ಇದೇನು ರಸ್ತೆ ಸಾರಿಗೆಯೋ, ಕಮಿಷನ್ ಸಾರಿಗೆಯೋ!
ಇದು ಕರ್ನಾಟಕ ರಾಜ್ಯ ರಸ್ತೆೆ ಸಾರಿಗೆಯೋ, ಡಾಬಾಗಳ ಕಮಿಷನ್ ಸಾರಿಗೆಯೋ !
ಉತ್ತರ ಕರ್ನಾಟಕದ ಹಳ್ಳಿಿ ಹಳ್ಳಿಿಗಳಿಂದ ಸಾವಿರ ಸಾವಿರ ಜನರು ದಿನನಿತ್ಯ ಗಂಟುಮೂಟೆ, ಮಕ್ಕಳು ಮರಿಗಳೊಂದಿಗೆ ಬೆಂಗಳೂರಿಗೆ ದುಡಿಯಲು ಹೋಗುತ್ತಾಾರೆ. ಕೆಲವರು ಟ್ರೈನ್ಗಳಿಗೆ ಹೋದರೆ, ಇನ್ನೂ ಕೆಲವರು ಮಕ್ಕಳುಮರಿಗಳನ್ನು ಕಟ್ಟಿಿಕೊಂಡವರು, ವೃದ್ಧರು, ಅಕ್ಕಿಿ, ಜೋಳ, ಮೂಟೆಗಳೊಂದಿಗೆ ಬೆಂಗಳೂರಿಗೆ ಹೊರಟುನಿಂತವರು, ಕುಟುಂಬ ಸಮೇತ ಹೋಗುವವರೆಲ್ಲ ಗಬ್ಬು ನಾರುವ, ಯಾವಾಗಲೂ ತುಂಬಿ ತುಳುಕುವ ರೈಲಿನಲ್ಲಿ ಹೋಗುವ ದುಸ್ಸಾಾಹಸ ಮಾಡುವುದಿಲ್ಲ. ಎರಡು ನೂರು ರೂಪಾಯಿ ಹೆಚ್ಚಾಾದರೂ ಚಿಂತೆಯಿಲ್ಲ ಕೆ.ಎಸ್.ಆರ್.ಟಿ.ಸಿ ಬಸ್ಸಿಿನಲ್ಲಿ ಹೋಗಲು ನಿರ್ಧರಿಸುತ್ತಾಾರೆ. ಅಷ್ಟೇ ಸಂಖ್ಯೆೆಯ ಜನಗಳು ಬೆಂಗಳೂರಿನಿಂದ ಹಳ್ಳಿಿಗಳತ್ತ ವಾಪಸ್ಸು ಹೋಗುತ್ತಾಾರೆ.
ಈ ಮೊದಲು ಬಸ್ಸುಗಳಲ್ಲಿ ಬೆಂಗಳೂರಿಗೆ ಬಂದು ಹೋದ ಅನುಭವ ಇದ್ದವರು ಮತ್ತೊೊಮ್ಮೆೆ ಬೆಂಗಳೂರಿಗೆ ಹೋಗುವ ಸಂದರ್ಭ ಬಂದಾಗ, ರಾತ್ರಿಿ ಊಟಕ್ಕಾಾಗಿ ಮನೆಯಿಂದಲೇ ರೊಟ್ಟಿಿ, ಅನ್ನ, ಸಾರು, ಚಟ್ನಿಿ ಬುತ್ತಿಿ ಮಾಡಿಕೊಂಡು ಬಂದಿರುತ್ತಾಾರೆ. ರಾಯಚೂರು, ದೇವದುರ್ಗ, ಮಾನವಿ, ಸಿಂಧನೂರು, ಮಸ್ಕಿಿ, ಲಿಂಗಸೂರು, ಯಾದಗಿರಿ ತಾಲೂಕುಗಳಿಂದ ರಾತ್ರಿಿ ಬೆಂಗಳೂರಿಗೆ ಹೊರಡುವ ಬಸ್ಸುಗಳು ಗಂಗಾವತಿ ಸಮೀಪ ಅಥವಾ ಬೆಂಗಳೂರಿನಿಂದ ಹೊರಟ ಬಸ್ಸುಗಳು ಹಿರಿಯೂರು ಸಮೀಪ ಇರುವ ಡಾಬಾಗಳಲ್ಲಿ ಊಟಕ್ಕಾಾಗಿ ಬಸ್ಸುಗಳನ್ನು ನಿಲ್ಲಿಸುತ್ತಾಾರೆ.
ಮನೆಯಿಂದ ಬುತ್ತಿಿ ಮಾಡಿಕೊಂಡು ತಂದವರು ಡಾಬಾದ ಹೊರಗಿನ ಅಂಗಳದಲ್ಲೇ ಬಟ್ಟೆೆಹಾಸಿ ಮಕ್ಕಳ ಮರಿಗಳ ಜೊತೆ ಊಟಕ್ಕೆೆ ಕುಳಿತುಕೊಳ್ಳುತ್ತಾಾರೆ. ಇನ್ನು ಮೊದಲ ಬಾರಿಗೆ ಬೆಂಗಳೂರಿಗೆ ಹೋಗುತ್ತಿಿರುವವರು, ಬುತ್ತಿಿ ಮಾಡಲಾಗದವರು, ಎಲ್ಲೋೋ ದೊಡ್ಡ ದೊಡ್ಡ ಜಾಬ್ಮಾಡುತ್ತಿಿರುವರು, ಯಾವದೋ ಕಂಪನಿಯ ಸಂದರ್ಶನಕ್ಕೆೆ ಹೋಗುತ್ತಿಿರುವ ಯುವಕರು. ಇವರೆಲ್ಲ ಬಸ್ ನಿಲ್ಲಿಸಿದ ನಂತರ ಅಲ್ಲಿರುವ ಡಾಬಾಗಳಿಗೆ ಊಟ ಮಾಡಲು ಹೋಗುತ್ತಾಾರೆ. ಒಳಗೆ ಹೋಗಿ ಎರಡು ರೊಟ್ಟಿಿ, ಸಾಂಬಾರು ಅಥವಾ ಒಂದು ಪ್ಲೇಟ್ ರೈಸ್ ಅರ್ಡರ್ ಮಾಡಿ ತಿನ್ನುತ್ತಾಾರೆ. ಎಷ್ಟು ಬೆಲೆ ಜಾಸ್ತಿಿ ಅಂದರೂ ಒಂದು ಐವತ್ತು ರೂಪಾಯಿ ಬಿಲ್ ಬರಬಹುದು ಅದಕ್ಕಿಿಂತ ಮೀರಿ ಬಿಲ್ ಬರುವುದಿಲ್ಲವೆಂದು ಭಾವಿಸಿರುತ್ತಾಾರೆ. ಅವನು ಊಟ ಮುಗಿಸಿ ಕೈತೊಳೆಯುವದನ್ನೇ ಕಾಯುತ್ತ ನಿಂತಿರುವ ಅಲ್ಲಿನ ಮಾಣಿಯೊಬ್ಬ ಬಂದು ಪೆನ್ನು ತೆಗೆದು ನೂರಿಪ್ಪತ್ತು ರೂಪಾಯಿ ಬಿಲ್ ಬರೆದು ಟೇಬಲ್ ಮೇಲೆ ಇಡುತ್ತಾಾನೆ. ಮೊದಲ ಸಲ ಅಲ್ಲಿ ತಿನ್ನಲು ಹೋದವನು, ತಿಂದ ಎರಡೇ ಎರಡು ರೊಟ್ಟಿಿಗೆ ಅಥವಾ ಒಂದು ಪ್ಲೇಟ್ ರೈಸ್ಗೆ ಆ ಪರಿ ಬಿಲ್ ಬರೆದಿರುವುದನ್ನು ಕಂಡು ಹೌಹರಿಹೋಗುತ್ತಾಾನೆ. ಸಾಮಾನ್ಯವಾಗಿ ಸಿಗುವ ಖಾನವಾಳಿಯಲ್ಲಿ ಎರಡು ರೊಟ್ಟಿಿಗೆ ಹತ್ತು ಹದಿನೈದು ರೂಪಾಯಿಗಿಂತ ಹೆಚ್ಚು ತಗೆದುಕೊಳ್ಳುವುದಿಲ್ಲ. ಸಿಂಧನೂರು ಮಾನವಿ, ತಾಲೂಕಿನಲ್ಲಿನ ಸವಾಜಿ ಹೋಟೆಲ್ಗಳಿಗೆ ಹೋದರೂ ಐದೋ ಆರು ರೂಪಾಯಿಗೊಂದು ಒಣಗಿದ ರೊಟ್ಟಿಿ ಕೊಡುತ್ತಾಾರೆ.
ರಾಯಚೂರಿನಿಂದ ಬೆಂಗಳೂರಿಗೆ ಬರುವಾಗ ದಾರಿ ಮಧ್ಯೆೆ ಇರುವ ಬಹಳಷ್ಟು ಡಾಬಾ ಗಳು ನೂರಾರು ಪ್ರಯಾಣಿಕರನ್ನು ದಿನ ನಿತ್ಯ ಹೀಗೆ ಸುಲಿಯುತ್ತಾಾರೆ. ಅಂದರೆ, ಡಾಬಾಗಳಲ್ಲಿ ಮನಸೋ ಇಚ್ಚೆೆ ಬರೆಯುವ ಬಿಲ್ಗಳ ಬಗ್ಗೆೆ ಪ್ರಯಾಣಿಕ ಪ್ರಶ್ನೆೆ ಮಾಡುವಂತಿಲ್ಲ. ಜಾಸ್ತಿಿ ಮಾತಾಡಿದರೂ ಅಂದುಕೊಳ್ಳಿಿ ಎಲ್ಲಿಂದಲೋ ಬಂದ ಆ ಪ್ರಯಾಣಿಕರಿಗೆ ಗೂಸಾ ಬೀಳುತ್ತೆೆ ! ಅಲ್ಲಿ ಬಸ್ ಡ್ರೈವರ್, ಕಂಡಕ್ಟರ್ಗಳು ಆ ಮಾಲೀಕರ ಪರವಾಗಿಯೇ ನಿಂತು ಆ ಪ್ರಯಾಣಿಕನಿಗೆ ಬುದ್ಧಿಿ ಹೇಳಿ ಕಳಿಸುತ್ತಾಾರೆ.
ಅಲ್ಲಿ ರೊಟ್ಟಿಿ, ರೈಸ್ ಪಲಾವ್, ಚಪಾತಿಗಳಿಗೆ ಇಂತಿಷ್ಟು ಬೆಲೆ ಎಂದು ತಿಳಿಸುವ ಮೇನು ಬೋರ್ಡೇ ಇರುವುದಿಲ್ಲ. ಬಂದವರಿಗೆ ಮೊದಲು ತಿನ್ನಲು ಕೊಡುತ್ತಾಾರೆ. ಬುದ್ಧಿಿವಂತನಿದ್ದರೆ ಮೊದಲು ಊಟದ ಬೆಲೆ ಕೇಳಿ ಊಟಕ್ಕೆೆ ಕುಳಿತುಕೊಳ್ಳುತ್ತಾಾನೆ. ಮೊದಲಸಲ ಬಂದ ಬಡಪಾಯಿ ಹಳ್ಳಿಿಯವನು ಆದರೆ ಅವನು ಏನೇ ತಿಂದರೂ ಬಿಲ್ ಬರುವುದು ನೂರು ಅಥವಾ ನೂರಿಪ್ಪತ್ತು. ತಿನ್ನುವವನು ಬಡಪಾಯಿ ಇದ್ದಷ್ಟು ಬಿಲ್ ಜಾಸ್ತಿಿಯಾಗುತ್ತ ಹೋಗುತ್ತದೆ. ಇಲ್ಲಿ ಯಾವ ಜಿ.ಎಸ್.ಟಿ ಆಗಲಿ, ರಾಜ್ಯ ಸರಕಾರದ ನಿಯಮಗಳಾಗಲಿ, ತೆರಿಗೆ, ಪ್ರಯಾಣಿಕನ ಬಗೆಗಿರುವ ಹಕ್ಕು, ಸುರಕ್ಷತೆಗಳಾಗಲಿ ಎಳ್ಳಷ್ಟು ಉಪಯೋಗಕ್ಕೆೆ ಬರುವುದಿಲ್ಲ. ಇವೆಲ್ಲ ಸರಕಾರದ ಕಣ್ಣುತಪ್ಪಿಿಸಿ ಏನೂ ನಡೆಯುತ್ತಿಿಲ್ಲ. ಬಹಿರಂಗವಾಗಿ ನಡೆಯುತ್ತದೆ ! ಮತ್ತು ಇದನ್ನೆೆಲ್ಲಾಾ ರಾಜರೋಷವಾಗಿ ಮಾಡುವುದಕ್ಕಾಾಗಿ ಯಾರ್ಯಾಾರಿಗೆ ಕೈಬಿಸಿ ಮಾಡಬೇಕೋ ಅವರಿಗೆಲ್ಲ ನಿತ್ಯ ಮಾಡುತ್ತಾಾರೆ. ಹೀಗಾಗಿ ಇವೆಲ್ಲ ಅವರ ಕಣ್ಣುಮುಂದೆ, ಮೂಗಿನ ತುದಿಯಲ್ಲಿ ನಡೆದರೂ ಗೊತ್ತಿಿಲ್ಲದವರಂತೆ ಇದ್ದುಬಿಡುತ್ತಾಾರೆ ಇವರ ಮಧ್ಯೆೆ ಬೆಂಗಳೂರಿಗೆ ದುಡಿಯಲು ಬರುವ ಬಡವರು ಇವರ ಹಣದ ದಾಹಕ್ಕೆೆ ಬಲಿಪಶುವಾಗುತ್ತಾಾರೆ.
ಯಾವಾಗಲೂ ಗಿಜಗುಡುವ ರೈಲಿನಲ್ಲಿ ಮಕ್ಕಳ ಮರಿಗಳೊಂದಿಗೆ ಹೋಗುವ ಪ್ರಯಾಣ ಬಹಳ ಕಷ್ಟವೆನಿಸುತ್ತದೆ. ರಾಯಚೂರಿನಿಂದ ಬೆಂಗಳೂರಿಗೆ ಅಂದಾಜು 500-600 ಚಿಲ್ಲರೆ ಟಿಕೆಟ್ ಬೆಲೆ ಇರುತ್ತದೆ. ಇಷ್ಟಿಿದ್ದೂ ಡಾಬಾಗಳಲ್ಲಿ ಊಟದಲ್ಲಿ ಹಣ ಸುಲಿಗೆ. ಅಷ್ಟೇ ಅಲ್ಲ ಇನ್ನು ಕೆಲವು ಕಂಡಕ್ಟರ್ಗಳು ಟಿಕೆಟ್ ಕೊಡುವಾಗ ಮೂವತ್ತು ನಲವತ್ತು ರುಪಾಯಿಗಳನ್ನು ಉದ್ದೇೇಶಪೂರ್ವಕವಾಗಿಯೇ ಚಿಲ್ಲರೆ ಇಲ್ಲವೆಂದು ಪ್ರಯಾಣಿಕನ ಟಿಕೆಟ್ನ ಹಿಂಬದಿಯಲ್ಲಿ ಬರೆದಿರುತ್ತಾಾರೆ. ಬೆಂಗಳೂರು ಬರುತ್ತಲೆ ಕೆಲವು ಪ್ರಯಾಣಿಕರು ಇಳಿಯುವ ಧಾವಂತದಲ್ಲಿ ಮರೆತು ಹೋಗಿರುತ್ತಾಾರೆ, ಇನ್ನೂ ಕೆಲವು ಪ್ರಯಾಣಿಕರಿಗೆ ಕಂಡಕ್ಟರ್ರೇ ಸಿಗುವುದಿಲ್ಲ !
ಭ್ರಷ್ಟಾಾಚಾರ ಅನ್ನುವುದು ಎಷ್ಟು ಸಾಮಾನ್ಯವಾಗಿಬಿಟ್ಟಿಿದೆ ಅಂದರೆ, ಇಂಥ ಡಾಬಾಗಳಲ್ಲಿ ಕೆ.ಎಸ್.ಆರ್.ಟಿ.ಸಿ ಬಸ್ ಡ್ರೈವರ್ಗಳು, ಕಂಡಕ್ಟರ್ಗಳು ಇಂತಿಷ್ಟು ಪ್ರಯಾಣಿಕರನ್ನು ಕರೆದು ತಂದರೆ ಇಂತಿಷ್ಟು ಹಣ ಕೊಡುತ್ತಾಾರೆ. ಪ್ರತ್ಯೇಕ ಕೋಣೆಯಲ್ಲಿ ಇವರಿಗೆ ಭರ್ಜರಿ ಊಟ ಹಾಕುತ್ತಾಾರೆ, ಹಲ್ಲಿನ ಸಂದುಗಳಲ್ಲಿ ಸಿಕ್ಕಿಿಬಿದ್ದ ಮಾಂಸದ ತುಂಡುಗಳನ್ನು ತೆಗೆಯಲು ಕಡ್ಡಿಿಗಳನ್ನು ಕೊಡುತ್ತಾಾರೆ, ನಾತ ಬಾರದಿರಲು ಸೊಪ್ಪುು ಕೊಡುತ್ತಾಾರೆ, ಪಾನಮಸಾಲನೂ ಇವರಿಗೂಂಟು.
ಕೆ.ಎಸ್.ಆರ್.ಟಿ.ಸಿ ಬಸ್ಸು ಕಂಡಕ್ಟರ್ಗಳು, ಡ್ರೈವರ್ಗಳು ಸರಕಾರಿ ನೌಕರರಾದರೂ ಸರಕಾರದಿಂದ 15-20 ಸಾವಿರದವರೆಗೂ ಸಂಬಳ ಪಡೆಯುತ್ತಿಿದ್ದರೂ ಹಣ ಗಳಿಸುವ ಉದ್ದೇಶದಿಂದ ತಮ್ಮ ವೃತ್ತಿಿಯಲ್ಲೇ ಅಡ್ಡದಾರಿಗಳಿದಿದ್ದಾಾರೆ. ಎಲ್ಲ ಕಂಡಕ್ಟರ್ ಹೀಗೇ ಇದ್ದಾಾರೆ ಎನ್ನುವುದು ನನ್ನ ವಾದವಲ್ಲ. ಆದರೆ ಶೇಕಡಾ 70 ರಷ್ಟು ಅವರೇ ಇದ್ದಾಾರೆ.
ನಮಗೆ ಬಡವರ ಕುರಿತು ಕಾಳಜಿ ಇದೆ, ಅವರಿಗಾಗಿ ಹಲವು ಭಾಗ್ಯಗಳನ್ನು ಕೊಟ್ಟಿಿದ್ದೇವೆ, ಅವರಿಗಾಗಿಯೇ ನಮ್ಮ ಸರಕಾರ ಎಂದು ಹೇಳಿಕೊಳ್ಳುವ ರಾಜ್ಯ ಸರಕಾರ. ನಿಜವಾಗಲೂ ಅಂಥ ಕಾಳಜಿ ಇದ್ದಿದ್ದೇ ಆದರೆ, ಮೊದಲು ಕೆ.ಎಸ್.ಆರ್.ಟಿ.ಸಿ. ಬಸ್ ಕಂಡಕ್ಟರ್ ಡ್ರೈವರಗಳಿಗೆ ಎಚ್ಚರಿಕೆ ನೀಡಲಿ. ಡಾಬಾಗಳಲ್ಲಿ ಮನಸೋ ಇಚ್ಚೆೆ ಬಿಲ್ ಬರಿಯುದನ್ನು ನಿಲ್ಲಿಸಲಿ, ಡಾಬಾಗಳಲ್ಲಿ ಕಡ್ಡಾಾಯವಾಗಿ ಊಟದ ವಿವರ ಮತ್ತು ಬೆಲೆಗಳನ್ನು ಪ್ರಯಾಣಿಕರಿಗೆ ಕಾಣುವಂತೆ ಬೋರ್ಡ್ ಹಾಕಲಿ, ಸರಕಾರ ಕೊಡುವ ಸಂಬಳವನ್ನಲ್ಲದೇ ಕರ್ತವ್ಯದಲ್ಲಿರುವಾಗ ಯಾವುದೇ ಕಮಿಷನ್ ಆಸೆಗೆ ಬಿದ್ದು ಹಣ ಮಾಡಲು ಅಡ್ಡದಾರಿ ಹಿಡಿದಿರುವವರನ್ನು ಪತ್ತೆೆ ಹಚ್ಚಿಿ ಕೆಲಸದಿಂದ ವಜಾಗೊಳಿಸಲಿ, ರಾಜ್ಯದ ಮೂಲೆ ಮೂಲೆಗಳಿಂದ ಬೆಂಗಳೂರಿನತ್ತ ದುಡಿಯಲು ಬರುವ ಪ್ರಯಾಣಿಕರನ್ನು ಹೊತ್ತು ತರುವ ಕೆ.ಎಸ್.ಆರ್.ಟಿ.ಸಿ. ಬಸ್ಸುಗಳು ಡಾಬಾಗಳಲ್ಲಿ ನಿಲ್ಲಿಸದೇ ಪ್ರಯಾಣಿಕರ ಊಟಕ್ಕೆೆ ಬಸ್ ನಿಲ್ದಾಾಣಗಳಲ್ಲಿ ಸರಕಾರ ಇಂದಿರಾ ಕ್ಯಾಾಂಟನ್ನಂತೆ ಕಡಿಮೆ ಬೆಲೆಗೆ ಊಟದ ವ್ಯವಸ್ಥೆೆ ಮಾಡಲಿ. ರಾತ್ರಿಿ ಬಸ್ಸುಗಳು ನಿಲ್ಲುವ ನಿಲ್ದಾಾಣಗಳಲ್ಲಿ ವಿಶೇಷವಾಗಿ ಇಂದಿರಾ ಕ್ಯಾಾಂಟೀನ್ ಆರಂಭಿಸಬಹುದಲ್ಲವೇ ? ಕಡಿಮೆ ಬೆಲೆಗೆ ಬಸ್ಸು ನಿಲ್ದಾಾಣಗಳಲ್ಲೇ ಊಟ ಮಾಡುವ ಪ್ರಯಾಣಿಕನು ನೆಮ್ಮದಿಯಿಂದ ಪ್ರಯಾಣಿಸಬಹುದು. ಇಂತ ಜನಹಿತ ಕಾರ್ಯದಿಂದ ಪ್ರಯಾಣಿಕರಿಗೂ ರಾಜ್ಯ ಸರಕಾರದ ಮೇಲೆ ಭರವಸೆಯ ಆಶಾಕಿರಣ ಮೂಡಬಹುದು.
Comments
ಉ: ಇದೇನು ರಸ್ತೆ ಸಾರಿಗೆಯೋ, ಕಮಿಷನ್ ಸಾರಿಗೆಯೋ!
ನಿಜ. ಇದಕ್ಕೆ ಸೂಕ್ತ ಪರಿಹಾರಕ್ಕೆ ಒತ್ತಾಯಿಸಲೇಬೇಕು. ಹೇಗೆ? 'Change.org' ಯಲ್ಲಿ ಒಂದು ಪತ್ರ ಅಭಿಯಾನ ಆರಂಭಿಸಿ. ಬೆಂಬಲ ಸಿಗುತ್ತದೆ.