ಇದು ತ್ರಿವೇಂಡ್ರಂನ ಶ್ರೀ.ಅನಂತ ಪದ್ಮನಾಭ ದೇವಾಲಯ !
ಈ ವಿಷ್ಣು ದೇವಾಲಯದ ಮೇಲ್ವಿಚಾರಣೆಯನ್ನು 'ತಿರುವಾಂಕೂರ್ ರಾಜಪರಿವಾರದ ಟ್ರಸ್ಟ್' ವಹಿಸಿಕೊಂಡಿದೆ. ಈ ಅರಸರನ್ನು ಚೆರಸ್, ಅಥವಾ ಪದ್ಮನಾಭದಾಸರೆಂಬ ಹೆಸರಿನಿಂದ ಗುರುತಿಸಲ್ಪಡುತ್ತಾರೆ. ಇವರು ಮತ್ತು ಇವರ ನಂತರ ಬಂದವರು, ಗುರು ಕುಲ ಶೇಖರ ಆಳ್ವಾರ್ ರವರ ಶಿಷ್ಯರು. ಈ ದೇವಾಲಯ ರಾಷ್ಟ್ರದ ೧೦೮ ವಿಷ್ಣುವಿನ ದಿವ್ಯ ಮಂದಿರಗಳಲ್ಲೊಂದು. ಪುರಾಣದ ಪ್ರಕಾರ, ಬಲರಾಮನು 'ಶ್ರೀಮದ್ ಭಾಗವತ ಮ್ ನಲ್ಲಿ ಫಾಲುಗುಣಮ್ (೧೦.೭೯.೧೮) ಈಗ ನಮಗೆ ಗೊತ್ತಿರುವ ತಿರುವನಂತಪುರವನ್ನು ಸಂದರ್ಶಿಸಿದನಂತೆ. ತನ್ನ ತೀರ್ಥಯಾತ್ರೆಯ ಕಾಲದಲ್ಲಿ (ಪಂಚಾಪ್ಸರಗಳು) ಪದ್ಮತೀರ್ಥಮ್, ನಲ್ಲಿ ಮಿಂದ ನಂತರ ೧೦ ಸಹಸ್ರ ಗೋಗಳನ್ನು ಅಲ್ಲಿನ ಯತಿಶ್ರೇಷ್ಠರಿಗೆ ದಾನಮಾಡಿದನೆಂದು ದಾಖಲೆಗಳು ತಿಳಿಸುತ್ತವೆ. ಇದರ ವಿಶಯಗಳ ಬಗ್ಗೆ ದೇವಾಲಯದ ಮಹಿಮೆಗಳ ಬಗ್ಗೆ, ವಿಸ್ಟ್ರುತವಾಗಿ ಮತ್ತು ಸವಿಸ್ತಾರವಾಗಿ(೬ಥ್೯ಥ್ ಚೆನ್ತುರಿಎಸ್ ಛೇ), ತಮಿಳು ಆಲ್ವಾರ್ ಗಳ ದಿವ್ಯ ಪ್ರಬಂಧದಲ್ಲಿ ಮಾಹಿತಿಗಳು ದೊರೆಯುತ್ತವೆ. ಮುಂದೆ, ೧೬ ನೆಯ ಶತಮಾನದ ಬಳಿಕ ಸತತವಾಗಿ ದೇವಾಲಯವನ್ನು ವಿಸ್ತರಿಸಲಾಯಿತು. ದೇವಾಲಯದ ಗೋಪುರ ನಿರ್ಮಾಣದ ಬಳಿಕ ಅದು ಆಗಿನ ತಿರುವತ್ತಾರಿನ ಸುಪ್ರಸಿದ್ಧ 'ಶ್ರೀ ಆದಿಕೇಶವಪೆರುಮಾಳ್ ದೇವಾಲಯ'ವನ್ನು ಹೋಲುತ್ತಿತ್ತು. ಪವಿತ್ರ ತಾಣವೆಂಬ ಅರ್ಥದಲ್ಲಿ ಕೇರಳದ ರಾಜಧಾನಿಯಾದ, 'ತಿರುವನಂತಪುರ'ಕ್ಕೆ 'ಅನಂತ ಪದ್ಮನಾಭಸ್ವಾಮಿಯ ನಾಮಕರಣ' ಮಾಡಲಾಗಿದೆ. ಸ್ವಾಮಿಯು ಆದಿಶೇಷನ (ಅನಂತನಮೇಲೆ) ಮೇಲೆ ಪವಡಿಸಿರುತ್ತಾನೆ.
ಮರೆತ ಮಾತು :
-ಈಗ ಹುಡುಕಿದಾಗ ಸಿಕ್ಕಿದೆ. ನನ್ನ ಈ ತಪ್ಪಿಗೆ ಕ್ಷಮೆ ಕೋರುತ್ತೇನೆ.
Comments
ಈಗ ಸರಿಯಾಯಿತು :-)
ಅನ0ತ ಪದ್ಮನಾಭನೆ ಆಯ್ತು