ಇದ್ದು ಮರೆತುಹೋದವರು
ಅಂದು ಜನವರಿ 3. ಅಮ್ಮ ಫೋನ್ ಮಾಡಿ ಹೇಳಿದಳು ಲೋ ನಿನ್ನ ಸ್ನೇಹಿತ ಇದ್ನಲ್ಲ ಅದೇ ಮೂಲೇ ಮನೆಯವನು, ಅವನು ತೀರಿ ಹೋದ. ಪಾಪ ತುಂಬಾ ಹುಷಾರಿರಲಿಲ್ಲವಂತೆ. ಕೇಳಿ ಒಂದು ನಿಮಿಷ ಸುಧಾರಿಸಿಕೊಂಡೆ! ಛೇ ಎಂಥ ಕೆಲಸ ಆಯಿತು. ಸಾಯುವ ವಯಸಲ್ಲ ಅವನದು. ಇನ್ನೂ ಚಿಕ್ಕವ. ತಾಯಿ ತೀರಿ ಹೋದಮೇಲೆ ಮೈಸೂರಿನಿಂದ ಬೆಂಗಳೂರಿಗೆ ಬಂದುಬಿಟ್ಟಿದರು. ಅವನನ್ನು ಕಡೆ ಸಲ ಭೇಟಿಯಾಗಿದ್ದು ಐದು ವರ್ಷದ ಕೆಳಗೆ. engineering ಮುಗಿಸಿ ಹೊರದೇಶಕ್ಕೆ ಹೊರಡಲು ರೆಡೀ ಆಗುತಿದ್ದ. ಹಳೆ ಸ್ನೇಹಿತರನ್ನು ನೋಡಲು ಬಂದಿದ್ದ. ಅಮ್ಮ ಅವನ್ನನ್ನು ನೋಡಿ ಖುಷಿ ಪಟಿದ್ದಳು. ಈಗ ಉಳಿದಿದ್ದು ನೆನಪು ಮತ್ತು ನಾವಾಡುತಿದ್ದ ಜಾಗ ಮಾತ್ರ. ಅವನ ಸ್ನೇಹಿತನೊಬ್ಬ ನನ್ನ ಜೂನಿಯರ್. ಅವನಿಗೆ ಫೋನ್ ಹಚ್ಚಿ ಅವನು ತೀರಿಕೊಂಡ ವಿಷಯ ಹೇಳಿದೆ! ಯಾರು ಗುರು ಅವನು ಅಂತ ಕೇಳ್ಡ. ಅರ್ರೇ ರೇ ಜೊತೆಗೆ ಬಸ್ನಲ್ಲಿ ಸ್ಕೂಲ್ಗೆ ಹೋಗಿದ್ದು. ಜೊತೆಗೆ ಆಡಿದ್ದು ಎಲ್ಲ ಮರೆತುಬಿಟ್ನ?? ಅವನಿಗೆ ಎಲ್ಲ ಜ್ಞಾಪಿಸಿ ಹೇಳಿದ ಮೇಲೆ ಅರ್ಥ ಆಯಿತು(ಅಥವಾ ಅರ್ಥ ಆದಂತೆ ಹೂ ಗುಟ್ಟಿದ). ಯೋಚಿಸಿ ನೋಡಿದೆ ಯಾಕೆ ಹಿಂಗೆ?? ನನ್ನ ಪ್ರಕಾರ ಜೊತೆಗೆ ಆಡಿ ಬೆಳೆದ ಸ್ನೇಹಿತರು, ಸ್ಚೂಲಿನಲ್ಲಿ ಪಾಠ ಕಲಿಸಿದ ಮೇಡಮ್ಮು,ಎರಡು ರೂಪಾಯಿಗೆ ಜಾಸ್ತಿ ಬಟಾಣಿ ಕೊಟ್ಟ ಅಂಗಡಿಯವ ಎಲ್ಲರೂ ನನ್ನ ಪಾಲಿನ precious stones! ಇಂದಿಗೂ ಯಾರಾದರೂ ಸಿಕ್ರೆ ನಿಲ್ಲಿಸಿ ಮಾತಾಡಿಸ್ತೀನಿ. ಸ್ಕೂಲು ಬಿಟ್ತಕ್ಷಣ ಅಲ್ಲಿದವರನ್ನ ಮರೆಯೋದು, ಕೆಲಸಕ್ಕೆ ಸೇರಿದ ತಕ್ಷಣ ಕಾಲೇಜ್ನವರನ್ನ ಮರೆಯೋದು ಇವೆಲ್ಲ ನನ್ನ ಪ್ರಕಾರ ಕ್ಷಮಿಸಲಾಗದ ತಪ್ಪುಗಳು. ಹೊಸ ನೀರು ಬರ್ಬೇಕು ಆದ್ರೆ ಅದು ಕೂಡ ಹಳೆ ನೀರಿನ ಜೊತೆ ಸೇರಿಕೋಬೇಕು. ತಮಾಷೆಯ ವಿಷಯ ಎಂದ್ರೆ ನನ್ನ ಸ್ನೇಹಿತರಿಂದ ಪರಿಚಯವಾದ ಇನ್ನೊಬ್ಬ ನನ್ನೊಡನೆ ಅವನಿಗಿಂತ ಆತ್ಮೀಯವಾಗಿರುತ್ತಾನೆ! ಇವ ನನ್ನನ್ನು ಅವನೊಡನೆ ನೋಡಿದರೆ ಅವನು ನನ್ನ ಗೆಳೆಯ ನನ್ನಗಿನ್ತ ನಿನ್ನೊಡನೆ ಜಾಸ್ತಿ ಮಾತಾಡ್ತಾನೆ ಯಾಕೆ ಅಂತ ಕೇಳ್ತಾನೇ?? ಆಗ ನಾ ಹೇಳುವುದೊಂದೇ ಉತ್ತರ, ಯಾವಾತಾದ್ರೂ ಅವನಿಗೆ ಫೋನ್ ಮಾಡಿಡೀಯಾ ಕಡೆ ಪಕ್ಷ ಒಂದು sms?? ಅಥವಾ ಅವರ ಮನೆಗೆ ಹೋಗಿ ಅವರ ತಂದೆ ತಾಯಿ ಹೇಗಿದ್ದಾರೆ ಅಂತ ವಿಚಾರಿಸಿದ್ದೀಯ ??
ಒಳ್ಳೇ ಸ್ನೇಹಿತರು ನಿಮ್ಮಿಂದೇನು ಆಶಿಸುವುದಿಲ್ಲ. ಆಶಿಸಿದ್ರು ಕೂಡ ನಿಮ್ಮನ್ನು exploit ಮಾಡುವುದಿಲ್ಲ! ಹಾಗಾದ ಪಕ್ಷದಲ್ಲಿ ಅಂಥವರನ್ನು ದೂರವಿಡಿ! ಯೋಚನೆ ಮಾಡಿ ನೋಡಿ ನಿಮ್ಮೊಬ್ಬ ಗೆಳೆಯ ಅಥವಾ ಗೆಳತಿ ನಿಮ್ಮ ಕರೆಗೆ ಕಾಯುತ್ತಿರಬಹುದು.
ನಿಮ್ಮವನು
ನಾನು
Comments
ಉ: ...