ಇರಬೇಕು ಇಂತಾ ಛಲ!

ಇರಬೇಕು ಇಂತಾ ಛಲ!

ಇವತ್ತು ಬೆಳಿಗ್ಗೆ ಫೇಸ್ ಬುಕ್ ನಲ್ಲಿ ಈ ಫೋಟೋ ನೋಡಿದಮೇಲೆ ಮನಸ್ಸಿನಲ್ಲಿ ಏನ್ ಆಗ್ತಾಇದೆ ಅಂತಾ ವರ್ಣಿಸಲು ಆಗ್ತಾಇಲ್ಲ. ಎರಡು ಕಾಲೂ ಇಲ್ಲ, ಎರಡು ಕೈಯ್ಯೂ ಇಲ್ಲಾ, ಆದರೆ     ಏನಾದರೂ  ಮಾಡಲೇ ಬೇಕೆಂಬ ಛಲ ಇದೆ ಈ ವ್ಯಕ್ತಿಗೆ! ಭಗವಂತಾ ಎಂತಹಾ ನಿಶ್ಕರುಣಿ ಅಲ್ವಾ! ಹಾಗನ್ನುವಹಾಗಿಲ್ಲವೆಂದು ಕೆಲವರ ವಾದ! ಅವರು ವಾದ ಮಾಡಲೀ ಬಿಡಿ. ನನ್ನ ಮಿತ್ರ ಪ್ರಕಾಶ್ ಅನ್ನೋರು ಸಂಪದದಲ್ಲೂ ಬರೀತಾರೆ. ಎರಡೂ ಕಾಲಿಲ್ಲ ಅಂತಾನೇ ಹೇಳಬಹುದು. ಆದರೆ ಅವರಿಗೆ ಓದಲು, ನೌಕರಿ ಮಾಡಲು, ಜೀವನ ನಿರ್ವಹಿಸಲು, ಸಾಮಾಜಿಕ ಚಟುವಟಿಕೆ ನಡೆಸಲು ಇದೆಲ್ಲಾ ತೊಂದರೆ ಅಂತಾ ಅನ್ನಿಸಲೇ ಇಲ್ಲ. ಒಳ್ಳೆಯ ಹಾಡುಗಾರರು, ಒಳ್ಳೆಯ ಬರಹಗಾರರು ಕೂಡ.ಪ್ರೊ..ವೇಣುಗೋಪಾಲ್ ಎಂಬ ಹಿರಿಯರು ಹಾಸನದಲ್ಲಿ ರಮಣ ಸತ್ಸಂಗ ನಡೆಸುತ್ತಿದ್ದರು. ಪ್ರತೀ ವಾರ ಪ್ರಕಾಶ್ ಸತ್ಸಂಗ ತಪ್ಪಿಸುತ್ತಿರಲಿಲ್ಲ. ಒಂದು ದಿನ ಏನಾಯ್ತೂ ಅಂದ್ರೆ ರಾಯರು ಹೊರ ಊರಿಗೆ ಹೋಗಬೇಕಾಯ್ತು. ಅವರಿಗೆ ಪ್ರಕಾಶ್ ಹೇಳಿದ ಮಾತು ನಾನು ಮರೆಯುವಂತಿಲ್ಲ" ಯಾಕೇ ವೇಣುಗೋಪಾಲರಾಯರೇ, ನಾನು ಮನೆ ನೋಡಿಕೊಳ್ತೀನಿ, ನೀವು ಹೋಗಿಬನ್ನಿ." ನನಗೆ ನಾಚಿಕೆ ಯಾಯ್ತು. ನಿಜವಾಗಿ ಆ ಧೈರ್ಯವನ್ನು ರಾಯರಿಗೆ ನಾನು ಹೇಳಬೇಕಾಗಿತ್ತು. ಆದರೆ ಪ್ರಕಾಶ್ ಹೇಳಿದ್ದರು.

ಈ ಚಿತ್ರದಲ್ಲಿರುವ ವ್ಯಕ್ತಿ ಪಾಪ! ಇನ್ನೂ ಬಲಹೀನೆ. ಆದರೆ ಛಲ ವಂತೂ ಈಕೆಯನ್ನು ಬಿಟ್ಟಿಲ್ಲ. ಬಹುಶ:  ಈಕೆಗೆ ಯಾವ ಅಳುಕೂ ಇಲ್ಲ. ಯಾವ ನೋವೂ ಇಲ್ಲ. ಭಗವಂತ ನನ್ನನ್ನು ಹೀಗೆ ಹುಟ್ಟಿಸಿದ್ದಾನೆ. ಬೇಸರಿಸಿ ಪ್ರಯೋಜನವಿಲ್ಲ! ಇರುವ ಅಂಗಾಂಗ ಗಳನ್ನೇ ಪೂರ್ಣ ಸದ್ಬಳಕೆ ಮಾಡಿಕೊಂಡು ಸಮಾಜಕ್ಕೆ ಏನಾದರೂ ಕೊಡೋಣ, ಎನ್ನುವ ಛಲ. ತಾಯಿ ,ನಿಮ್ಮ ಹೆಸರು ನನಗೆ ಗೊತ್ತಿಲ್ಲ. ನಿಮಗೆ ಕೋಟಿ ಪ್ರಣಾಮ.

ಒಮ್ಮೆ ಹೀಗೆಯೇ ಒಂದು ಬೆಟ್ಟದ ತುದಿಯಲ್ಲಿರುವ ದೇವಸ್ಥಾನದ ಸಾವಿರ ಮೆಟ್ಟಿಲು ಹತ್ತಬೇಕಲ್ಲಾ! ಎಂದು ಹತ್ತದೆ  ಬೆಟ್ತದ ಮುಂದೆಯೇ ಬೇರೆ ಊರಿಗೆ ಕಾರಲ್ಲಿ  ಹೋದೆ.ಹಿಂದಿರುಗಿ ಬರುವಾಗ ಬೆಟ್ತದ ಮುಂದೆಯೇ ಬರಬೇಕಿತ್ತು. ಆಗ ಕಂಡ  ದೃಶ್ಯ ದಿಂದ ರೋಮಾಂಚನ ಗೊಂಡೆ.. ನಾವು ಬೆಳಿಗ್ಗೆ  ಬೆಟ್ಟ ದ ಬುಡ ದಲ್ಲಿ ಕಂಡ ಎರಡೂ ಕಾಲಿಲ್ಲದ ವ್ಯಕ್ತಿಯೊಬ್ಬ ಬೆ ಟ್ಟದ ತುದಿಯಲ್ಲಿ ಕಂಡ.ಆಗ ನಾವು ಬೆಟ್ಟ ಹತ್ತುವುದು ಅನಿವಾರ್ಯವಾಗಿತ್ತು...

 

Rating
No votes yet

Comments

Submitted by Prakash Narasimhaiya Wed, 01/30/2013 - 10:54

ಆತ್ಮೀಯ ಶ್ರೀಧರ್,
ನಿಮ್ಮ ಅಭಿಮಾನಕ್ಕೆ ನಾನು ಋಣಿ. ಎಲ್ಲರಂತೆ ನನಗೂ ಬದುಕಲು ಅವಕಾಶವಿತ್ತ ಭಗವಂತನ ಕಾರುಣ್ಯ, ಬೆನ್ನು ತಟ್ಟಿ ನಿರಂತರ ಪ್ರೋತ್ಸಾಹಿಸುತ್ತಿರುವ ನಿಮ್ಮಂತಹ ಸಹೃದಯಿ ಬಳಗಕ್ಕೆ ನಾನೆಷ್ಟು ವಂದಿಸಿದರೂ ಕಡಿಮೆಯೇ !

Submitted by hariharapurasridhar Wed, 01/30/2013 - 19:42

In reply to by Prakash Narasimhaiya

ದೊಡ್ಡ ಮಾತು ಪ್ರಕಾಶ್, ನಿಮ್ಮ ಬಗ್ಗೆ ಎರಡು ಮಾತು ಬರೆಯುವಾಗ ಎಲ್ಲಿ ಅಪಾರ್ಥಕ್ಕೆ ಕಾರಣವಾಗುತ್ತೋ ಅಂತಾ ನೂರು ಸಲ ಯೋಚಿಸಿ ಬರೆದೆ. ಸಧ್ಯ, ನೀವೇ ಮೆಚ್ಚಿದಿರಲ್ಲಾ, ನನಗೆ ಈಗ ಸಮಾಧಾನ.

Submitted by hariharapurasridhar Wed, 01/30/2013 - 19:42

In reply to by Prakash Narasimhaiya

ದೊಡ್ಡ ಮಾತು ಪ್ರಕಾಶ್, ನಿಮ್ಮ ಬಗ್ಗೆ ಎರಡು ಮಾತು ಬರೆಯುವಾಗ ಎಲ್ಲಿ ಅಪಾರ್ಥಕ್ಕೆ ಕಾರಣವಾಗುತ್ತೋ ಅಂತಾ ನೂರು ಸಲ ಯೋಚಿಸಿ ಬರೆದೆ. ಸಧ್ಯ, ನೀವೇ ಮೆಚ್ಚಿದಿರಲ್ಲಾ, ನನಗೆ ಈಗ ಸಮಾಧಾನ.

Submitted by swara kamath Wed, 01/30/2013 - 22:12

ಪ್ರಿಯ ಶ್ರೀಧರ್ ಅವರೆ, ಇದೇ ರೀತಿಯ ಅನೇಕ ಅಂಗವಿಕಲ ವ್ಯಕ್ತಿಗಳು ಆತ್ಮಬಲದಿಂದ ಜೀವನ ನಡೆಸುತ್ತೀರುವದನ್ನ ನಾನು ನೋಡಿರುವೆನಾದರೂ ನಮ್ಮ ಸಂಪದ ಗೆಳಯ ಪ್ರಕಾಶ್ ಅವರು ಸಹ ಇಂಥಹ ಒಂದು ಸಮಸ್ಯೆಯನ್ನು ಛಾಲೆಂಜ್ ಆಗಿ ಸ್ವೀಕರಿಸಿ ಇತರರಂತೆ ಬದುಕನ್ನು ನಡೆಸುತ್ತಿದ್ದಾರೆಂದು ತಿಳಿದು ನಾನು ಮೂಕಸ್ಮಿತನಾದೆ. ಅವರಿಗೆ ನನ್ನ ತುಂಬು ಹೃದಯದ ಶುಭ ಹಾರೈಕೆಗಳು. ವಂದನೆಗಳು................ರಮೇಶ್ ಕಾಮತ್

Submitted by tthimmappa Wed, 01/30/2013 - 23:01

ಚಿತ್ರ ಮತ್ತು ಲೇಖನ ಎರಡೂ ಪ್ರತಿಯೊಬ್ಬರಲ್ಲೂ ಬದುಕುವ ಛಲ ಮೂಡಿಸುವಂತಹವು. ನಮ್ಮ ನೆಚ್ಚಿನ ಸಂಪದಿಗರಾದ
ಪ್ರಕಾಶ್ ನರಸಿಂಹಯ್ಯನವರ ಬಗ್ಗೆ ತಿಳಿದು ಹೃದಯ ತುಂಬಿ ಬಂದಿತು. ಧನ್ಯವಾದಗಳು

Submitted by kavinagaraj Thu, 01/31/2013 - 10:16

ಚಿತ್ರದಲ್ಲಿರುವ ವ್ಯಕ್ತಿಯ ಪರಿಚಯವೆಂದುಕೊಂಡವನಿಗೆ ಓದುತ್ತಾ ಹೋದಂತೆ ಆತ್ಮೀಯ ಮಿತ್ರ ಪ್ರಕಾಶರ ಪರಿಚಯವೆಂದರಿವಾಗಿ ಸಂತಸವಾಯಿತು. ಸಾಧನೆಗೆ ಅಂಗವೈಕಲ್ಯ ಅಡ್ಡಿಯಾಗಲಾರದು. ನಿಮಗೂ, ಪ್ರಕಾಶರಿಗೂ ಅಭಿನಂದನೆಗಳು.

Submitted by hariharapurasridhar Thu, 01/31/2013 - 16:03

In reply to by kavinagaraj

ಯಾರೋ ಪುಣ್ಯಾತ್ಮರು ಮರಲಲ್ಲಿ ವಿವೇಕಾನಂದರನ್ನು ಮೂಡಿಸುತ್ತಿದ್ದಾರೆ! ನೋಡಿ
https://fbcdn-sphotos-f-a.akamaihd.net/hphotos-ak-snc7/385199_10152468736185693_1678767041_n.jpg

Submitted by H A Patil Thu, 01/31/2013 - 20:14

ಹರಿಹರಪುರ ಶ್ರೀಧರ ರವರಿಗೆ ವಂದನೆಗಳು,
ಇರಬೇಕು ಇಂತಹ ಛಲ, ಲೇಖನ ಮತ್ತು ಚಿತ್ರ ಮನ ಕಲುಕಿದವು. ಅದರಲ್ಲೂ ಸಂಪದದ ಬರಹಗಾರ ಪ್ರಕಾಶ ರವರ ಬಗೆಗೆ ತಾವು ಬರೆದ ಮಾಹಿತಿ ಓದಿ ನನಗೆ ಓಂದು ಕ್ಷಣ ಆಘಾತ ಮತ್ತು ಆಶ್ಷರ್ಯ ಉಂಟಾದವು, ಜೊತೆಗೆ ಅವರ ಬಗ್ಗೆ ಇದ್ದ ಗೌರವ ಭಾವನೆಗಳು ಇಮ್ಮಡಿಯಾದವು, ಅವರ ಛಲ ಮತ್ತು ಸಾಧನೆಗಳು ಎಲ್ಲರಿಗೂ ಪ್ರೇರಣೆ ನೀಡುವಂತಹವು, ಧನ್ಯವಾದಗಳು.

Submitted by hariharapurasridhar Fri, 02/01/2013 - 08:44

In reply to by H A Patil

ನಾನು ಪ್ರಕಾಶರ ಬಗ್ಗೆ ಬರೆಯಬೇಕಾದರೆ ಅದರ ಯುಣಾತ್ಮಕ ಪರಿಣಾಮದ ಬಗ್ಗೆ ಸಾಕಷ್ಟು ತಲೆಕೆಡಸಿಕೊಂಡಿದ್ದೆ.ಹಾಗಾಗಿ ಯೋಚಿಸಿದ್ದು ಬಹಳ ಹೊತ್ತು ಬರೆದದ್ದು ಐದು ನಿಮಿಷವೂ ಇಲ್ಲ. ನಿಜವಾಗಿ ವರ ಬಗ್ಗೆ ಅವರ ಅನುಮತಿ ಪಡೆದು ಬರೆಯ ಬೇಕಾದ್ದು ಬಹಳಷ್ಟು ಇದೆ.

Submitted by viru Sat, 03/09/2013 - 09:57

ಛಲವು ತುಂಬಿದೆ ಮನದೊಳಗೆ
ಬಲವು ತುಂಬಿದೆ ಮನದೊಳಗೆ
ಕೈ ಇಲ್ಲ ಕಾಲು ಇಲ್ಲ ನನಗೆ
ಆದರೂ ಬದುಕುವ ಚಲ ನನಗೆ
ಬಾಯಿಂದಲೇ ಕಲೆಗೆ ಬೆಲೆ ಕೊಡುವೆ
ಕಲ್ಲಿಗೆ ರೂಪ ಕೊಡುವೆ
ಕಲ್ಲೆ ಶಿಲೆ ಆಗುವುದು ನನ್ನ ಕಲೆಯಿಂದಲೆ
ಕಲೆಯೇ ನನ್ನ ಬಾಳಿಗೆ ಆಧಾರ ಸ್ತಂಭ