ಇನ್ನೂ ಸೀರಿಯಸ್ ಆಗ್ಲಿಲ್ಲ ಅಂದ್ರ ಹೆಂಗ್ರಿ?
ಔಷಧಿ
ಮುಖ ಬೆನ್ನುಗಳ ಮೇಲೆ ಬಾಸುಂಡೆ ಎದ್ದಿದ್ದ ಹೆಂಗಸು ಡಾಕ್ಟರ್ ಕಾಣಲು ಬಂದಳು.
ಡಾಕ್ಟರ್ ಕೇಳಿದ “ಏನಾಯಿತು?”
ಹೆಂಗಸು ಹೇಳಿದಳು, “ಡಾಕ್ಟರ್, ನನಗೇನು ಮಾಡ್ಬೇಕು ಅಂತ ತೋಚ್ತಿಲ್ಲ. ನನ್ನ ಗಂಡ ಕುಡಿದು ಮನೆಗೆ ಬಂದಾಗಲೆಲ್ಲ ನನ್ನು ದನಕ್ಕೆ ಬಡಿದ ಹಾಗೆ ಬಡಿಯುತ್ತಾನೆ.”
“ಹೌದಾ ಅದಕ್ಕೆ ನನ್ನ ಬಳಿ ಒಳ್ಳೇ ಔಷಧಿ ಇದೆ. ನಿನ್ನ ಗಂಡ ಮನೆಗ ಬಂದಾಗ ಈ ದ್ರವವನ್ನು ನೀರಿನಲ್ಲಿ ಬೆರೆಸಿ ಬಾಯಿ ಮುಕ್ಕಳಿಸುತ್ತಿರು. ಹತ್ತಾರು ಬಾರಿಯಾದರೂ ಇದನ್ನು ಮಾಡು.”
ಎರಡು ವಾರಗಳ ನಂತರ ಲವಲವಿಕೆಯಿಂದ ಕೂಡಿದ್ದ ಆಕೆ ಡಾಕ್ಟರ್ ಕಾಣಲು ಬಂದಳು.
“ಡಾಕ್ಟರ್, ನಿಮ್ಮ ಔಷಧಿ ತುಂಬಾ ಚೆನ್ನಾಗಿ ಕೆಲಸ ಮಾಡಿತು. ನನ್ನ ಗಂಡ ಕುಡಿದು ಬಂದಾಗಲೆಲ್ಲಾ ನಾನು ಆ ಔಷಧಿಯನ್ನು ಬಾಯಿಗೆ ಹಾಕಿ ಮುಕ್ಕಳಿಸುತ್ತಲೇ ಇದ್ದೆ. ಅವನು ನನ್ನ ಹೊಡೆಯುವುದಿರಲಿ, ಮುಟ್ಟಲೂ ಇಲ್ಲ.”
“ನೋಡಿದ್ಯಾ, ನೀನು ಬಾಯಿ ಮುಚ್ಚಿಕೊಂಡಿದ್ದರೆ ಎಷ್ಟೆಲ್ಲಾ ಸಮಸ್ಯೆಗಳು ಪರಿಹಾರವಾಗ್ತವೆ ಅಂತ!”
ನಾಸ್ತಿಕ ಬಾಯ್ ಫ್ರೆಂಡ್
ತನ್ನ ಬಾಯ್ ಫ್ರೆಂಡ್ನನ್ನು ಕಾಣಲು ಹೋಗಿದ್ದ ಯುವತಿ ಸಪ್ಪೆ ಮುಖ ಹೊತ್ತು ಮನೆಗೆ ಹಿಂದಿರುಗಿದ್ದಳು.
ಅವರಮ್ಮನಿಗೆ ಹೇಳಿದಳು, “ರಂಜಿತ್ ನನಗೆ ಪ್ರೊಪೋಸ್ ಮಾಡಿದ.”
“ಅದಕ್ಕ್ಯಾಕೆ ನೀನು ಬೇಜಾರಾಗಿದ್ದೀಯಾ?”
“ಯಾಕಂದ್ರೆ ಅವನು ನಾಸ್ತಿಕನಂತೆ. ನರಕ ಇದೆ ಎನ್ನುವುದಕ್ಕೆ ಅವನಿಗೆ ನಂಬಿಕೆಯಿಲ್ಲವಂತೆ.”
ತಾಯಿ ಹೇಳಿದಳು, “ಯೋಚಿಸಬೇಡ ಬೇಬಿ, ಅವನನ್ನ ಮದುವೆಯಾಗು ಆಮೇಲೆ ತನ್ನ ನಂಬಿಕೆ ಸುಳ್ಳು ಎಂದು ಅವನಿಗೇ ಅರಿವಾಗುತ್ತೆ.”
ಶಾಕ್ ಆಯ್ತಾ?
ತನ್ನ ಗಂಡ ಮನೆಯ ಅಡುಗೆಯವಳ ಜೊತೆ ಸರಸವಾಡುತ್ತಿರಬಹುದು ಎಂಬ ಸಂಶಯ ಹೆಂಡತಿಗೆ ಬಂತು.
ಆತನನ್ನು ರೆಡ್ ಹ್ಯಾಂಡೆಡ್ ಆಗಿ ಹಿಡಿಯಬೇಕೆಂದು ಆಕೆ ತೀರ್ಮಾನಿಸಿ ಅಡುಗೆಯವಳಿಗೆ ರಜೆ ನೀಡಿ ಕಳಿಸಿದಳು. ಅಂದು ರಾತ್ರಿ ಆಕೆಯ ರೂಮಿನಲ್ಲಿ ತಾನು ಹೋಗಿ ಲೈಟುಗಳನ್ನು ಆರಿಸಿ ತಾನು ಹೋಗಿ ಮಲಗಿದಳು.
ಸರಿಯಾಗಿ ಮಧ್ಯರಾತ್ರಿಯಲ್ಲಿ ಗಂಡಸೊಬ್ಬ ಒಳಗೆ ಬಂದು ಹಾಸಿಗೆಯೇರಿದ. ಆಕೆಯನ್ನು ಕೆಲಕಾಲ ಮುದ್ದಿಸಿದ.
ಕೂಡಲೇ ದೀಪ ಹಾಕಿದ ಹೆಂಡತಿ, “ಶಾಕ್ ಆಯ್ತಾ?” ಎಂದಳು.
“ಓಹ್, ನಿಜಕ್ಕೂ ಆಯ್ತು ಮೇಡಂ” ಎಂದ ಮನೆಯ ಡ್ರೈವರ್!
ಜಾರಿಕೊಂಡದ್ದು ನನ್ನ ಗಂಡನಲ್ಲ
ಜಗ್ಗ ಹಾಗೂ ಶೀಲ ಒಳ್ಳೆಯ ರೆಸ್ಟೋರೆಂಟ್ ಒಂದರಲ್ಲಿ ಊಟ ಮಾಡುತ್ತಿದ್ದರು. ಇನ್ನೊಂದು ಟೇಬಲಿನಲ್ಲಿ ಆರ್ಡರ್ ಪಡೆಯುತ್ತಿದ್ದ ವೇಟ್ರೆಸ್ ಜಗ್ಗ ಬಲುನಿಧಾನವಾಗಿ, ಸದ್ದಿಲ್ಲದೆ ತನ್ನ ಚೇರಿನಿಂದ ಕೆಳಗೆ ಜಾರಿಕೊಂಡು ಟೇಬಲ್ ಕೆಳಕ್ಕೆ ತೂರಲು ತೊಡಗಿದ. ಶೀಲ ಇದನ್ನು ಕಂಡರೂ ಕಾಣದ ಹಾಗೆ ಕೂತಿದ್ದಳು.
ವೇಟ್ರೆಸ್ ನೋಡುತ್ತಿದ್ದ ಹಾಗೇ ಜಗ್ಗ ಸಂಪೂರ್ಣವಾಗಿ ಟೇಬಲ್ ಕೆಳಗೆ ಅವಿತುಕೊಂಡ.ಆದರೂ ಶೀಲ ಏನು ಆಗದವಳಂತೆ ತನ್ನ ಪ್ಲೇಟಲ್ಲಿದ್ದ ಊಟವನ್ನು ಖಾಲಿ ಮಾಡುವುದರಲ್ಲಿ ಮಗ್ನಳಾಗಿದ್ದಳು.
ಆರ್ಡರ್ ಪಡೆದು ಮುಗಿಸಿದ ವೇಟ್ರೆಸ್ ಇವರಿಬ್ಬರ ಟೇಬಲ್ ಬಳಿಗೆ ಬಂದಳು. ಶೀಲಳ ಕುರಿತು, “ಕ್ಷಮಿಸಿ ಮೇಡಂ, ನಿಮ್ಮ ಗಂಡ ಟೇಬಲ್ ಕೆಳಗೆ ಅವಿತುಕೊಂಡರು.” ಎಂದಳು.
ಶೀಲ ಅವಳನ್ನು ದಿಟ್ಟಿಸಿ ಹೇಳಿದಳು, “ಓಹ್, ಇಲ್ಲ. ನನ್ನ ಗಂಡ ಇದೀಗ ತಾನೆ ಮುಂಭಾಗದ ಬಾಗಿಲಿನಿಂದ ಹೊರಗೆ ಹೋದರು.”
Comments
ಉ: ಇನ್ನೂ ಸೀರಿಯಸ್ ಆಗ್ಲಿಲ್ಲ ಅಂದ್ರ ಹೆಂಗ್ರಿ?
ಉ: ಇನ್ನೂ ಸೀರಿಯಸ್ ಆಗ್ಲಿಲ್ಲ ಅಂದ್ರ ಹೆಂಗ್ರಿ?
In reply to ಉ: ಇನ್ನೂ ಸೀರಿಯಸ್ ಆಗ್ಲಿಲ್ಲ ಅಂದ್ರ ಹೆಂಗ್ರಿ? by Chikku123
ಉ: ಇನ್ನೂ ಸೀರಿಯಸ್ ಆಗ್ಲಿಲ್ಲ ಅಂದ್ರ ಹೆಂಗ್ರಿ?