ಇದು ಕರ್ನಾಟಕವಲ್ಲ ಕಾಣಿರೋ

ಇದು ಕರ್ನಾಟಕವಲ್ಲ ಕಾಣಿರೋ

ನಮಸ್ಕಾರ,
ಹಿಂದಿನ ಎರಡು ವಾರದಿಂದ ಸಂಪದ ಮತ್ತು ಇತರೆ ಸುದ್ದಿ ಮಾಧ್ಯಮದಲ್ಲಿ (ಇದರಲ್ಲಿ ಅಂಗ್ಲ ಭಾಷೆ ಕೂಡ ಸೇರಿದೆ) ಹಿಂದಿ ಹೇರಿಕೆ ಮತ್ತು ಅದರ ಅಡ್ಡ, ಉದ್ದ ಪರಿಣಾಮಗಳ ಬಗ್ಗೆ ವಿಸ್ಕೃತವಾಗಿ ಚರ್ಚೆ ಆಗಿದೆ, ಹಿಂದಿ ಕೇವಲ ಒಂದು ಭಾಷೆಯನ್ನಾಗಿ ನೋಡಬೇಕೇ ಹೊರತು ಹಿಂದಿ ಮಾತಡೋದರಿಂದ ದೇಶಪ್ರೇಮ ತೋರಿಸಿದಹಾಗೆ ಅಂತ ಸುಳ್ಳೇ ಹೇಳೋದರಿಂದ ಏನೂ ಸಾಧಿಸಿದಹಾಗೆ ಆಗೋದಿಲ್ಲ. ಹಿಂದಿ ವಿರೋಧಿಸಿದವರನ್ನ ದೇಶ ದ್ರೋಹಿಗಳು ಅನ್ನೋ ತರಹ ನೋಡೋಕಾಗಲ್ಲ ಅನ್ನೋ ಸ್ಪಷ್ಟ ತಿಳುವಳಿಕೆಯನ್ನ ಅದು ನೀಡಿದೆ ಅಂದ್ರೆ ತಪ್ಪಾಗಲ್ಲ.
ನಿಜಕ್ಕೂ ಇದು ಸ್ವಾಗತಾರ್ಹ. ಹಿಂದಿ ಕೂಡ ಎಲ್ಲ ಇತರೆ ಪ್ರಾದೇಶಿಕ ಭಾಷೆಯಂತೆ ಅದು ಒಂದು ಭಾಷೆ ಅಸ್ಟೆ, ಅದಕ್ಕೆ ದೇಶಪ್ರೇಮದ ಜೊತೆ ತಳುಕು ಹಾಕೋದು ಸರಿಯಲ್ಲ.

ಇರ್ಲಿ ನಾನು ಹೇಳ್ಬೇಕಂತಿರೋದು ಕರ್ನಾಟಕದಲ್ಲಿ ಕನ್ನಡಿಗರನ್ನ ಕೀಳಾಗಿ ನೋಡೋ ಪ್ರವೃತ್ತಿ ಹೆಚ್ಚುತ್ತಿದೆ. ನೀವು ಒಂದು ಸಾರಿ ಬೆಂಗಳೂರೆಂಬ ಮಾಯನಗರಿಯನ್ನ ಸುತ್ತು ಹಾಕಿಕೊಂಡು ಬಂದ್ರೆ ನಿಮಗೆ ಏನೂ ಕಾಣ ಸಿಗುತ್ತೆ ಪಟ್ಟಿ ಮಾಡುತ್ತಾ ಹೋಗಿ,
೧) ರೈಲ್ವೆ ಇಲಾಖೆಯಲ್ಲಿ ಕೆಲಸ ಮಾಡುತ್ತಿರುವವರು ಬಿಹಾರಿಗಳು, ಇಲ್ಲ ತಮಿಳರು
೨) ಸಿಗ್ನಲ್ಲುಗಳಲ್ಲಿ ನಿಮಗೆ ಸಿಗುವ ಮಾರಾಟಗಾರರು ಉತ್ತರ ಭಾರತದಿಂದ ಬಂದಿರುವವರು
೩) ಬೆಂಗಳೂರಲ್ಲಿ ಬರುತ್ತಿರುವ ಬಹುಮಹಡಿ ಕಟ್ಟಡಗಳಿಗೆ ಕೆಲಸಮಾದುತ್ತಿರುವವರು ಉತ್ತರ ಭಾರತದವರು, ಇಲ್ಲಿ ಕೆಲಸ ಮಾಡುವ ನಮ್ಮ ಉತ್ತರ ಕರ್ನಾಟಕದ ಜನರನ್ನ ತುಂಬ ಕೀಳಾಗಿ ನಡೆಸಿಕೊಳ್ಳುತ್ತಾರೆ.
೪) ಯಾವು ದೊಡ್ಡ ಕಛೇರಿಗಳಿಗೆ ಹೋದರೆ ಅಲ್ಲಿರುವ ಸೆಕ್ಯೂರಿಟಿ ಗಾರ್ಡ್ ಉತ್ತರಭಾರತದವರು ಆಗಿರುತ್ತಾರೆ.........

ಹೀಗೆ ಪಟ್ಟಿ ಬೆಳೆಯುತ್ತಾ ಹೋಗುತ್ತದೆ, ಇದು ನಿಮ್ಮ ಅನುಭವಕ್ಕೂ ಬಂದಿರಬಹುದು.

ಇಲ್ಲಿ ನಾನು ಹೇಳ್ತಿರೋದು ಏನೂ ಅಂದ್ರೆ ಇವತ್ತು ನಮ್ಮ ಕರ್ನಾಟಕದಲ್ಲಿ ಸೃಷ್ಟಿಯಾಗುತ್ತಿರುವ ಉದ್ಯೋಗಗಳು ಬೇರೆಯವರ ಪಾಲಾಗುತ್ತಿವೆ. ನಮ್ಮ ರಾಜ್ಯದ ಜನರು ಕೆಲಸ ಇಲ್ದೆ ಖಾಲಿ ಕುಳಿತಿದ್ದಾರೆ. ಇವತ್ತು ಬೇರೆಕಡೆ ಇಂದ ಬಂದ ಒಬ್ಬ ಇಲ್ಲಿ ಉದ್ಯಮ ಸ್ಥಾಪನೆ ಮಾಡ್ತಾನೆ ಅಂತ ಅಂದ್ರೆ ಅವ್ನು ಕೆಲಸ ಕೊಡ್ಬೇಕಾಗಿರೋದು ನಮ್ಮ ಕನ್ನಡ ಜನಕ್ಕೆ. ಆದ್ರೆ ಅದು ಆಗ್ತಿಲ್ಲ, ನಿಜಕ್ಕೂ ನಮ್ಮಲ್ಲಿ ಉದ್ದಿಮೆದಾರರು ಬಹಳ ಕಡಿಮೆ ಇದ್ದಾರೆ, ನಮ್ಮವರಿಗೆ ಉದ್ದಿಮೆಗಳನ್ನ ಸ್ಥಾಪನೆ ಮಾಡೋದಕ್ಕೆ ನಮ್ಮ ಸರಕಾರ ಹೆಚ್ಚು ಪ್ರೋತ್ಸಾಹ ನೀಡಬೇಕು. ಜೊತೆಗೆ ಇಲ್ಲಿಗೆ ಬರುವ ಯಾವುದೇ ಉದ್ದಿಮೆದಾರನಿಗೆ ಸ್ತಳೀಯ ಜನರಿಗೆ ಉದ್ಯೋಗ ನೀಡಬೇಕು ಅಂತ ಒತ್ತಡ ತರಬೇಕು. ಜೊತೆಗೆ ನಮ್ಮ ಕನ್ನಡಿಗರಲ್ಲೇ ಇದರ ಬಗ್ಗೆ ಜಾಗೃತಿ ಆಗಬೇಕಾಗಿರೋದು ಮೊದಲನೆಯ ಸಾಲಿನಲ್ಲಿ ನಿಲ್ಲುತ್ತದೆ.

ಹಾಗೇನೇ ಬೇರೆಯವರನ್ನ ಒಳಗೆ ಬಿಟ್ಟು ಕೊಳ್ಳುತ್ತಾ ಹೋದರೆ ಏನಾಗುತ್ತೆ ಅನ್ನೋದಕ್ಕೆ ಸಾಕ್ಷಿ ಮೊನ್ನೆ ಸುಮಾರು ೪೦ ಉತ್ತರ ಭಾರತದವರು ಸಿಕ್ಕಾಪಟ್ಟೆ ಕುಡಿದು ಇಬ್ಬರು ಪೊಲೀಸರ ಮೇಲೆ ಹಲ್ಲೆ ನಡೆಸಿದ್ದಾರೆ, ಸುಮಾರು ೫ ಮಾನಭಂಗ ಪ್ರಕರಣಗಳಲ್ಲಿ ಭಿಹಾರಿಗಳು ಸಿಕ್ಕಿ ಬಿದ್ದಿದ್ದಾರೆ (ಸಿಕ್ಕಿಬೀಳದೆ ಇರೋ ಪ್ರಕರಣಗಲೆಸ್ಟೊ ) . ನೋಡಿ ಹೇಗೆ ಜನ ತಮಗೆ ಅನ್ನ ಕೊಟ್ಟ ನೆಲದಲ್ಲೇ ಹೊಲಸು ಕೆಲಸಗಳನ್ನ ಮಾಡ್ತಿದಾರೆ. ಇದನ್ನೇ ಇವಾಗಲೇ ತಡೆಯಬೇಕು ಇಲ್ಲದಿದ್ದರೆ ಬೆಂಗಳೂರು ಇನ್ನೊಂದು ಮುಂಬೈ ಆಗೋದರಲ್ಲಿ ಯಾವ ಅನುಮಾನನು ಇಲ್ಲ.
ಅದಕ್ಕಾಗಿಯೇ ಕೇಂದ್ರ ಸರಕಾರ ನಿಯಂತ್ರಿತ ವಲಸೆ ಕಾನೂನು ಜಾರಿಗೆ ತರೋದು ಅಗತ್ಯ. ಇದರಿಂದ ಕಂಡಲ್ಲಿ ಜನ ನುಗ್ಗುವುದು ತಪ್ಪುತ್ತೆ, ಅಗತ್ಯ ಇರುವಷ್ಟು ಜನರನ್ನ ಮಾತ್ರ ರಾಜ್ಯದಲ್ಲಿ ಇಟ್ಟುಕೊಳ್ಳಬೇಕು. ಹೊರಗಿನಿಂದ ಬರುವವರ ಮೇಲೆ ಒಂದು ಕಣ್ಣಿಟ್ಟಿರಬೇಕು.

Rating
No votes yet

Comments