ಇದು ನಿಮಗೆ ಗೊತ್ತಿತ್ತೇ?
ವಿ ಶಾಂತಾರಾಮ್ ೧೯೬೪ರಲ್ಲಿ ನಿರ್ಮಿಸಿದ ‘ಗೀತ್ ಗಾಯಾ ಪತ್ಥರೋಂನೆ’ ಚಿತ್ರದ ಕಥೆ ನಮ್ಮ ಜಕಣಾಚಾರಿಯ ಕಥೆಯನ್ನು ಹೋಲುತ್ತದೇಕೆಂದು ನಿಮಗೆ ಗೊತ್ತಿತ್ತೇ?
ಏಕೆಂದರೆ ಶಾಂತಾರಾಮ್ ಮೂಲತಃ ಕನ್ನಡಿಗರು. ಅವರಿಗೆ ಈ ಕಥೆ ಗೊತ್ತಿತ್ತು. ಅದನ್ನು ಇನ್ನೊಬ್ಬರಿಗೆ ಹೊಸದಾಗಿ ಹೇಳಿ ಚಿತ್ರಕಥೆ ಬರೆಸುವುದಕ್ಕಿಂತ ಕನ್ನಡಿಗರೊಬ್ಬರನ್ನು ಆರಿಸಿದರು. ಅವರ ಹೆಸರು ಕೆ. ಎ. ನಾರಾಯಣ್.
ತಂದೆ ಮಡಿಕೇರಿಯಲ್ಲಿ ಮ್ಯಾಜಿಸ್ತ್ರೇಟ್ ಆಗಿದ್ದಾಗ ಅಲ್ಲಿನ ಸೆಂಟ್ರಲ್ ಹೈಸ್ಕೂಲಲ್ಲಿ ನಾರಾಯಣ್ ವಿದ್ಯಾಭ್ಯಾಸ ಮಾಡಿದ್ದರು. ಆಮೇಲೆ ಹಿಂದಿ ಚಿತ್ರರಂಗ ಸೇರಿ ೧೯೫೭ರಲ್ಲಿ ‘ಹಮ್ ಪಂಛೀ ಏಕ್ ಡಾಲ್ ಕೆ’ ಮತ್ತು ‘ಗೆಸ್ಟ್ ಹೌಸ್’ ಚಿತ್ರಗಳಿಗೆ ಕಥೆ/ಚಿತ್ರಕಥೆ ಬರೆದಿದ್ದರು. ಜೀತೇಂದ್ರ, ರಾಜಶ್ರೀ ಜೋಡಿಯ ‘ಗೀತ್ ಗಾಯಾ ಪತ್ಥರೋಂನೆ’ ಗಲ್ಲಾಪೆಟ್ಟಿಗೆಯನ್ನು ಕೊಳ್ಳೆಹೊಡೆದಿತ್ತು. ಅವರ ಕಥೆ/ಚಿತ್ರಕಥೆಯಿರುವ ಚಿತ್ರಗಳೆಲ್ಲಾ ಜನಪ್ರಿಯವಾದವೇ. ಉದಾಹರಣೆಗೆ, ಏಕ್ ಮುಸಾಫಿರ್ ಏಕ್ ಹಸೀನಾ (ಜಯ್ ಮುಕರ್ಜೀ-ಸಾಧನಾ - ೧೯೬೨), ಜುವೆಲ್ ಥೀಫ್ (ದೇವ್ ಆನಂದ್-ವೈಜಂತಿಮಾಲಾ - ೧೯೬೭), ದುನಿಯಾ (ದೇವ್ ಆನಂದ್-ಜಹೀದಾ - ೧೯೬೮), ಪ್ಯಾರ್ ಹಿ ಪ್ಯಾರ್ (ಧರ್ಮೇ೦ದ್ರ-ವೈಜ೦ತಿಮಾಲಾ - ೧೯೬೯), ಜಾನೀ ಮೇರಾ ನಾಮ್ (ದೇವ್ ಆನಂದ್-ಹೇಮಾ ಮಾಲಿನಿ - ೧೯೭೦), ರಾಮ್ ಪುರ್ ಕಾ ಲಕ್ಷ್ಮಣ್ (ರಣಧೀರ್ ಕಪೂರ್-ಹೇಮಾಮಾಲಿನಿ - ೧೯೭೨), ವಿಕ್ಟೋರಿಯ ನಂ ೨೦೩ (ಅಶೋಕ್ ಕುಮಾರ್-ಪ್ರಾಣ್-ನವೀನ್ ನಿಶ್ಚಲ್-ಸಾಯಿರಾ ಬಾನು - ೧೯೭೨), ಬನಾರಸೀ ಬಾಬು (ದೇವ್ ಆನಂದ್-ರಾಖೀ-ಯೋಗೀತಾ ಬಾಲಿ - ೧೯೭೩), ಗೀತಾ ಮೇರಾ ನಾಮ್ (ಸುನೀಲ್ ದತ್-ಸಾಧನಾ - ೧೯೭೪), ಅಮೀರ್-ಗರೀಬ್ (ದೇವ್ ಆನಂದ್-ಹೇಮಾಮಾಲಿನಿ - ೧೯೭೪), ದೋ ಜಾಸೂಸ್ (ರಾಜ್ ಕಪೂರ್-ರಾಜೇಂದ್ರಕುಮಾರ್-ಶೈಲೇಂದ್ರ ಸಿಂಘ್-ಭಾವನಾ ಭಟ್ - ೧೯೭೫), ಚೋರಿ ಮೇರ ಕಾಮ್ (ಶಶಿ ಕಪೂರ್-ಜೀನತ್ ಅಮಾನ್ - ೧೯೭೫) ಗುರೂ ಹೋ ಜಾ ಶುರೂ (ಮಹೇ೦ದ್ರ ಸಾಂಡೂ-ಪ್ರೇಮಾ ನಾರಾಯಣ್ - ೧೯೭೯), ತೀಸ್ರೀ ಆಂಖ್ (ಧರ್ಮೇ೦ದ್ರ-ಹೇಮಾಮಾಲಿನಿ - ೧೯೮೨), ಯುದ್ಧ್ (ಅನಿಲ್ ಕಪೂರ್-ಜಾಕಿ ಶ್ರೊಫ್-ಟೀನಾ ಮುನಿಮ್ - ೧೯೮೫).
Comments
ಉ: ಇದು ನಿಮಗೆ ಗೊತ್ತಿತ್ತೇ?
ಉ: ಇದು ನಿಮಗೆ ಗೊತ್ತಿತ್ತೇ?