ಇದು ಸೋಲುವ ಯುದ್ಧವೇ ?

ಇದು ಸೋಲುವ ಯುದ್ಧವೇ ?

ನಾವೆಲ್ಲಾ ನಮ್ಮ ಭಾಷೆಗಾಗಿ ಹೋರಾಡ್ತಾ ಇರೋದು ಈ Globalization ಅನ್ನೋ ಪೀಡೆಯಿಂದ. ಈ Globalization ನಿಂದ, ಬಲಿಷ್ಟವಾದ್ದು ಬಹು ಬೇಗ ಎಲ್ಲಾ ಕಡೆ ಅವರಿಸುತ್ತೆ, ಹಾಗೆ Weak ಆಗಿರೋದು ಅಷ್ಟೇ ಬೇಗ ಮುದುಡಿ ಹೋಗತ್ತೆ. ಸ್ವಲ್ಪ ಮೇಲಕ್ ಹೋಗಿ ಯೋಚಿಸಿದ್ರೆ "Survival of the fittest". ವಿಕಸನ ಅಥವಾ Evolution ನೀತಿನೇ ಅದು - ಎನೂ ಮಾಡಕ್ಕಾಗಲ್ಲ. ನಾವು ಒಪ್ತೀವೋ ಬಿಡ್ತಿವೋ , ಕಟುವಾದ ಸತ್ಯ ಅಂದ್ರೆ - English ಭಾಷೆ ಈ ಪ್ರಪಂಚನ ಆವರಿಸ್ತಾ ಇದೆ. ಮೆಲ್ ಮೆಲ್ಗೆ ಬೇರೆ ಎಲ್ಲಾ ಭಾಷೆನೂ ಕ್ಷೀಣಿಸ್ತಾ ಇದೆ. ನಿನ್ನೆ ಸಂಸ್ಕ್ರುತ ಇರ್ಬೋದು, ಇವತ್ತು ಕನ್ನಡ ಇರ್ಬೋದು, ನಾಳೆ ಇನ್ಯಾವುದೋ ಭಾರತದ್ ಭಾಷೆ ಇರ್ಬೋದು. ಕನ್ನಡ Weak ಭಾಷೆ ಅಂತಲ್ಲ - ಸಂಸ್ಕ್ರುತನೂ Gramatically perfect ಭಾಷೆ, ಆದ್ರೆ ಏನಾಯ್ತು ? ಅದ್ರುಷ್ಟ, ಐತಿಹಾಸಿಕ ಘಟನೆಗಳು etc etc ಎಲ್ಲಾ ಸೇರಿ ಯಾವುದೇ ವಸ್ತುನ Survivalಗೆ capable ಅಥವ incapable ಅಂತ ತೀರ್ಮಾನ್ಸುತ್ತೆ. ಸಹಜವಾದ ಪರಿವರ್ತನೆ - Natural Changes. ಇದರ ವಿರುದ್ದ ಹೋರಾಟ - ಕೊನೆಗೆ ಸೋಲುವ ಹೋರಾಟ.. ಇದನ್ನ ಯೋಚಿಸುವಾಗ ಸ್ವಲ್ಪ ದುಃಖ ಹಾಗುತ್ತೆ. ಆದ್ರೂ ಒಂದು ಪ್ರಷ್ಣೆ ಕಾಡ್ತಾ ಇರುತ್ತೆ "ಕನ್ನಡ ಸಹಜವಾದ ಸಾವನ್ನ ಅಪ್ಪುತ್ತಿದೆಯೇ ?" ನಾವು ಮಾಡ್ತಾ ಇರೋದು ಸೋಲುವ ಯುದ್ಧನೇ ?

Rating
No votes yet

Comments