ಇರುವು.

ಇರುವು.

ಇರುವು

ದೇವರಿಲ್ಲದ ಜಾಗ
ದೇವರಿಗೇ ಗೊತ್ತಿಲ್ಲ,
ದೇವರಿರುವ ಜಾಗ
ನಮಗೇಕೆ ಗೊತ್ತಿಲ್ಲ?
ಅಣುರೇಣು ತೃಣದಿಂದ,
ಬ್ರಹ್ಮಾಂಡದ ವರೆಗು
ಅವನಿರದ ಕಣವ
ಅವನೇ ಅರಿತಿಲ್ಲ.
ಎಲ್ಲೆಲ್ಲೂ ಅವನಿರಲು,
ಅವನಿರುವಿನರಿವಿರದ
ನರಜನ್ಮಕಿಂತಲೂ,
ಇರುವೆಯಾದರು
ಸರಿಯು ಜಗದಲಿ
ಹರಿಯ ಇರುವಿನ
ಅರಿವು ಗೊತ್ತಿರಲು.

ಅಹೋರಾತ್ರ.

Rating
No votes yet