ಇಪ್ಪತ್ತೆರಡು ದಿನ ಹನ್ನೊಂದು ಪುಸ್ತಕ

ಇಪ್ಪತ್ತೆರಡು ದಿನ ಹನ್ನೊಂದು ಪುಸ್ತಕ

ಕಳೆದ ಇಪ್ಪತ್ತೆರಡು ದಿನದಲ್ಲಿ ನಾನು ಡಿಜಿಟಲ್ ಲೈಬ್ರರಿ ಆಫ್ ಇಂಡಿಯಾದಿಂದ ಇಳಿಸಿಕೊಂಡು ಓದಿದ ಪುಸ್ತಕಗಳು ಹೀಗಿವೆ .
ಕೈಲಾಸಂ ಅವರ ನಾಟಕಗಳು
೧) ಟೊಳ್ಳುಗಟ್ಟಿ
೨) ಹೋಮ್ ರೂಲ್
(ಕೈಲಾಸಂ ನಾಟಕ ಓದಬೇಕೆಂಬ ಆಸೆ ಇತ್ತು . ಅದು ಸೊಲ್ಪ ಪೂರೈಸಿತು )
ಮತ್ತೆ
೩) ಇಬ್ಸನ್ ನ ನಾಟಕಗಳು - ಎರಡು ಮೂರು ನಾಟಕಗಳ ಕತೆ ಕೊಟ್ಟಿದ್ದಾರೆ . ಹಿಂದಿನ ಕಾಲದ ಮೌಲ್ಯಗಳು , ಸ್ತ್ರೀ ಸ್ವಾತಂತ್ರ್ಯ ಕುರಿತು ಇವೆ .
೪) ಬಂಗಾಲದ ಬೆರಗಿನ ಕತೆಗಳು - ಮಕ್ಕಳಿಗಾಗಿ ಶಿವರಾಮ ಕಾರಂತರು ಕನ್ನಡಿಸಿದ್ದು .
೫) ಸಿಂಹಾಸನ ಖಾಲಿ ಇದೆ - ಆಳುವವರ, ಆಳಿಸಿಕೊಳ್ಳುವ ಕುರಿತು ಹಿಂದಿ ನಾಟಕದ ಅನುವಾದ .
೬) ಜಾಣಗೆರೆಯವರ ಆಯ್ದ ಕತೆಗಳು - ಜಾಣಗೆರೆ ವೆಂಕಟರಾಮಯ್ಯನವರದು . ವಿಶೇಷವೇನಿಲ್ಲ
೭) ಬೆತ್ತಲೆ ಪದ್ಯಗಳು - ಕವನ ಸಂಕಲನ , ಗದ್ಯವನ್ನು ತುಂಡರಿಸಿ ಇಟ್ಟಂತೆ ಅನಿಸಿತು . ಆ ಗದ್ಯದಲ್ಲೂ ವಿಶೇಷವೇನಿರಲಿಲ್ಲ .
೮) ಸಿಂಡ್ರೆಲ್ಲ ಮತ್ತು ಇತರ ಕತೆಗಳು - ಮಕ್ಕಳ ಕತೆಗಳು
೯) ಮಾನು (ಮಹಾನಂದ) - ಮರಾಠಿಯ ಜಯವಂತ ದಳವಿ ಅವರ ಕಾದಂಬರಿ ; ಚಂದ್ರಕಾಂತ ಪೋಕಳೆ ಅವರು ತುಂಬ ಚೆನ್ನಾಗಿ ಕನ್ನಡಿಸಿದ್ದಾರೆ . ದೇವದಾಸಿ ಪದ್ದತಿಯ ಹಿನ್ನೆಲೆಯ ನೈಜತೆಯುಳ್ಳ ಪ್ರೇಮಕಾದಂಬರಿ .
೧೦) ಗಂಡುಗೊಡಲಿ - ಜಿ. ಪಿ. ರಾಜರತ್ನಂ ಅವರಿಂದ ನಾಟಕ - ೧೯೩೨ ರಲ್ಲಿ ಬೆಳಕಿಗೆ ತಂದಿರೋದು . ಪರಶುರಾಮನ ಕತೆಯಾದರೂ ಬ್ರಿಟಿಷರ ವಿರುದ್ಧ ಜನ ಜನತೆಯಲ್ಲಿ ಎಚ್ಚರವನ್ನುಂಟು ಮಾಡುವ ಉದ್ದೇಶ ಹೊಂದಿದೆ ಅನಿಸಿತು .
೧೧) 'ಭರಮಪ್ಪನ ಭೂತ ' - ಕನ್ನಡದಲ್ಲಿ ಪತ್ತೇದಾರಿ ಸಾಹಿತ್ಯ ಇನ್ನೂ ಬಾರದ ಕಾಲದಲ್ಲಿ , ಇಂಗ್ಲೀಷ್ ಮಾದರಿಯಲ್ಲಿ ಶ್ರೀರಂಗ(ಆದ್ಯ ಶ್ರೀ ರಂಗಾಚಾರ್ಯ) ರು ಬರೆದ ಕಾದಂಬರಿ . ಒಂದು ಕೊಲೆ ನಡೆದಿದ್ದು ಅದನ್ನು ಮಾಡಿದವರು ತಮ್ಮಲ್ಲಿ ಯಾರು ಅಂತ ಅಲ್ಲಿದ್ದ ನಾಲ್ಕೈದು ಗೆಳೆಯರು ಕಂಡುಕೊಳ್ಳುವ ಕತೆ . ಕೊಲೆ ನಡೆದ ಸಮಯದಲ್ಲಿ ಯಾರು ಎಲ್ಲಿದ್ದರು . ಅವರ ಕೋಣೆಗಳ ಬಾಗಿಲು , ಕಿಟಕಿ ಇತ್ಯಾದಿ ತೋರಿಸುವ ಚಿತ್ರ ಒಂದನ್ನೂ ಹಾಕಿದ್ದಾರೆ .

Rating
No votes yet

Comments