ಇನ್ನೊಂದು ಹಿಡಿ ಹುರಿಗಾಳು
11) ಶಿಲೆಯಲ್ಲಿ ಆನೆಯನ್ನು ಕೆತ್ತುವ ಅತಿ ಸುಲಭ ವಿಧಾನ: ದೊಡ್ಡ ಅಮೃತಶಿಲೆಯನ್ನು ತೆಗೆದುಕೊಳ್ಳಿ. ಅದರಲ್ಲಿ ಆನೆಯಂತೆ ಕಾಣದಿರುವ ಭಾಗವನ್ನೆಲ್ಲ ಕೆತ್ತಿ ತೆಗೆದುಬಿಡಿ.
12) ವಯಸ್ಸು ಹೆಚ್ಚಿದಂತೆ ವಿವೇಕ ಹೆಚ್ಚುವುದಿಲ್ಲ. ಸಾಮಾನ್ಯವಾಗಿ ವಯಸ್ಸೊಂದೇ ಹೆಚ್ಚುತ್ತಾ ಹೋಗುತ್ತದೆ.
13) ಭಾರತೀಯರು ಬಲಶಾಲಿಗಳಾಗುತ್ತಿದ್ದಾರೆ. ನಲವತ್ತು ವರ್ಷದ ಹಿಂದೆ ನೂರು ರೂಪಾಯಿಯ ದಿನಸಿ ಹೊರಲು ಇಬ್ಬರು ಬೇಕಾಗುತ್ತಿತ್ತು. ಈಗ ಐದು ವರ್ಷದ ಮಗುವೇ ಆ ಕೆಲಸ ಮಾಡಬಲ್ಲುದು.
14) ಎರಡೂ ಕೈಯಲ್ಲಿ ಒಂದೊಂದು ಜಿಲೇಬಿ ಇರುವುದೇ ಸಮತೋಲಿತ ಆಹಾರ
15) ತಪ್ಪು ಕೆಲಸ ಮಾಡಿದ್ದಕ್ಕೆ ಕೊಡುವ ತೆರಿಗೆ ದಂಡ. ಸರಿಯಾಗಿ ಕೆಲಸಮಾಡಿ ಸಂಪಾದಿಸಿದಕ್ಕೆ ಕೊಡುವ ದಂಡ ತೆರಿಗೆ
16) ದಾರಿ ತಪ್ಪಿದಾಗಲೂ ಪ್ರಕೃತಿ ಸೌಂದರ್ಯವನ್ನು ಆನಂದಿಸಬಲ್ಲವನೇ ನಿಜವಾಗಿ ಸಂತೋಷವಾಗಿರುವ ವ್ಯಕ್ತಿ
17) ಹೇರಳವಾದ ಹಣದಿಂದ ಸಂತೋಷ ದೊರೆಯುವುದಿಲ್ಲ ಎಂಬ ಮಾತನ್ನು ನಿಜವೆಂದು ಸಾಧಿಸಲು ಒಂದು ಅವಕಾಶ ದೊರೆಯಲಿ ಎಂಬುದೇ ಎಲ್ಲರ ಬಯಕೆ.
18) ಹವಾಮಾನದಿಂದ ನಾವು ಕಲಿಯಬೇಕಾದ ಪಾಠ: ಯಾವ ಟೀಕೆಗೂ ತಲೆಕೆಡಿಸಿಕೊಳ್ಳಬಾರದು.
19) ಪ್ರಲೋಭನೆಗೆ ಶರಣಾಗುವುದು ಒಳ್ಳೆಯದು. ಬದುಕಿನಲ್ಲಿ ಮತ್ತೊಮ್ಮೆ ಇಂಥ ಪ್ರಲೋಭನೆ ಎದುರಾದೀತೋ ಇಲ್ಲವೋ ಯಾರಿಗೆ ಗೊತ್ತು?
20) ಎಲ್ಲ ಬುದ್ಧಿಮಾತುಗಳೂ ಸುಳ್ಳು, ಈ ಮಾತು ಕೂಡ!
ಹಿಂದೆ ಕೊಟ್ಟಿದ್ದ ಹಿಡಿ ಹುರಿಗಾಳಿನಷ್ಟೇ ಇವೂ ರುಚಿಯಾಗಿವೆ ಎಂದು ಭಾವಿಸುವೆ!