ಇರುವದೆಲ್ಲವ ಬಿಡದೆ....

ಇರುವದೆಲ್ಲವ ಬಿಡದೆ....

'ಇರುವದೆಲ್ಲವ ಬಿಟ್ಟು ಇರದುದೆಡೆಗೆ ತುಡಿವುದೇ ಜೀವನ'- ಹೌದು. ನಾವೆಲ್ಲ ಈ ಮಾತನ್ನ ಅನೇಕ ಬಾರಿ ಕೇಳಿದ್ದೇವೆ. ಆದರೆ ವಸುಧೇಂದ್ರ ಅವರು ಇದರ ಇನ್ನೊಂದು ಮಗ್ಗುಲನ್ನೂ ತಮ್ಮ ಪ್ರಬಂಧವೊಂದರಲ್ಲಿ ೩-೪ ವಾರಗಳ ಹಿಂದಿನ ಪ್ರಜಾವಾಣಿಯಲ್ಲಿ ಬರೆದಿದ್ದಾರೆ . ನೀವು ಅದನ್ನು ಓದಿರದಿದ್ದರೆ ಇಲ್ಲಿ ಕೆಲವು ಸಾಲು ಓದಿ.

ಬಳ್ಳಾರಿಯ ಭಯಂಕರ ಬಿಸಿಲಿನಲ್ಲಿ ಮಕ್ಕಳು ಬರಿಮೈಯಲ್ಲಿ ಆಡುತ್ತಾರೆ. ಜನ ಬಿಸಿಬಿಸಿ ಮೆಣಸಿನಕಾಯಿ ಭಜಿ , ಖಾರದ ಮಂಡಕ್ಕಿ ತಿಂದುಕೊಂಡು ಸಂತಸದಿಂದ ಇದ್ದಾರೆ. ದೇವರೇ ಬಳ್ಳಾರಿಯ ಜನಕ್ಕೆ ವಿಶೇಷವಾಗಿ ಈ ಬಿಸಿಲನ್ನು ದಯಪಾಲಿಸಿದ್ದಾನೆ ಎಂದು ಸಂಡಿಗೆ ಒಣಗಿಸುವ ಹೆಣ್ಣುಮಗಳು ಹೆಮ್ಮೆಪಡುತ್ತಾಳೆ!

ಕಲ್ಕತ್ತಾದಲ್ಲಿ ಅತಿಮಳೆಯಾಗಿ , ನದಿಯ ನೀರಿನ ಮಟ್ಟ ಹೆಚ್ಚಾಗಿ ಮನೆಯೊಳಕ್ಕೆ ನೀರು ಬಂದು , ಲೇಖಕರು ಮನೆಮಾಲೀಕನನ್ನು ಸಂಪರ್ಕಿಸಿದಾಗ , 'ಗಂಗಾಮಾತೆಯೇ ಮನೆಬಾಗಿಲಿಗೆ ಬಂದಿದ್ದಾಳೆ, ಆರತಿ ಮಾಡಿ , ಮೀನು ಹಿಡಿಯುವ ಸಲಕರಣೆ ತಂದುಕೊಡುತ್ತೇನೆ. ಮೀನು ಹಿಡಿಯಿರಿ!' ಎನ್ನುತ್ತಾನೆ. ಕರೆಂಟೂ ಹೋಗಿ , ಫೋನೂ ಡೆಡ್ ಆದಾಗ , 'ನಿಮ್ಮನ್ನು ಯಾರೂ ಡಿಸ್ಟರ್ಬ್ ಮಾಡುವದಿಲ್ಲ ; ಈ ಮಳೆಯಲ್ಲಿ ಬರುವವರು ಯಾರು? ದಂಪತಿಗಳು, ಮಜಾ ಮಾಡಿ' ಎಂದು ಕಣ್ಣು ಮಿಟುಕಿಸುತ್ತಾನೆ.

ಲಂಡನ್ನಿನಲ್ಲಿ ಹಿಮಪಾತವಾಗಿ ಒಬ್ಬ ಮುದುಕಿ ರಸ್ತೆಯ ಮೇಲೆ ಕಾಲು ಜಾರಿ ಬೀಳುತ್ತಾಳೆ . ಅವಳು ಎಂಥ ಹಿಮದಲ್ಲೂ ಹೊರಗೆ ತನ್ನ ಗತಿಸಿದ ಗಂಡನನ್ನು ನೆನೆಯುತ್ತಾ ಓಡಾಡುವವಳು . ಅಂಥ ಹಿಮದಲ್ಲಿ ಗಂಡನೊಂದಿಗೆ ಬರಿಮೈಯಲ್ಲಿ ಸರಸವಾಡಿದ್ದ ಹಳೆಯ ನೆನಪನ್ನೂ ಮತ್ತೆ ಹಸಿರಾಗಿಸಿಕೊಳ್ಳುತ್ತಾಳೆ! .

'ಇರುವದೆಲ್ಲವ ಬಿಡದೆ..' ಹೆಸರಿನ ಈ ಪ್ರಬಂಧ ಸಿಗುವದಾದರೆ ಹುಡುಕಿ ಓದಿ.

Rating
No votes yet

Comments