ಇರಲಾರೆ ನಿನ್ನ ಬಿಟ್ಟು
#ಇರಲಾರೆ_ನಿನ್ನಬಿಟ್ಟು
ನೀ ನಿರುಕಿಸಿ ಸಿಡಿಸಿದೆ
ನೋಟವನು ನೆಟ್ಟು
ತಾಗಿ ನನ್ನೆದೆಗೆ ತಾಳದೆ
ನೀಡಿರುವ ಆ ಪೆಟ್ಟು
ಸಂತಸ ಉಕ್ಕಿ ಹರಿದು
ಮನ ತಿಂದಿದೆ ಒಬ್ಬಟ್ಟು
ಮನದರಿವು ಅರುಹಲು
ಬಂದಿಹೆ ನಾಚಿಕೆಯ ಕಟ್ಟಿಟ್ಟು
ಇರಲಾರೆ ನಾ ಇನ್ನು
ನಿನ್ನ ಸಂಗವ ಬಿಟ್ಟು
ನಿನಗೊಂದು ಹೇಳುವೆನು
ಪ್ರೀತಿಯೊಳಗಣ ಗುಟ್ಟು
ನೀ ತೋರದೆ ತಿಳಿಯಾಗು
ಕಾಳಸರ್ಪದ ಸಿಟ್ಟು
ಬಾಳ ಬಾನಾಡಿಯಾಗಲು ಬಾ
ನನ ಕರೆಗೆ ಓಗೊಟ್ಟು
ನಂದನದ ಬನದಲ್ಲಿ
ಹಾರೋಣ ಗರಿಬಿಟ್ಟು
ಜೀವನವ ಬೆಳಗೋಣ
ಹಣತೆಗಳ ಹಚ್ಚಿಟ್ಟು
ಹೋಗದಿರು ಇನ್ನಾದರೂ
ನೀ ಎನಗೆ ಕೈಕೊಟ್ಟು
ಆ ಕ್ಷಣದಿ ನಾನಾದೇನು
ಕನ್ನಡಿಯೊಳು ಮಾಲೆ ಹಾಕಿದ ಚೌಕಟ್ಟು
©ಅಜಿತ್ ಕಾಶೀಕರ್
೧೨/೦೨/೨೦೧೯
Rating