ಇದೆಂತಾ self help kiosk?
ವೊಡಾಫೋನಿನ ಜಯನಗರದ ಮಳಿಗೆಯಲ್ಲಿ self help kiosk ಒಂದನ್ನು ಇಡಲಾಗಿದೆ. ಆದರೆ ಈ ಕಿಯಾಸ್ಕ್ ಬಳಸಲು ಕನ್ನಡ ಮಾತ್ರ ಗೊತ್ತಿದ್ದರೆ ಸಾಕಾಗಲ್ಲ. ಯಾಕಂದ್ರೆ ಈ ಕಿಯಾಸ್ಕ್ ಕೊಡೋದು ಕೇವಲ ಇಂಗ್ಲಿಶ್ ಮತ್ತೆ ಹಿಂದಿ ಆಯ್ಕೆ ಮಾತ್ರ. ಫೋಟೋ ಲಗತ್ತಿಸಲಾಗಿದೆ ನೋಡಿ.
ಊರಿನ ಹೆಚ್ಚು ಮಂದಿಗೆ ಉಪಯೋಗಿಸಕ್ಕೆ ಆಗದಂತಾ ಈ ಯಂತ್ರ, ಯಾರ ಬಳಕೆಗೆ?
ಕರ್ನಾಟಕದಲ್ಲಿ ಸುಮಾರು ಮೂರು ವರ್ಷದಿಂದ ವ್ಯವಹಾರ ನಡುಸ್ತಿರೋ ವೊಡಾಫೋನ್ ಕಂಪನಿ, ಇಲ್ಲಿನ ಗ್ರಾಹಕರನ್ನು ಇನ್ನೂ ಅರ್ಥ ಮಾಡಿಕೊಂಡಿಲ್ಲವೇ?
ಅಥವಾ, ಕನ್ನಡ ಮಾತ್ರ ಬಲ್ಲ ಗ್ರಾಹಕರು ಕಿಯಾಸ್ಕ್ ಬಳಸಬಾರದೆಂಬ ಉದ್ದೇಶವೇ?
ವೊಡಾಫೋನಿನವರಿಗೆ ನಾವೆಲ್ಲಾ ಮಿಂಚೆ ಬರೆದು, ಕಿಯಾಸ್ಕ್-ನಲ್ಲಿ ಕನ್ನಡ ಆಯ್ಕೆ ನೀಡುವಂತೆ ಒತ್ತಾಯ ಮಾಡೋಣ. ನೀವು ಕನ್ನಡವನ್ನು ಕಡೆಗಣಿಸಿರೋದು ನಮಗೆ ಇಷ್ಟವಾಗಿಲ್ಲ ಎಂಬ ಸಂದೇಶ ಕೊಡೋಣ. "ಜನರು ತಮ್ಮ ಕೆಲಸ ತಾವೇ ಮಾಡಿಕೊಳ್ಳಬೇಕೆಂದು ಹಾಕಲಾಗಿರುವ ಕಿಯಾಸ್ಕ್-ನಲ್ಲಿ ಜನರ ಭಾಷೆಯೇ ಇಲ್ಲವೆಂದರೆ, ನೀವು ತೊಡಗಿಸಿರುವ ಹಣವೂ ದಂಡವಾದಂತಲ್ಲವೇ?" ಎಂದು ಪ್ರಶ್ನಿಸೋಣ.
ವೊಡಾಫೋನ್ ಮಿಂಚೆ ವಿಳಾಸ: vodafonecare.kar@vodafone.com