ಇರುವರ್(ಇದ್ದರು- ತೆಲುಗು) - ಡ್ಯುಯೋ (ಇಂಗ್ಲಿಷ್) - 1997 ಚಿತ್ರ-ಎಂ ಜಿ ಅರ್ -ಕರುಣಾನಿಧಿ ಕಥಾನಕ?
ಚಿತ್ರ
ತಮಿಳುನಾಡು ಎಂದ ಕೂಡಲೇ ಕಾವೇರಿ ಜಲ ವಿವಾದವೇ ಮೊದಲು ನೆನಪಾಗುವದು.
ನೀರಿನ ವಿಷಯವಾಗಿ ಆಗಾಗ ಕ್ಯಾತೆ ತೆಗೆಯುವ ಈ ರಾಜ್ಯದ ಜನ-ಜನ ನಾಯಕರು ಹೇಗೆ?
ಅಲ್ಲಿನ ಜನರ ಸಂಸ್ಕೃತಿ-ವೇಷ ಭೂಶಣ ,ಸಿನೆಮ ನಟರ ಆರಾಧನೆ -ಇತ್ಯಾದಿ ಸದಾ ನನ್ನ ಗಮನ ಅಂಶಗಳು..
ಹಾಗೊಮ್ಮೆ ನೆಟ್ನಲ್ಲಿ ಕಣ್ಣಾಡಿಸುವಾಗ ಸಿಕ್ಕಿದ್ದೇ ಈ ಚಿತ್ರದ ವಿವರ-ಆ ಚಿತ್ರದ ಬಗ್ಗೆ ನನ್ನ ಕುತೂಹಲ ಹೆಚ್ಚಲು ಕಾರಣ
ನಿರ್ದೇಶಕ ಮಣಿ ರತ್ನಂ-ಮತ್ತು ಚಿತ್ರದ ಕಥೆ- ನಟ ವರ್ಗ...
ತಮಿಳರ ಆರಾಧ್ಯ ದೈವ ಚಿತ್ರ ನಟ-ರಾಜಕಾರಣಿ ಎಂ ಜೀ ಆರ್ ಮತ್ತು ಸ್ನೇಹಿತ-ಚಿತ್ರ ಕಥೆ -ಹಾಡು ರಚನೆಕಾರ ರಾಜಕಾರಣಿ ಕರುಣಾನಿಧಿಯವರ ಸ್ನೇಹ -ಏಳಿಗೆ -ಅಭಿವೃದ್ಧಿ ,ವಿರಸ-ತಂತ್ರ -ಕುತಂತ್ರ ,ಸಂಚು ವಯುಕ್ತಿಕ ಬದುಕಿನ ಬಗೆಗಿನ ಈ ಚಿತ್ರ ಬಾಕ್ಸ್ ಆಫೀಸಲ್ಲಿ ಸದ್ದು ಮಾಡಿದ್ದಕ್ಕಿಂತ ಸುದ್ಧಿ ಆದದ್ದೇ ಹೆಚ್ಚು.
ಕಥೆ:
====
ಚಿತ್ರ ನಟನಾಗಲು ಕಾತರಿಸುವ - ಅದ್ಕೆ ತಕ್ಕಂತೆ ಪ್ರತಿಭೆ ಇರುವ ಆನಂದ್ -ಆನಂದಂ (ಮೋಹನ್ ಲಾಲ್-ಎಂ ಜೀ ಆರ್ ಪಾತ್ರಧಾರಿ ) ಹಲವರ ಬಳಿ ಅವಕಾಶಗಳಿಗಾಗಿ ಕೈ ಮಡಚಿ -ಸೊಂಟ ಬಗ್ಗ್ಸಿ ಯಾಚಿಸಿ ಕೆಲವು ಸಣ್ಣ ಪುಟ್ಟ ಪಾತ್ರಗಳ ಮೂಲಕ ಚಿತ್ರ ರಂಗ ಪ್ರವೇಶಿಸಿ ತನ್ನ ಪ್ರತಿಭೆ ಮೂಲಕ ನಾಯಕನಟನಾಗಿ ಆಯ್ಕೆಯಾಗಿ ಆ ಮಧ್ಯೆ ಆ ಚಿತ್ರ ಕೆಲವು ಕಾರಣಗಳಿಂದ ನಿಂತುಹೋಗಿ ಮತ್ತೆ ಪ್ರಾಮುಖ್ಯ ಇಲ್ಲದ ಸಣ್ಣ ಪುಟ್ಟ ಪಾತ್ರಗಳನ್ನೂ ಮಾಡಬೇಕಾಗಿ ಬರುವುದು..
ಖ್ಯಾತ ನಿರ್ದೇಶಕರೊಬ್ಬರ ಕೃಪಾಶೀರ್ವಾದ ದೊರಕಿ ಖ್ಯಾತ ಚಿತ್ರ ನಿರ್ಮಾಣ ಸಂಸ್ಥೆಯ ಚಿತ್ರಕ್ಕೆ ನಾಯಕನಾಗಿ ಆ ಚಿತ್ರ ಅರ್ಧಕ್ಕೆ ನಿಂತಾಗ ಮುಂದಿನ ಭವಿಷ್ಯ ಮಸುಕಾಗಿ -ಹಿತ ಶತ್ರುಗಳ ಚೇಡಿಸುವಿಕೆ -ವ್ಯಂಗ್ಯ ಸಹಿಸಿಕೊಂಡು ಕೆಲವು ಚಿತ್ರಗಳಲ್ಲಿ ಸಹಾಯಕ -ಪೋಷಕ ಪಾತ್ರಧಾರಿ ಆಗುವನು..
ಅದೊಮ್ಮೆ ಚಿತ್ರ ಕಥೆ -ಹಾಡು ಬರೆವ ತಮಿಳ್ ಸೆಲ್ವಂ (ಪ್ರಕಾಶ್ ರೈ-ಕರುಣಾನಿಧಿ ಪಾತ್ರಧಾರಿ )ಯ ಭೇಟಿ ಆಗಿ ಆನಂದಂನ ತಾದ್ಯಾತ್ಮ ನಟನೆ -ಬಗ್ಗೆ ತಮಿಳ್ ಸೆಲ್ವಂ ಮೆಚ್ಚುಗೆ -ಭರವಸೆಯ ನಟ ಎಂಬ ಹೊಗಳಿಕೆ ಹಾಗೆಯೇ ತಮಿಳ್ ಸೆಲ್ವಂ ಒಬ್ಬ ಕ್ರಾಂತಿಕಾರಿ ಹೋರಾಟಗಾರ -ಬರಹಗಾರ ಎಂದು ಪರಸ್ಪರ ಮೆಚ್ಚುಗೆ ವ್ಯಕ್ತಪಡಿಸುತ್ತಾ ಸ್ನೇಹಿತರೂ ಆಗುವರು ..
ಆ ನಂತರ ಆನಂದಂ ಒಂದರ ನಂತರ ಒಂದು ಚಿತ್ರಗಳಿಗೆ ನಾಯಕನಾಗುತ್ತ ಆ ಸಿನೆಮಾಗಳಿಗೆ ತಮಿಳ್ ಸೆಲ್ವಂ ಚಿತ್ರ ಕಥೆ-ಹಾಡು ಬರೆಯುತ್ತ ಎಲವೂ ಹಿಟ್ ಆಗಿ ಆನಂದಂ ಒಬ್ ಜನಪ್ರಿಯ ಚಿತ್ರ ನಟನಾಗಿ ಹೊರಹೊಮ್ಮುವನು..
ಆ ಮಧ್ಯೆ ಅದಕ್ಕೂ ಮೊದಲು ಆನಂದಂಗೂ ಮದುವೆಯಾಗಿ ಹೆಂಡತಿ ಅಕಾಲಿಕ ಮರಣಕ್ಕೆ ತುತ್ತಾಗಿರುವಳು,ಈ ಮಧ್ಯೆ ಸಹ ನಟಿ ಒಬ್ಬಳನ್ನು (ಗೌತಮಿ ) ಪ್ರೇಮಿಸಿ ಮದುವೆಯಾಗಿರುವ ಎಂ ಜೀ ಆರ್ ಜೀವನದಲ್ಲಿ ಒಬ್ಬಳು ಸಹ ನಟಿ (ಜಯ ಲಲಿತ.!-ಐಶ್ವರ್ಯ ರೈ )ಯ ಪ್ರವೇಶ, ಇತ್ತ ತಮಿಳ್ ಸೆಲ್ವಂ ಬದುಕಲಿ ಇವರ ಕ್ರಾಂತಿಕಾರಿ ಹೋರಾಟ -ಬರಹಗಳು -ಮೆಚ್ಚಿ ಜೊತೆಗೆ ಇರಬಯಸುವ ಒಬ್ಬ ಹುಡುಗಿ (ನಟಿ -ತಬು) ,ಅದಾಗಲೇ ತಮಿಳ್ ಸೇಲ್ವಮ್ಗೆ ಮದುವೆಯೂ ಆಗಿದೆ (ನಟಿ ರೇವತಿ )..!
ಇತ್ತ ಚಿತ್ರ ಕಥೆ-ಹಾಡು ರಚನೆಯ ಜೊತೆ ಜೊತೆ ತಮಿಳುನಾಡಲ್ಲಿ ಹೊಸ ರಾಜಕೀಯ ಕ್ರಾಂತಿ-ಜನ ಜಾಗೃತಿ ಮೂಡಿಸುವ -ನಿಟ್ಟಿನಲ್ಲಿ ಹೊಸ ಪಕ್ಷ ಹುಟ್ಟು ಹಾಕಿ ಅದಕ್ಕೆ ಜನರನ್ನು ಕರೆ ತರುವ -ಒಗ್ಗೂಡಿಸುವ ಸಾರಥಿಗಳನ್ನು ಹುಡುಕುತ್ತಿದ್ದ ಅಣ್ಣಾದೊರೈ (ಆ ಪಾತ್ರಧಾರಿ- ನಾ(ಜ)ಸರ್) ಗೆ ತಮಿಳ್ ಸೆಲ್ವಂ ಸಿಕ್ಕಿ ಆ ಪಕ್ಷದಲ್ಲಿ ಸೇರಿ ಜೊತೆಗೆ ಜನರನ್ನು ಸೆಳೆವ ಚಿತ್ರ ನಟ ಆನಂದಂ (ಎಂ ಜೀ ಆರ್ -ಮೋಹನ್ಲಾಲ್ )ನನ್ನು ಸೇರಿಸಿಕೊಂಡು ಹಲವು ಸಭೆ ಸಮಾರಂಭ ನಡೆಸಿ ಚುನಾವಣೆಯಲ್ಲಿ ಗೆದ್ದು ಅಧಿಕಾರ ನಡೆಸುವ ಸಂದರ್ಭ ಬಂದಾಗ -ಯಾರು ಮುಖ್ಯಮಂತ್ರಿ ಆಗಬೇಕು ಎಂದು ಅಣ್ಣಾದೊರೈ ಮತ್ತು ತಂಡ ಮೊದಲೇ ನಿರ್ಧರಿಸಿ ಆ ಬಗ್ಗೆ ಹೇಳಲು ಆನಂದಂ (ಎಂ ಜೀ ಆರ್-ಮೋಹನ್ಲಾಲ್) ನನ್ನು ಕರೆಸಿ -ಕರುಣಾನಿಧಿ (ತಮಿಳ್ ಸೆಲ್ವಂ-ಪ್ರಕಾಶ್ ರೈ )ಯನ್ನು ಹೊರಗೆ ಇರಲು ಹೇಳಿದಾಗ -ತನ್ನ ಬದಲಿಗೆ ಆನಂದಂ ಈ ರಾಜ್ಯದ ಮುಖ್ಯಮಂತ್ರಿ ಆಗುವ- ಸಂಭವನೀಯತೆ ಅರಿತು ಮನದಲ್ಲೇ ಕ್ರುದ್ಧನಾಗುವನು ತಮಿಳ್ ಸೇಲ್ವಮ್..
ಆದರೆ ಒಳಗೆ ರಹಸ್ಯ ಸಭೆ ನಡೆಸಿ -ಅಣ್ಣಾ ದೊರೈ ಮತ್ತು ತಂಡದ ಆಯ್ಕೆ ತಾನೇ ಆಗಿದ್ದರೂ ರಾಜಕೀಯ ಸಧ್ಯಕೆ ಬೇಡ ಎಂದು ಸಾಮಾನ್ಯ ಕಾರ್ಯಕರ್ತ ಆಗಿರುವೆ -ನನ್ನ ಗೆಳೆಯ ತಮಿಳ್ ಸೆಲ್ವಂನನ್ನು ಆ ಪೀಠಕ್ಕೆ ಕೂರಿಸಿ ಎಂದು ಹೇಳಿ ಹೊರ ಬಂದು ಅದನೆ ಗೆಳೆಯನಿಗೆ ಹೇಳಿ ಶಾಕ್ ಕೊಡುವನು...!!
ತಮಿಳ್ ಸೆಲ್ವಂ (ಕರುಣಾ ನಿಧಿಯ ಪಾತ್ರಧಾರಿ -ಪ್ರಕಾಶ್ ರೈ )ಮುಖ್ಯಮಂತ್ರಿಯಾಗಿ ಅಧಿಕಾರ ನಡೆಸುತ್ತ ಅಧಿಕಾರ ರುಚಿ ಹತ್ತಿ ,ಮೂಲ ತತ್ವಗಳು ಮರೆತು ಸ್ನೇಹಿತನ ಚಿತ್ರರಂಗದ ಜನಪ್ರಿಯತೆ ಸಹಿಸಲಾಗದೆ ಆದಷ್ಟು ದೂರ ಇರಿಸಲು ಪ್ರಯತ್ನಿಸಿ ವಿಫಲನಾಗಿ ಪಕ್ಷದಿಂದ ಹೊರ ದಬ್ಬುವನು..:((
ಈ ಆಘಾತವನ್ನು ಮರೆ ಮಾಚಿ ಸಹಜವಾಗಿದ್ದು ಜನರಿಗೆ ತಿಳಿ ಹೇಳಿ-ತಾನೂ ರಾಜಕೀಯಕ್ಕೆ ಧುಮುಕುವ ನಟ ಆನಂದಂ (ಎಂ ಜೀ ಆರ್) ಚುನಾವಣೆಯಲ್ಲಿ ಗೆದ್ದು ತನ್ನ ಸ್ನೇಹಿತನ ಪಕ್ಷವನ್ನು ಸೋಲಿಸಿ ಮುಖ್ಯಮಂತ್ರಿಯಾಗುವನು ....!
ಆಮೇಲೆ ಏನಾಗುತ್ತೆ?
ಇಬ್ಬರ ತಂತ್ರ-ಕುತಂತ್ರ -ದ್ವೇಷದ ಮಟ್ಟ ಎಲ್ಲಿಗೆ ತಲುಪಲಿದೆ?
ಚಿತ್ರ ನೋಡಿ
ಕೆಲವು ಸನ್ನಿವೇಶಗಳು :
==================
1.ಹಳ್ಳಿಯಲ್ಲಿ ರಂಗ ನಾಟಕಗಳಲಿ ಅಭಿನಯಿಸುತ್ತಾ ಚಿತ್ರ ರಂಗ ಸೇರಲು ಕಾತರಿಸುವ ಶ್ರಮಿಸುವ ಆನಂದಂ -ಸಹಕಾರ ಕೊಡುವ ನವ ವಧು -ತಂದೆ ತಾಯಿ ಬಳಗ.
2.ಖ್ಯಾತ ಚಿತ್ರ ತಯಾರಿಕ ಸಂಸ್ಥೆಗೆ ಮುಖ್ಯ ಪಾತ್ರಧಾರಿ -ನಾಯಕ ನಟ ಆಗಿ ಆಯ್ಕೆಯಾಗುವ ಸಂದರ್ಭ.ಭವಿಷ್ಯದ ನಟ ತಾ ಎಂಬ ಕನಸು ಕಾಣುವ ಸಂದರ್ಭ..
3.ಇದ್ದಕ್ಕಿದ್ದಂತೆ ಚಿತ್ರ ನಿರ್ಮಾಣ ನಿಂತು ಮೊದಲ ಚಿತ್ರವೇ ಪೂರ್ಣವಾಗದೆ -ಇತರರ ಚಿತ್ರಗಳಿಗೂ ಬೇಡವಾಗಿ ಅವರ ಕುಹಕ - ನಿಂದನೆ -ಮೂದಲಿಕೆ ಆ ನಂತರ ಚಿತ್ರ ಒಂದರಲ್ಲಿ ಪ್ರಮುಖ ಪಾತ್ರದಲ್ಲಿ ನಟಿಸುವಾಗ ತಪ್ಪು ಆಗಿ ಪ್ರಾಮುಖ್ಯವಲ್ಲದ ಪಾತ್ರದಲ್ಲಿ ನಟಿಸುವ ಹಗೆ ಆಗುವುದು.
4.ಆನಂದಂ -ತಮಿಳ್ ಸೆಲ್ವಂ ಮೊದಲ ಭೇಟಿ-ಮಾತು ಕಥೆ-
5.ಆನಂದಂ ಖ್ಯಾತ ನಟ ಆಗುವ ಸಂದರ್ಭಗಳು-ತಮಿಳ್ ಸೆಲ್ವಂ ರಾಜಕೀಯ ಪ್ರವೇಶ.ಇಬ್ಬರ ಜೀವನದಲ್ಲೂ ಮದುವೆಯ ಅನಂತರವೂ ಅದು ಗೊತ್ತಿದ್ದೂ ಆಗಮಿಸುವ- ಜೊತೆ ಇರಬಯಸುವ ಹೆಣ್ಣುಗಳ ಸನ್ನಿವೇಶಗಳು..
6.ಸ್ನೇಹಿತನ ಒತ್ತಾಯಕ್ಕೆ ಮಣಿದು ತಾನೂ ರಾಜಕೀಯಕ್ಕೆ ಸೇರುವ -ಸಭೆ ಸಮಾರಂಭಗಳಲ್ಲಿ ತಮಿಳ್ ಸೆಲ್ವಂ-ಅಣ್ಣಾದೊರೈ ಗಿಂತಲೂ ಹೆಚ್ಚಿನ ಪ್ರಾಮುಖ್ಯತೆ ಗಳಿಸುವ -ಚಪ್ಪಾಳೆ ಗಿಟ್ಟಿಸುವ -ಅದ ನೋಡಿ ಅಣ್ಣ ದೊರೈ ಅಚ್ಚರಿ ಪಡುವ-ಕರುಣಾ ನಿಧಿ ತನಗೊಬ್ಬ ಶತ್ರು -ಹಿತ ಶತ್ರು -ತನ್ ಸ್ನೇಹಿತನ ರೂಪದಲಿ ಇರುವನು ಎಂದು ಯೋಚಿಸುವ ದೃಶ್ಯಗಳು .!
7.ಚುನಾವಣೆಯಲ್ಲಿ ಗೆದ್ದು ಮುಖ್ಯಮಂತ್ರಿಯಾಗಿ ತಾನೇ ಸರ್ವಸಮ್ಮತ ಆಗಿದ್ದರೂ ಅದನ್ನು ನಿರಾಕರಿಸಿ ಅದನ್ನು ಗೆಳೆಯ ತಮಿಳ್ ಸೆಲ್ವಮ್ಗೆ ಕೊಡಿಸುವ ದೃಶ್ಯ.
8.ಮುಖ್ಯಮಂತ್ರಿಯಾಗಿ ಅಧಿಕಾರ ರುಚಿ ಹತ್ತಿ-ತನ್ ಪಕ್ಷದೊಳು ತನಗೊಬ್ಬ ಶತ್ರು ಇರುವನು ಎಂದು ಆನಂದಂನನ್ನು ಕೇರ್ ಮಾಡದ ತಮಿಳ್ ಸೆಲ್ವಂ-ಆ ಮಧ್ಯೆ ಅಣ್ಣ ದೊರೈ ಹಠಾತ್ ಮರಣ.ತಾನೇ ಪಕ್ಷದ ಮುಖ್ಯಸ್ಥ-ನಿರ್ಣಾಯಕ ಆಗಲು ಹವಣಿಸುವ ತಮಿಳ್ ಸೆಲ್ವಂ..
9.ಆನಂದಂ ನನ್ನು ದೂರ ದೂರ ಮಾಡುತ್ತಾ ಆದಸ್ಟು ತುಳಿಯುತ್ತ ಕೊನೆಗೆ ಪಕ್ಷದಿಂದಲೇ ಉಚ್ಚಾಟಿಸುವ -ಅದಕ್ಕೆ ಕೂಲ್ ಆಗಿ ಪ್ರತಿಕ್ರಿಯಿಸುತ್ತ ಆನಂದಂ ತನ್ನ ರಾಜಕೀಯ ಪ್ರವೇಶ ಶುರು ಮಾಡುವ ದೃಶ್ಯಗಳು..
10.ಇಬ್ಬರೂ ತಂತಮ್ಮ ಮೂಲ ಉದ್ಧೇಶಗಳು -ತತ್ವಗಳು-ಆದರ್ಶಗಳು ಬಿಟ್ಟು ಆಧಿಕಾರಕಾಗಿ-ತಂತಮ್ಮ ಸ್ಥಾನ ಭಧ್ರ ಪಡಿಸಿಕೊಳ್ಳಲು ಒಬ್ಬರನ್ನೊಬ್ಬರು ಹಣಿಯಲು ಬಳಸುವ ತಂತ್ರಗಳು -ಮಾಡುವ ಕುತಂತ್ರ- ಮೋಸ...!ಸನ್ನಿವೇಶಗಳು..
11.ಆನಂದಂ ಚುನಾವಣೆಯಲ್ಲಿ ಜಯಭೇರಿ ಬಾರಿಸಿ -ತಮಿಳ್ ಸೆಲ್ವಂ ಪಕ್ಷ ಸೋತು ಆ ಬಗ್ಗೆ ತಲೆ ಕೆಡಿಸಿಕೊಳ್ಳದೆ ತನ್ನ ಮನೆಯಲ್ಲಿ ಕೂಲಾಗಿ ಮೊಮ್ಮಗನೊಡನೆ ಆಟ ಆಡುವ -ಆ ಸಮಯದಲ್ಲಿ ಪಕ್ಷದವರೊಡನೆ ಆಡುವ ಮಾತುಗಳು..ನೀಡುವ ಪ್ರತಿಕ್ರಿಯೆಗಳು..
12. ಇಬ್ಬರೂ ವಿಧಾನ ಸಭೆಯಲ್ಲಿ ವಾಗ್ಯುದ್ಧ -ವಾಕ್ಸಮರ ನಡೆಸುವಾಗ ಬರುವ ಕೆಟ್ಟ ಸುದ್ಧಿ ..
13.ಸತ್ತ ತನ್ನ ಹೆಂಡತಿ ಈಗ ಮತ್ತೆ ಯುವ ಚಿತ್ರ ನಟಿಯ(ಐಶ್ವರ್ಯ ರೈ ) ಅದೂ ಥೇಟ್ ಅದೇ ರೂಪದಲಿ ತನ್ನೊಡನೆ ನಟಿಸುವಾಗ- ಆನಂದಂಗೆ ಆಗುವ ಅನುಭೂತಿ..!!
14.ಅಣ್ಣಾದೊರೈ ಅಕಾಲಿಕ ಹಠಾತ್ ಮರಣ-ಪಕ್ಷದ ಸೂತ್ರಧಾರ ಯಾರು ಆಗಬೇಕು ಎಂದು ಪಕ್ಷದಲ್ಲೇ ಒಡಕು ಆಗುವ ಸಂದರ್ಭ-
15.ಅಣ್ಣಾದೊರೈ ತಿಥಿ ಸಂದರ್ಭದಲ್ಲಿ ಬಹಿರಂಗವಾಗಿ ಪಕ್ಷ-ಕೆಲ ವ್ಯಕ್ತಿಗಳು ಮೂಲ ಉದ್ಧೇಶ -ತತ್ವ ಮರೆತು ಅಧಿಕಾರ ವ್ಯಾಮೊಹದಲ್ಲಿರುವರು ಎಂದು ಆನಂದಂ ಹೇಳುವ -ತಮಿಳ್ ಸೆಲ್ವಂ ಗರಂ ಆಗುವ ದೃಶ್ಯಗಳು.
16.ಆನಂದಂ ಹಠಾತ್ ಉಚ್ಚಾಟನೆ -ಆಗ ಆನಂದಂಗೆ ಆಗುವ ಆಘಾತ-ತನ್ನ ನಂಬಿಕೆಗೆ ಆದ ದ್ರೋಹ -ಆ ಮಧ್ಯೆ ಈ ಬಗ್ಗೆ ಅಭಿಪ್ರಾಯ ಕೇಳಿ ಸಂದರ್ಶನ ಮಾಡಲು ಬಂದ ಮಾಧ್ಯಮ ಪ್ರತಿನಿಧಿಗಳಿಗೆ ನಗುನಗುತ್ತ ಸಂದರ್ಶನ ನೀಡಿ ಮನದಲ್ಲಿ ಆಂದೋಲನವೆದ್ದರೂ ನಗುತ ನಗೆ ಚಟಾಕಿ ಹಾರಿಸುತ್ತ ಪಾಯಸ ನೀಡಿ ಸತ್ಕರಿಸುವ ಮಾಧ್ಯಮದವರನ್ನು ಮಿತ್ರರನ್ನಾಗಿ ಮಾಡಿಕೊಳ್ಳುವ ಸನ್ನಿವೇಶ.!!
17.ಒಬ್ಬರನ್ನೊಬ್ಬರು ಹಣಿಯಲು -ಅಧಿಕಾರಕೆ ಬರಲು-ಅಧಿಕಾರ ತಪ್ಪಿಸಲು ಪಡುವ ಶ್ರಮ-ಪ್ರಯತ್ನಗಳು -ಇಬ್ಬರ ಹೆಂಡತಿಯರು -ಪ್ರೇಯಸಿ ತಮ್ಮವರ ಬದಲಾದ ಮನೋಸ್ಥಿತಿ -ಅಧಿಕಾರ ಮೋಹ -ಅಸಹನೆ ಬಗ್ಗೆ ಪ್ರಶ್ನಿಸುವಾಗ ಆನಂದಂ -ತಮಿಳ್ ಸೆಲ್ವಂ ನೆಡುವ ಸಮಜಾಯಿಷಿ -ಸೃಷ್ಟೀಕರಣಗಳು..!
18.ವಿಧಾನ ಸಭೆಯಲ್ಲಿ ಆನಂದಂ-ತಮಿಳ್ ಸೆಲ್ವಂ ಎದುರು ಬದುರಾಗಿ ಕುಳಿತು -ಎದ್ದು ನಿಂತು ವಾಗ್ಯುದ್ಧ ನಡೆಸುವ -ದೃಶ್ಯಗಳು ಆ ಕಣ್ಣೋಟ.....!
19.ನೈಸರ್ಗಿಕ ಅವಘಡದಲಿ ಮೃತರಾದವರ -ಮನೆ ಮಠ ಕಳೆದುಕೊಂಡವರ ಬಗ್ಗೆ ಪ್ರತ್ಯಕ್ಷ ನೋಡಲು ಬಂದು ಆ ಸಮಯದಲ್ಲೇ ಅದೊಮ್ಮೆ ತನ್ ಧಿಕಾರ ದಾಹ-ವ್ಯಾಮೋಹದಿಂದ ದೂರಾಗಿದ್ದ ಯುವ ನಟಿ (ಐಶ್ವರ್ಯ ರೈ -ಜಯಲಲಿತಾ )ಯನ್ನ ಕಾಣುವದು -ಅವಳು ಮತ್ತೊಮ್ಮೆ ಜೀವನದಲ್ಲಿ ಪ್ರವೇಶಿಸುವ-ದೃಶ್ಯಗಳು.
20.ಚಿತ್ರೀಕರಣದಲ್ಲಿ ಗುಂಡು ತಗುಲಿ ಜೀವನ್ಮರಣದ ಮಧ್ಯೆ ಹೋರಾಡಿ ಗೆದ್ದು ಬಂದರೂ ಏನೋ ಕಳೆದುಕೊಂಡ ಭಾವದ ಆನಂದಂ ..!
21. ಕೊನೆಯ ಬಾರಿಗೆ ಆನಂದಂ ಮತ್ತು ತಮಿಳ್ ಸೆಲ್ವಂ ಮದುವೆ ಒಂದರಲ್ಲಿ ಭಾಗಿಯಾಗಿ ಪರಸ್ಪರ ಮಾತಾಡುತ್ತ ಆಗಲೂ ಇಬ್ಬರೂ ಇಗೋ ವ್ಯಕ್ತಪಡಿಸುವ -ಇವರ ಮರು ಸೇರುವಿಕೆ ಕಂಡು ಕಣ್ಣುದುಂಬಿ ಬರುವ ಜನ-ಆ ಸನ್ನಿವೇಶವನ್ನು ಸೆರೆ ಹಿಡಿಯಲು ಮುಗಿ ಬೀಳುವ ಮಾಧ್ಯಮದವರು .ಒಂಥರಾ ಆಘಾತದಿಂದ ಹೃದಯಾಘಾತಕ್ಕೆ ಈಡಾಗಿ ಆಸ್ಪತ್ರೆ ಸೇರಿ ಮರಣಿಸುವ ಆನಂದಂ.
22.ಗೆಳೆಯನನ್ನು ನೋಡಬೇಕು ಎಂದು ಬಂದು ನೋಡಲು ಆಗದೆ ಚಡಪಡಿಸುವ ತಮಿಳ್ ಸೆಲ್ವಂ.ಅದೊಮ್ಮೆ ತಾವಿಬ್ಬರೂ ಸೇರಿದ್ದ -ಮಾತಾಡಿದ ಓಡಾಡಿದ್ದ ಜಾಗದಲ್ಲಿ ಒಬ್ಬನೇ ಕುಳಿತು ಹಾಡು ಹಾಡುವ ಗೆಳೆಯನಿಗೆ ಸಂತಾಪ ವ್ಯಕ್ತಪಡಿಸುವ ತಮಿಳ್ ಸೆಲ್ವಂ,
23.ಆನಂದಂ ಅಂತಿಮ ಯಾತ್ರೆಯಲ್ಲಿ ಇಕ್ಕೆಗಳಲ್ಲಿ ಸೇರಿರುವ -ಹೂ ಎರಚುವ -ತಮ್ಮ ಅಭಿಮಾನದ ನಟ-ರಾಜಕರಣಿಯ ನಿಧನ ಸಹಿಸಲು ಆಗದೆ ರೋಧಿಸುತ್ತಿರುವ ಜನಸ್ತೋಮ..- ಇದು ನಮಗೆ ಡಾ:ರಾಜಕುಮಾರ ಅವರ ಅಂತಿಮ ಯಾತ್ರೆಯನ್ನು ನೆನಪಿಸದೆ ಇರದು...
>>>ಈ ಚಿತ್ರದಲ್ಲಿ ಎಂ ಜೀ ಆರ್ ಅವರನ್ನು ಸಾಫ್ಟ್ ಆಗಿ ತೋರಿಸಿ ಕರುಣಾನಿಧಿ ಅವರನ್ನು ಒಂಥರಾ ವಿಲನ್ ತರಹಾ ತೋರಿಸಿರುವರು ಅಂತಾ...!
>>>>>> ಮಲಯಾಳಿ ಬಾಬು -ಎಂ ಜೀ ಆರ್ ತಮಿಳುನಾಡಲ್ಲಿ ಜನಪ್ರಿಯ ನಟ ಆಗಿ-ರಾಜಕಾರಣಿಯಾಗಿ ಯಶಸ್ವಿಯಾದದ್ದು.ಜನರ ಅಭಿಮಾನ ಗಳಿಸಿ ಇಂದಿ
ಗೂ ತಮ್ಮ ಜನಪ್ರಿಯತೆ ಉಳಿಸಿಕೊಂಡಿರುವುದು..
>>>>>ಮಲಯಾಳಿ ನಟ ರಾಜಕಾರಣಿ -ಪಾತ್ರಕ್ಕೆ ಮಲಯಾಳಿ ಪ್ರತಿಭಾವಂತ ನಟ ಮೋಹನ ಲಾಲ್ ಅವರನ್ನೇ ಆಯ್ಕೆ ಮಾಡಿದ ನಿರ್ದೇಶಕರ ಜಾಣತನ.
>>>>>>>>> ಕರುಣಾ ನಿಧಿ ಪಾತ್ರದಲ್ಲಿ ಕನ್ನಡಿಗ ಪ್ರಕಾಶ್ ರೈ ನಟನೆ ಸೂಪರ್ -ಇದೇ ಮಾತು ಮೋಹನ್ ಲಾಲ್ ಅವರಿಗೂ ಅನ್ವಯ...
>>>ಕಾಲಾಪಾನಿ ಚಿತ್ರದ ನಂತರ ಮೋಹನ್ ಲಾಲ್ ಅವ್ರಿಗೆ ದೊರೆತ ಅತ್ಯುತ್ತಮ ಪಾತ್ರ-ಅವರಿಂದ ಅತ್ಯುತ್ತಮ ನಟನೆ..
>>>>> ಚಿತ್ರದ ಪಾತ್ರವರ್ಗದಲ್ಲಿ ಅದಕ್ಕೆ ತಕ್ಕುದಾದವರನ್ನ ಆಯ್ಕೆ ಮಾಡಿರುವ ನಿರ್ದೇಶಕರ ಜಾಣತನ-ನಟರ ನಟನೆ ಸೂಪರ್..
>>>>>> ಈ ಚಿತ್ರ ಆದಸ್ಟು ಎಂ ಜೀ ಆರ್ ಮತ್ತು ಕರುಣಾನಿಧಿ ಅವರ ಗೆಳೆತನ -ಬೆಳವಣಿಗೆ- ಮತ್ಸರ-ಗಳ ಬಗ್ಗೆ ತೋರಿಸಲು ಸಾಧ್ಯವಾಗಿಸಲು ಪ್ರಯತ್ನಿಸಿದ ನಿರ್ದೇಶಕರ ಪ್ರಯತ್ನ ತಕ್ಕ ಮಟ್ಟಿಗೆ ಯಶಸ್ವಿಯಾಗಿದೆ..
>>>>> ಚಿತ್ರ ತೆಗೆವಾಗ-ತೆಗೆದ ನಂತರ ಅಂದಿನ ರಾಜಕಾರಣಿಗಳು-ಅಭಿಮಾನಿಗಳು ಹಲವು ಹೋರಾಟ ಮಾಡಿ -ಕಥೆಯಲಿ-ಬದಲಾವಣೆಗೆ -ಕೆಲವು ಕಟ್ ಸನ್ನಿವೇಶಗಳಿಗೆ ಆಗ್ರಹಿಸಿ ನಿರ್ದೇಶಕರಿಗೆ ತೊಂದರೆ ಕೊಟ್ಟದ್ದು ಉಂಟು..! ಅದರ ಪರಿಣಾಮ ಚಿತ್ರ ನೋಡುವಾಗ ಕೆಲವೊಮ್ಮೆ ಏನೂ ಕೇಳಿಸದು-ಇನ್ನು ಕೆಲವು ಕಡೆ 2ನೆ ಮೆಟ್ಟಿಲಿನಿಂದ ನೇರ 3-4-5ಕೆ ಜಿಗಿವ ಅನುಭವ..:ಸೆನ್ಸಾರ್ ಕಟ್..!!
ಇಡೀ ಚಿತ್ರದ ಪಾತ್ರವರ್ಗ -ತಂತ್ರಜ್ಞರು -ತಂಡ ಪಟ್ಟಿರಬಹುದಾದ ಶ್ರಮ ಚಿತ್ರದಲ್ಲಿ ಗೋಚರವಾಗುವುದು.
ಒಬ್ಬ ಮೃತ ನಟ-ರಾಜಕಾರಣಿ-ಬದುಕಿರುವ ಅವನ ಪ್ರೇಯಸಿ -ಕಂ-ರಾಜಕಾರಣಿ-ಮತ್ತೊಬ್ಬ ಸಹವರ್ತಿಯ ಬಗ್ಗೆ ಚಿತ್ರ ತೆಗೆವದು -ಅದೂ ಯಾರೊಬ್ಬರ ಭಾವನೆಗಳಿಗೂ ಧಕ್ಕೆ ಬಾರದಂತೆ-ಮತ್ತು ಕಮರ್ಷಿಯಲ್ ಆಗಿ ಸಕ್ಸಸ್ ಆಗುವಂತೆ ಮಾಡುವದು ಸುಲಭದ ಮಾತಲ್ಲ.ಮಣಿ ರತ್ನಂ ಈ ಚಿತ್ರಕ್ಕಾಗಿ ಪಟ್ಟ ಶ್ರಮ ತೆರೆ ಮೇಲೆ ಕಾಣಿಸದೆ ಇರದು...
ಆದರೆ ಚಿತ್ರ ಬಿಡುಗಡೆ-ಮೊದಲು ನಂತರ ಈ ಚಿತ್ರವನ್ನು ಆದಸ್ಟು ಹತ್ತಿಕ್ಕುವ ಜನರಿಗೆ ನೋಡಲು ದೊರಕದ ಹಾಗೆ ಮಾಡಲು ಹಲವರು ಪ್ರಯತ್ನಿಸಿ ಸಫಲರೂ ಆದರು..!
ಚಿತ್ರ ಸುದ್ಧಿ ಮಾಡಿದಸ್ಟು ಸದ್ಧು ಮಾಡದೆ ಇರಲು ಬಹುಶ ಅದೇ ಕಾರಣ ಅನ್ಸುತ್ತೆ...!
ಆದರೂ ತಮಿಳುನಾಡಿನ ರೋಚಕ ಘಟನಾವಳಿಗಳ ಅದಕ್ಕೆ ಸಂಬಂಧಿಸಿದವರ ಬಗ್ಗೆ ಈ ತರಹದ ಚಿತ್ರ ತಯಾರಿಸಿದ ಮಣಿ ರತ್ನಂ ಅವರ ಧೈರ್ಯ -ಸಾಹಸ -ಪ್ರಯತ್ನ ಮೆಚ್ಚತಕ್ಕದ್ದೇ..
ಈ ಚಿತ್ರ ತಮಿಳಲ್ಲಿ ಇರುವರ್ ಎಂದು ತೆಲುಗಲ್ಲಿ ಇದ್ದರು (ಇಬ್ಬರು) ಎಂದು ಆಂಗ್ಲ ಭಾಷೆಯಲ್ಲಿ ಡ್ಯೂಯೋ ಎಂದು ಬಿಡುಗಡೆ ಆಗಿದೆ..
ಯೂಟೂಬ್ನಲ್ಲಿ ತೆಲುಗು ತಮಿಳಲ್ಲಿ ನೋಡಲು ಸಿಗುತ್ತೆ..
>>>>>ಚಿತ್ರದಲ್ಲಿ ಯಾವುದೇ ಮುಜುಗರದ ಸನ್ನಿವೇಶಗಳು ಇಲ್ಲ..!! ಆದರೆ ಈ ಚಿತ್ರವನ್ನು ಮಾಮೂಲಿ ಚಿತ್ರಗಳ ರೀತಿ ನೋಡಲು ಆಗುವುದಿಲ್ಲ..! ಅದಕ್ಕೆ ಕಾರಣ ಇದರ ಕಥಾ ವಸ್ತು ಮತ್ತು ನಿರ್ದೇಶಕರು ತೆಗೆದ ರೀತಿ..!!ಹೀಗಾಗಿ ಅಪಾರ ತಾಳ್ಮೆ ಶ್ರದ್ಧೆ-ಆಸಕ್ತಿಯಿಂದ ನೋಡಿದರೆ ಇಷ್ಟ ಆಗದೆ ಇರದು...
==========================================================================================================
ಚಿತ್ರ ಮೂಲಗಳು:
ಐ ಎಂ ಡೀ ಬಿ ನನ್ ಬರಹ:
ಐ ಎಂ ಡೀ ಬಿ :
ಚಿತ್ರದ ಸಂಬಂಧ ಕೆಲವು ಆಸಕ್ತಿಕರ ಅಂಶಗಳ ಕುರಿತ ಲಿಂಕ್:
ವಿಕಿಪೀಡಿಯ :
ಯೂಟೂಬ್ ಲಿಂಕ್:
Rating
Comments
ಲೈಟ್ಸ್..ಆಕ್ಷನ್..ಕಟ್----------
ಲೈಟ್ಸ್..ಆಕ್ಷನ್..ಕಟ್-------------ನೆಕ್ಸ್ಟ್?ವೆಂ"ಕಟ್" ವಿಮರ್ಶೆ; ಚಿತ್ರ ಬಂದು ಹೋಗಿದ್ದೇ ಗೊತ್ತಾಗಿಲ್ಲಾ! ಉತ್ತಮ ವಿಮರ್ಶೆ--ಸಿನೆಮಾ ನೋಡಿದ ಹಾಗೇ ಆಯಿತು.
In reply to ಲೈಟ್ಸ್..ಆಕ್ಷನ್..ಕಟ್---------- by ಗಣೇಶ
ಗಣೇಶ್ ಅಣ್ಣ-
ಗಣೇಶ್ ಅಣ್ಣ-
ಪ್ರಖ್ಯಾತ ನಿರ್ದೇಶಕ -ನಟವರ್ಗ -ತಂತ್ರಜ್ಞರು-ಸ್ಫೋಟಕ ಕಥೆ-ವಿವಾದಗಳು ಇದ್ದೂ ಸುದ್ಧಿ ಆದ-ಆದ್ರೆ ಜನರ ಧ್ರುಸ್ಥಿಗೆ ಬೀಳದ ಇಂಥವರ ಇಂಥ ಸಿನೆಮಾದ ಕಥೆ ಹೀಗಾದ್ರೆ -ಇನ್ನು ಹೊಸಬರ ಕಥೆ-ಅವರ ಪಾಡು ಏನು ಹೇಗೆ ಹೇಳುವುದು....!!
ಈ ಚಿತ್ರವನ್ನು ಜನ ನೋಡದೆ ಹಾಗೆ ಮಾಡಲು-ಹತ್ತಿಕ್ಕಲು ಪ್ರಯತ್ನಿಸಿ ಹಲವರು ಯಶಸ್ವಿ ಆಗಿರುವರು....ಆದರೆ ಇದು ಈಗ ಡೀವಿಡಿ -ಸೀ ಡಿ ಮತ್ತು ಯೂಟೂಬ್ನಲ್ಲಿ ಇದ್ದರು(ತೆಲುಗು) ಮತ್ತು ಇರುವರ್ ಎಂದು ತಮಿಳಲ್ಲಿ ನೋಡಲು ಲಭ್ಯವಿದೆ...!!
ನೋಡಿದರೆ -ಇದನ್ನು ನೋಡದೆ ಇದ್ದೆವೇ ? ಎಂದು ಅನಿಸದೆ ಇರದು....
ಪ್ರತಿಕ್ರಿಯೆಗೆ ನನ್ನಿ ..
ಶುಭವಾಗಲಿ..
\|
ಸಪ್ತಗಿರಿಯವರಿಗೆ ವ0ದನೆಗಳು
ಸಪ್ತಗಿರಿಯವರಿಗೆ ವ0ದನೆಗಳು
ಕೆಲವು ದ್ಱುಶ್ಹ್ಯಗಳು ಮೂಲಕ ಪೂರ್ಣ ಚಿತ್ರಕತೆಯನ್ನೆ ಹೆಣೆದು ಬಿಡ್ತೀರಿ,
ಸಿನಿಮಾಗಳ ಬಗ್ಗೆ ನಿಮ್ಮ ಒಲವು ಮಾತ್ರವಲ್ಲ , ಉತ್ತಮವಾಗಿ ವಿಮರ್ಶೆ ನಡೆಸುತ್ತೀರಿ
ವ0ದನೆಗಳು
In reply to ಸಪ್ತಗಿರಿಯವರಿಗೆ ವ0ದನೆಗಳು by partha1059
ಗುರುಗಳೇ-
ಗುರುಗಳೇ-
ಬರೆಯಬೇಕಾದ ಅದೆಸ್ಟೋ ಸಿನೆಮಾಗಳು ಬಾಕಿ ಇವೆ..
ಅವೆಲ್ಲ ಬರೆಯಲು ಈ ಜನ್ಮವೆಲ್ಲ ಸಾಲೊಲ್ಲ ಅನ್ಸುತ್ತೆ..!!
ದಿನವೂ ನಾ ನೋಡುವ ಚಿತ್ರಗಳ ಅವುಗಳ ಬಗ್ಗೆ ಬರೆವ ಪಟ್ಟಿ ಬೆಳೆಯುತ್ತಿದೆ...(ಹಳೆಯದೇ ಬೇಜಾನ್ ಇದೆ.!!)
ತಮ್ಮ ಪ್ರತಿಕ್ರಿಯೆಗೆ ನನ್ನಿ
ಶುಭವಾಗಲಿ..
\|/
ತೆಲುಗು ವಾಹಿನಿಯೊಂದರಲ್ಲಿ ಹಾಫ್
ತೆಲುಗು ವಾಹಿನಿಯೊಂದರಲ್ಲಿ ಹಾಫ್ ಟಿಕೆಟ್ ಎನ್ನುವ ಒಂದು ಕಾರ್ಯಕ್ರಮ ಬರುತ್ತಿತ್ತು ಅದರಲ್ಲಿ ಹೊಸದಾಗಿ ಬಿಡುಗಡೆಯಾದ ಚಿತ್ರಗಳ ತುಣುಕು ಮತ್ತು ಅದರ ಕುರಿತಾದ ಚರ್ಚೆಗಳು ಇರುತ್ತಿದ್ದವು. ಆದರೆ ಸಪ್ತಗಿರಿಯವರು ನಮಗೆ ಯಾವುದೇ ಟಿಕೇಟಿಲ್ಲದೇ ಪೂರ್ಣ ಸಿನಿಮಾ ತೋರಿಸುತ್ತಿದ್ದಾರೆ. ನಿಮ್ಮ ಆಸಕ್ತಿ ಮತ್ತು ಶೈಲಿಗೆ ಧನ್ಯವಾದಗಳು, ಸಪ್ತಗಿರಿಗಳೇ.
ಶ್ರೀಧರ್ ಜೀ-
ಶ್ರೀಧರ್ ಜೀ-
ಈಗಲೂ ತೆಲುಗು ಮತ್ತು ಕನ್ನಡದ ಹಲವು ಚಾನೆಲ್ಲುಗಳಲ್ಲಿ ಹೊಸ ಚಿತ್ರಗಳ ಪೋಸ್ಟ್ ಮಾರ್ಟಂ (ವಿಮರ್ಶೆ.!!)ಮಾಡಿ ಅವುಗಳ ತುಣುಕು ತೋರಿಸುವ ಕಾರ್ಯಕ್ರಮಗಳಿವೆ ..
ನನ್ನ ಒಂದು ಆಲೋಚನೆ -ಸಂದೇಹ -ಏನೆಂದರೆ ಈ ತರಹದ ವಿಮರ್ಶೆ ನೋಡಿ-ಓದಿ-ಕೇಳಿ ಜನ ಸಿನೆಮ ನೋಡಲು ಹೋಗುವರೆ ?
ಎಷ್ಟು ಪ್ರತಿಶತ ಜನ ವಿಮರ್ಶೆ ನೋಡಿ (ಅದು ಕೆಟ್ಟದಾಗಿದ್ದರೂ -ಚೆನ್ನಾಗಿದೆ ಎಂದು ಬರೆದಿದ್ದರೂ)ಹೋಗುವರು?
ಹೋಗದೆ ಇರುವರು?
ಇದಕ್ಕೆ ಉತ್ತರ ಇನ್ನು ಸಿಕ್ಕಿಲ್ಲ...!!
ಹಲವು ಸಿನೆಮಾಗಳನ್ನು ನಾ ವಿಮರ್ಶೆ ನೋಡಿದ ಮೇಲೆಯೇ ನೋಡಿದ್ದು-ಇಷ್ಟ ಪಟ್ಟಿದ್ದು..!!
ಇನ್ನು ಕೆಲವು ಸಿನೆಮಾಗಳನ್ನ ಅಚಾನಕಾಗಿ ನೋಡಿದ್ದು ಇಷ್ಟ ಪಟ್ಟಿದ್ದು..
ಹಲವು ವಿಮರ್ಶೆಗಳು ಚಿತ್ರ ಚೆನ್ನಾಗಿಲ್ಲ ಎಂದು ಬರೆದದ್ದು ಓದಿ-ಕೇಳಿ ಸಹ ಅವುಗಳನ್ನ ನೋಡಿ ಸೀತ ಪಟ್ಟಿದ್ದು ಉಂಟು...!!
ಹಾಗೆ ಸಖತ್ ಎಂದು ಬರೆದ ಚಿತ್ರಗಳೂ ಇಷ್ಟ ಆಗದೆ ಹೋದ ದ್ದು ಇದೆ..!!
ನನಗೆ ಅನ್ನಿಸಿದ ಹಾಗೆ ಪತ್ರಿಕೆಗಳಲಿ ಬರುವ ಬಹುಪಾಲು ವಿಮರ್ಶೆಗಳು ಸಿನೆಮಾವನ್ನು -ತೆಗಳುವ -ತಪು ಎತ್ತಿ ತೋರಿಸುವ ರೀತಿಯೇ ಇರುತ್ತವೆ,..ಮತ್ತು ಉತ್ತಮ ಚಿತ್ರ ಎಂದು ಅವರು ಬರೆದ ಚಿತ್ರಗಳ ಸಂಖ್ಯೆ ಬಹು ಕಡಿಮೆ...
ತಮ್ಮ ಪ್ರತಿಕ್ರಿಯೆಗೆ ನನ್ನಿ
ಶುಭವಾಗಲಿ..
\|/