


ಸ್ಟೂಲ್ ಇಟ್ಟು,


ಮೇಲೆ ಹತ್ತಿ,


 ಫ್ಯಾನ್ ಎಲ್ಲಾ ಒರೆಸಿ


" ಧೂಳು ಇದ್ದರೆ ಫೋಟೋ ಚೆನ್ನಾಗಿ ಬರುವುದಿಲ್ಲ. ಈಗ ಸಾಯಿ!!" ಎಂದು ಹೇಳಿ ಅದೇ ತೆಳ್ಳಗಿನ ಮಾಟಗಾತಿಯಿಂದ ಫೋಟೋ ತೆಗೆಯಲು ರೆಡಿ ಅದರು......... 

Rating
No votes yet

Comments