ಇದು ಸ್ಟಾರ್ ಅಲ್ಲ, ಸೂಪರ್ ಸ್ಟಾರ್ ಬಜಾರ್

ಇದು ಸ್ಟಾರ್ ಅಲ್ಲ, ಸೂಪರ್ ಸ್ಟಾರ್ ಬಜಾರ್

ಬೆಂಗಳೂರಲ್ಲಿ ಎಲ್ಲಾ ಕಡೆ ಕಾಣೋ ಸೂಪರ್ ಮಾರ್ಕೆಟ್-ಗಳಲ್ಲಿ, ದಾಲ್, ಚಾವಲ್, ಅವಲ್ ಅಂತ ಹೆಸರಿಟ್ಟು ಬೇಳೆ, ಅಕ್ಕಿ, ಅವಲಕ್ಕಿಗಳನ್ನ ಮಾರಕ್ಕೆ ಶುರು ಮಾಡಿರೋದು ಏನು ಹೊಸಾ ವಿಷಯ ಅಲ್ಲ. ಆದರೆ ಇ೦ತಹ ತೂರ್ದಾಲ್, ಮೂಂಗ್-ದಾಲ್, ಉರದ್-ದಾಲ್ ಇವುಗಳ್ನ ನೋಡಿ ನಾವೂ ಹಲವಾರು ಬಾರಿ ಗೊಂದಲಕ್ಕೀಡಾಗಿರೋದು೦ಟು. "ಸಾರಿಗೆ ಹಾಕೋ ಬೇಳೆ ಇದೇನಾ??" ಅಂತ ಕೇಳ್ತಿರೋರು ಒಂದು ಕಡೆ ಆದ್ರೆ, ಕನ್ನಡದಲ್ಲಿ ಇದರ ಸಮಾನ ಪದ ಇರೋ ಒಂದು ಚಿಕ್ಕ ಪಟ್ಟಿ ಹಿಡ್ಕೊಂಡೇ ಶಾಪಿಂಗ್ ಮಾಡ್ತಿರೋರು ಇನ್ನೊಂದು ಕಡೆ.

ಬೆಂಗಳೂರಿನ ಕೋರಮಂಗಲದಲ್ಲಿರುವ ಟಾಟಾರವರ "ಸ್ಟಾರ್ ಬಜಾರ್" ಸೂಪರ್ ಮಾರ್ಕೆಟ್-ನವರಿಗೆ ನಾವು (ನಾನು ಮತ್ತು ನನ್ನ ಸ್ನೇಹಿತರು) ಕನ್ನಡದಲ್ಲಿ ಏಕೆ ಪದಾರ್ಥಗಳ ಹೆಸರು ಇಟ್ಟಿಲ್ಲ ಎ೦ದು ಪ್ರಶ್ನೆ ಮಾಡಿದ್ವಿ.

ಅವರಿಗೆ ನಮ್ಮ ಮಾತು ಬೇಗ ಅರಿವಾಯಿತು ಮತ್ತು ಈಗ ಅವರಲ್ಲಿ ಒಂದು ಒಳ್ಳೆಯ ಬದಲಾವಣೆ ಕಾಣುತ್ತಿದೆ. ಯಾವಾಗಲೂ ಇಂಗ್ಲಿಷ್-ನಲ್ಲೆ ಜಾಹಿರಾತು ನೀಡುತ್ತಿದ್ದ ಸ್ಟಾರ್ ಬಜಾರ್, ಈಗ ಕನ್ನಡದಲ್ಲೂ ಜಾಹಿರಾತು ನೀಡುತ್ತಿದ್ದಾರೆ (ಲಗತ್ತಿಸಿರುವ ಫೋಟೋ ನೋಡಿ).

ಈಗ ಪ್ಯಾಕೇಜ್ ಮೇಲೆ ಕನ್ನಡದ ಹೆಸರುಗಳನ್ನೇ ಮುದ್ರಿಸುತ್ತಿದ್ದಾರೆ ಮತ್ತು ಕನ್ನಡದಲ್ಲೇ "ಅಕ್ಕಿ ಮತ್ತು ಬೇಳೆಗಳು" ಅ೦ತ ಬೋರ್ಡುಗಳಿವೆ. ಇದರಿ೦ದ ಕನ್ನಡದ ವಾತಾವರಣ ಹುಟ್ಟುವುದಲ್ಲದೆ, ಕನ್ನಡದ ಗ್ರಾಹಕನ ಮನವೊಲಿಸುವುದರಲ್ಲೇ ನಮ್ಮ ಮುನ್ನಡೆ ಇದೆ ಎ೦ಬುದು ಸ್ಟಾರ್ ಬಜಾರ್-ರವರಲ್ಲಿ ತಿಳುವಳಿಕೆ ಮೂಡುತ್ತಿದೆ.

ಉದ್ದಿಮೆದಾರರಲ್ಲಿ ಇದೇ ರೀತಿ ಜಾಗೃತಿ ಮೂಡಿಸಬೇಕಾಗಿರುವುದು ಕನ್ನಡದ ಗ್ರಾಹಕನ ಕರ್ತವ್ಯವಾಗಿದೆ. ನಾವು ಭೇಟಿ ನೀಡುವ ಯಾವುದೇ ಸೂಪರ್ ಮಾರ್ಕೆಟ್ ಗಳಲ್ಲಿ ಕನ್ನಡದ ಬಳಕೆಯನ್ನು ಸುಲಭವಾಗಿ ಹೆಚ್ಚಿಸಬಹುದು ಮತ್ತು ಇದಕ್ಕೆ ಸ್ಟಾರ್ ಬಜಾರ್ ನ ಈ ಪ್ರಕರಣವೇ ಸಾಕ್ಷಿ.

ಕನ್ನಡದ ನೆಲದಲ್ಲಿ ಕನ್ನಡದಲ್ಲಿ ವ್ಯವಹರಿಸುವ ಮೂಲಕ ಕನ್ನಡಿಗರಿಗೆ ಇನ್ನಷ್ಟು ಹತ್ತಿರವಾದ ಇವರು ಬರಿ ಸ್ಟಾರ್ ಅಲ್ಲ, ಸೂಪರ್ ಸ್ಟಾರ್ ಬಜಾರ್.
ಬನ್ನಿ ಇ೦ತಹ ಒ೦ದು ಬದಲಾವಣೆಯನ್ನು ತ೦ದಿರುವ ಸ್ಟಾರ್ ಬಜಾರ್ ನವರಿಗೆ ಅಭಿನ೦ದನೆಯ ಒ೦ದೆರಡು ಸಾಲು ಬರೆದು ಕಳಿಸೋಣ.

ಇವರ ಮಿಂಚೆ: starhelp@trent-tata.com

Rating
No votes yet

Comments