ಇಪ್ಪತ್ತೈದರ ಬೇಸರ

ಇಪ್ಪತ್ತೈದರ ಬೇಸರ

ಬಾಲ್ಯದಲ್ಲಿ ಹುಟ್ಟು ಹಬ್ಬ ಹತ್ತಿರ ಬರುತ್ತಲೇ ಸಂಭ್ರಮ, ಹೆಮ್ಮೆ, ಸಡಗರ. ಚಾಕಲೇಟ್ ಹಂಚುವ ಆಸೆ. ಉಡುಗೊರೆ ಪಡೆಯುವ ಮಹದಾಸೆ.

ಅದು ಹೇಗೋ ವರ್ಷಗಳುರುಳಿದಂತೆ ಹುಟ್ಟು ಹಬ್ಬ ಹತ್ತಿರವಾಗುತ್ತಲೇ ಮನಸ್ಸಿನೊಳಗೇ ಇಷ್ಟೊಂದು ವಯಸ್ಸಾಯಿತಲ್ಲ ಎಂಬ ಚಿಂತೆ ಹಾಗೂ ಚಿಂತನೆಗಳ ಸುರಿಮಳೆಯಾಗುತ್ತದೆ, ಮನದಲ್ಲಿ ಬೇಸರ ಮನೆಮಾಡುತ್ತದೆ. ಹಿಂದಿದ್ದ ಸಡಗರ ಅಡಗಿಬಿಡುತ್ತದೆ. ಚಾಕಲೇಟ್ ಹಂಚುವಾಸೆ ಇರಲಿ, ಹುಟ್ಟಿದ ದಿನವನ್ನು ನೆನಪಿನಲ್ಲಿಟ್ಟುಕೊಂಡು ಕಾಯುವ ನಿರೀಕ್ಷೆಯೂ ಇಲ್ಲದಾಗುತ್ತದೆ.

ಇತ್ತೀಚೆಗೆ ಇಪ್ಪತ್ತೈದು ವರ್ಷಗಳು ತುಂಬಿತು ಎಂಬ ಬೇಸರ - ಹುಟ್ಟು ಹಬ್ಬದ ಶುಭಾಶಯ ಹೇಳಿದವರೆಡೆಗೆ ಕಾಣಿಸಿಕೊಳ್ಳುವ ಇಲ್ಲದ ಮುಗುಳ್ನಗೆ. ಉಡುಗೊರೆ ನೀಡುವಷ್ಟು ನೆನಪಿಟ್ಟುಕೊಂಡವರಿಗೆ ಏನಾದರೂ ಹೇಳಬೇಕೆಂದು ಹೊರಟಾಗ ಮಾತೇ ಹೊರಡದ ಅನುಭವ. ಅರೆ, ಇಷ್ಟೊಂದು ವರ್ಷ ಈ ಜಗತ್ತಿನಲ್ಲಿದ್ದೆನಾ ಎಂದು ಅಚ್ಚರಿಯಾಗುವ ಕೆಲವು ಘಳಿಗೆಗಳು. ಇವೆಲ್ಲದರ ನಡುವೆ - ದಿನಗಳುರುಳುತ್ತಿವೆ.

Rating
No votes yet

Comments