ಇಲ್ಲಿ ಯಾರು ಸರಿ?

ಇಲ್ಲಿ ಯಾರು ಸರಿ?

ಮೊನ್ನೆ ಈ ಸುದ್ದಿ

http://thatskannada.oneindia.in/news/2010/03/08/m-f-husain-surrenders-his-indian-passport-in-doha.html

ಓದಿದಾಗಿನಿಂದ ಈ ಪ್ರಶ್ನೆಗಳು ತಲೆಯೊಳಗೆ ಹೊಕ್ಕಿದೆ... 

ಇಲ್ಲಿಯವರೆಗೂ ಹುಸೇನ್ ರ ವಿಷಯದಲ್ಲಿ ನಡೆದ ವಿದ್ಯಮಾನಗಳನ್ನು ಅವಲೋಕಿಸಿದಾಗ, ಈ ವಿವಾದಗಳಲ್ಲಿ ಕೊನೆಗೆ ಸಿಕ್ಕ ಫಲಿತಾಂಶ ಏನು?

ಗೆದ್ದಿದ್ದು ಹುಸೇನಾ ಅಥವ ಇಲ್ಲಿನ ಸೋಕಾಲ್ಡ್ ಸಂಘಟನೆಗಳಾ?

ಇದರಿಂದ ಆದ ಲಾಭ ಯಾರಿಗೆ?

ಭಾರತದ ಸಮಕಾಲಿನ ಕಲಾ ಇತಿಹಾಸದಲ್ಲಿ ಒಂದು ಪ್ರಮುಖ ಕಾಲಘಟ್ಟವಾಗಿ ನಿಲ್ಲುವ ಹುಸೇನ್ ಮಾಡಿದ್ದು ಸರಿಯಾ...? ಅಥವ

ಭಾರತೀಯ ಕಲೆಯ ಆಳ, ವಿಸ್ತಾರಗಳ ಅರಿವಿನ ಕೊರತೆಯಿಂದ ಬಳಲುತ್ತಿರುವ ,  ಕಾನೂನಿನ ಮೊಕದ್ದಮೆಯ ಒತ್ತಡದಿಂದಾಗಿ ತನ್ನ ಕಲಾಕೃತಿಗಳಿಗೆ ಮುಖ್ಯ ಜೀವಾಳವಾದ ಭಾರತೀಯ ಜನಪದದ ಮೂಲವನ್ನು ತ್ಯಜಿಸಿ, ಹುಸೇನ್ ಬೇರೆ ಇನ್ನ್ಯಾವುದೊ ದೇಶವನ್ನು ಅಪ್ಪಿಕೊಳ್ಳುವಂತೆ ಮಾಡಿದ  ಇಲ್ಲಿನ ಸಂಘಟನೆ ಮತ್ತು ರಾಜಕೀಯ ಪಕ್ಷಗಳು ಮಾಡಿದ್ದು ಸರಿಯಾ?

ಹಿಂದು ನೆಲ, ಧರ್ಮ, ದೇವತೆ, ನಗ್ನತೆಯ, ಮಾನ,  ಸಂಸ್ಕೃತಿಯ ಬಗ್ಗೆಮಾತಾಡುವವರಿಗೆ ಇಲ್ಲಿ ಕೆಲವೊಂದು ಚಿತ್ರಗಳನ್ನು ಕೊಟ್ಟಿದ್ದೇನೆ. ಇದರಲ್ಲಿ ಹುಸೇನ್ ರವರಿದು ಇದೆ ಜೊತೆಗೆ ರವಿವರ್ಮ ಮತ್ತು ಇನ್ನಿತರ ಕಲಾವಿದರ ಚಿತ್ರಗಳು ಇವೆ. ಇದರಲ್ಲಿ ನಗ್ನತೆ ಮತ್ತು ಧರ್ಮಪ್ರಚೋದನೆಯ ಅಂಶಗಳ ಬಗ್ಗೆ ಚರ್ಚಿಸಿ.

ದಯವಿಟ್ಟು ಹುಸೇನ್ ನನ್ನು ಧರ್ಮದ ಕನ್ನಡಕದಲ್ಲಿ ನೋಡದೆ ಅವನೊಬ್ಬ ಕಲಾವಿದನಾಗಿ ಅವನ ಅಭಿವ್ಯಕ್ತಿಯನ್ನು ಕುರಿತು ಮಾತಾಡಿ.

 

image-rape-of-india

nude-bharatmata

 

 

ಹುಸೇನ್ ರವರ ಚಿತ್ರಕಲೆಗೆ ಮೂಲ ಸ್ಪೂರ್ತಿಯಾದ ಭಾರತದ ಜನಪದ ಕಲೆಯ ಕೆಲವು ಚಿತ್ರಗಳು.

 

ಭಾರತದ ಪ್ರಸಿದ್ದ ಚಿತ್ರ ಕಲಾವಿದ ವಿನೋದ್ ಬಿಹಾರಿ ಮುಖರ್ಜಿಯ ಒಂದು ಚಿತ್ರ.

 

http://commons.wikimedia.org/wiki/File:Lajja_gauri.jpg

http://www.indianartcollectors.com/blog-post.php?postid=177

 

 

 

ಚಿತ್ರ ಕೃಪೆ: ಗೂಗಲ್ 

Rating
No votes yet

Comments