ಇವತ್ಗೂ ಒಳ್ಳೇರು ಇದ್ದಾರ್ಕಂಡ್ರೀ; ಅದಕ್ಕೇ ಮಳೆ-ಬೆಳೆ ಆಗ್ತಿರೋದು !

ಇವತ್ಗೂ ಒಳ್ಳೇರು ಇದ್ದಾರ್ಕಂಡ್ರೀ; ಅದಕ್ಕೇ ಮಳೆ-ಬೆಳೆ ಆಗ್ತಿರೋದು !

ಚಿತ್ರ

ತಥ್ಯ:

ನಾವ್ ಚಿಕ್ಕೊರಾಗಿದ್ದಾಗ, ಅವ್ರು ಹೀಗ್ ತ್ಯಾಗ ಮಾಡಿದ್ರು, ಇನ್ನೊಬ್ಬರು ಪ್ರಾಣಾನೆ ತೆತ್ರು, ಇವ್ರು ನೋಡಿ, ತಮ್ಮ ಕಣ್ ನೇ  ಕಿತ್ತು ಕೊಟ್ರು, ಒಂದ್ ರೂಪಾಯ್ ಲೆಕ್ಕಚಾರ್ದಲ್ಲಿ ವ್ಯತ್ಯಾಸ ಆಗಿದ್ದಕ್ಕೆ ಅವ್ರು ಮನೇಗ್  ಹೊಗ್ದೆ  ರಾತ್ರಿಯೇಲಾ ಆಫೀಸ್ ನಲ್ಲೆ ಕಣ್ಣಲ್ಲಿ ಕಣ್ಣಿಟ್ಟು ಕೊಂಡು ಲೆಕ್ಕ ಮಾಡಿ ಒಪ್ಪಿಸಿ ಬೆಳಿಗ್ಗೆ ಮನೆಗೆ ಬಂದರು, ಇತ್ಯಾದಿ, ಇತ್ಯಾದಿ,  ಅನ್ನೋದನ್ನ ಓದಿ, ಓದಿ ತೃಪ್ತಿ ಪಡ್ತಿದ್ವಿ !

ಆದರೆ ಈಗ,

ಬೆಳಗಾದ್ರೆ, ೩೦ ಲಕ್ಷ ಬ್ಯಾಂಕಿನಿಂದ ಹಾಡು ಹಗಲಿನಲ್ಲೇ ದೋಚ್ಕೊಮ್ದು ಹೋದರು, ಯಾರೋ ಮನೆಗೆ ಕನ್ನ   ಹಾಕಿದರು  ಇತ್ಯಾದಿಗಳೇ ಕಣ್ಣಿಗೆ ಬೀಳುತ್ತವೆ. ಆದರೆ ಕೆಳಗಿನ ಸುದ್ದಿ ಓದಿ ನನಗೆ ತುಂಬಾ ಆನಂದ ಆಯ್ತು !

‘ಮುಂಬೈನ ಉಪನಗರ ವಸಾಯ್ (ಪಶ್ಚಿಮ) ನಲ್ಲಿ ಒಂದು ಚಿಕ್ಕ ಲಾಂಡ್ರಿ ಇದೆ. ಅಲ್ಲಿ ನಡೆದ ಸಾಮಾನ್ಯ ಘಟನೆ (?!)’ :

ಆದರೆ ಇದು ಅಸಾಮಾನ್ಯ ಸಂಗತಿ ಎನ್ನುವುದನ್ನು ಎಲ್ಲರೂ ಒಪ್ಪಬೇಕು ಮತ್ತು ಇಂತಹ ಉತ್ತಮ ಕಾರ್ಯವನ್ನು ಶ್ಲಾಘಿಸಿ ತಾವೂ ಜೀವನದಲ್ಲಿ ಅಂತಹ ಶುದ್ಧ ಚಾರಿತ್ರ್ಯವನ್ನು ಬೆಳೆಸಿಕೊಳ್ಳಬೇಕು.

ಆದದ್ದೇನು :

ತಮ್ಮ ಧೋಬಿ ಅಂಗಡಿಗೆ ಕುಲ್ದೀಪ್ ಮಲ್ಲಿಕ್ ಎಂಬ ಫೋಟೋಗ್ರಾಫರ್  ಬಟ್ಟೆ ಒಗೆಯಲು ಮತ್ತು ಇಸ್ತ್ರಿಮಾಡಲು ಬಟ್ಟೆ ಕೊಟ್ಟು ಮನೆಗೆ ಹೊದರು.  ಕುಲ್ದೀಪ್ ರವರ  ಪ್ಯಾಂಟಿನ  ಜೇಬಿನಲ್ಲಿ ೧೫ ಸಾವಿರ ರೂಪಾಯಿ (೫೦೦ ರೂಗಳ ನೋಟುಗಳು) ಇದ್ದದ್ದನ್ನು ಕಂಡು ಆ ಲಾಂಡ್ರಿಯ  ಮಾಲೀಕರು, ಅದನ್ನು ಜೋಪಾನವಾಗಿ ತೆಗೆದಿಟ್ಟು ಫೋನ್ ಮಾಡಿ ಕರೆದು ಅವರಿಗೆ ಮುಟ್ಟಿಸಿದರು.  ಮಲ್ಲಿಕ್ ಯಾವುದೋ ಫೋಟೋಗ್ರಾಫಿಕ್ ಅಸೈನ್ ಮೆಂಟ್ ಗೆ ಮುಂಗಡ  ೧೫ ಸಾವಿರ ರೂ ಹಣವನ್ನು ತಮ್ಮ ಗಿರಾಕಿಯಿಂದ ಪಡೆದಿದ್ದರು.

ವಸಾಯಿ ಪರಿಸರ  :

ವಸಾಯಿನ  ಸಂದೋರ್ ಪರಿಸರದಲ್ಲಿ ತಮ್ಮ ಲಾಂಡ್ರಿಯನ್ನು ನಡೆಸುತ್ತಿದ್ದ ಉಶಾದೇವಿ, ಮತ್ತು  ಓಂಪ್ರಕಾಶ್ ಸಿಂಗ್ ದಂಪತಿಗಳು ಅಭಿನಂದನಾರ್ಹರು.  ಸಾಮಾನ್ಯವಾಗಿ ಮಲಿನವಾದ ವಸ್ತ್ರಗಳ ಜೇಬನ್ನು ತಪಾಸುಮಾಡಿ ಅವನ್ನು ಒಗೆಯಲು ಸಿದ್ಧಪಡಿಸುವ ಪರಿಕ್ರಮದಲ್ಲಿ  ಮತ್ತೊಬ್ಬ ಕಸ್ಟಮರ್ ಜೇಬಿನಲ್ಲಿ ೧.೫ ಲಕ್ಷ ಬೆಲೆಬಾಳುವ ಬಂಗಾರದ ಚೈನ್ ಸಿಕ್ಕಿದ್ದನ್ನೂ ವಾಪಸ್ ಮಾಡಿದರು.

ನಿಷ್ಥಾವಂತ ದಂಪತಿಗಳು :

ಉಶಾದೇವಿಯವರ ಕಿಡ್ನಿ ವೈಫಲ್ಯದಿಂದ ಬಹಳ ಮಾನಸಿಕ ಆಘ್ಹಾತಕ್ಕೊಳಗಾದ ದಂಪತಿಗಳು ದುಂಖಃವನ್ನು ನುಂಗಿಕೊಂಡು ಜೀವನ ಸಾಗಿಸುತ್ತಿದ್ದಾರೆಯೇ ಹೊರತು ಈ ತರಹದ ಹಣವನ್ನು ಇಟ್ಟುಕೊಳ್ಳಲು ಇಚ್ಛಿಸಲಿಲ್ಲ. (ಹೀಗೆ ಮರೆತು ಹಲವಾರು ಬಾರಿ ಸಿಕ್ಕ ಹಣವನ್ನು ವಾಪಸ್ ಕೊಟ್ಟಿದ್ದಾರೆ).

ತಮ್ಮದಲ್ಲದ್ದರ ಆಶೆ ಏಕೆ :

ಈಗ ಮಲ್ಲಿಕ್ ರಿಗೆ ಬಹಳ ಸಂತೋಷವಾಗಿ ೧೦ ಸಾವಿರ ರೂಪಾಯಿಗಳನ್ನು ಓಂಪ್ರಕಾಶ್ ರಿಗೆ  ಬಹುಮಾನವಾಗಿ ಕೊಡಲು ಮುಂದೆ ಬಂದಾಗ ಓಂಪ್ರಕಾಶ್ ದಂಪತಿಗಳು ಅದನ್ನು ನಿರಾಕರಿಸಿದರು. ಕುಲ್ದೀಪ್ ಮಲ್ಲಿಕ್  ಅವರಿಗೆ ಒಂದು ಹೊಸ ಶರ್ಟ್ ಮತ್ತು ಸೀರೆಯನ್ನು ಉಡುಗೊರೆಯಾಗಿ ಕೊಟ್ಟರು. ಹೀಗೆ ಅನೇಕರು ತಮ್ಮ ವಸ್ತ್ರಗಳಜೊತೆ ಹಣ, ಒಡವೆ ಮತ್ತು ಮುಖ್ಯ ಕಾಗದ ಪತ್ರಗಳನ್ನೂ ಬಿಟ್ಟಿದ್ದು ಅವನ್ನು ಈ ದಂಪತಿಗಳು ಸರಿಯಾಗಿ ವಾಪಸ್ ತಲುಪಿಸಿದ್ದಾರೆ. ಅದರಿಂದ ಅವರ ಮನಸ್ಸಿಗೆ ಬಹಳ ನೆಮ್ಮದಿ ಸಿಕ್ಕೆದೆ. ಏನೋ ಒಂದು ಉತ್ತಮ ಕಾರ್ಯ ತಮ್ಮಿಂದ ಜರುಗಿತಲ್ಲಾ ಎಂದು ಅವರು ಪರಮಮಾತ್ಮನನ್ನು ಅಭಿನಂದಿಸುತ್ತಾರೆ.  ಅವನ್ನು ನಾವು ಸ್ವಲ್ಪವೂ ಮುಕ್ಕಾಗದಂತೆ ವಾಪಸ್ ಮಾಡಿದ್ದೇವೆ. ನಮಗೆ ಸೇರಿದ್ದು ಮಾತ್ರ ನಮಗೆ ಭಗವಂತನು ಕೊಡುತ್ತಾನೆ ನಮ್ಮದಲ್ಲದ್ದನ್ನು ಕಟ್ಟಿಕೊಂಡು ನಮಗೇನು ? ಎನ್ನುತ್ತಾರವರು.  ಹೀಗೆ ನಿಸ್ಪೃಹತೆಯಿಂದ ಕೆಲಸಮಾಡುವ ಜನ  ಸ್ವಲ್ಪವಾದರೂ ಇದ್ದಾರಲ್ಲ ಎನ್ನುವುದು ಮನಸ್ಸಿಗೆ ಮುದಕೊಡುವ ಸಂಗತಿ.

ಇಂತಹವರ ಸಂತತಿ ಇಮ್ಮಡಿಸಲಿ. ಸತ್ಯಮೇವಜಯತೆ..

ಮುಂಬೈ ಮಿರರ್, ಶನಿವಾರ, ಆಗಸ್ಟ್ ೧೭, p.6 ೨೦೧೩

ವರದಿ : ಹೊರಂಲವೆಂ, ಮುಂಬೈ

Rating
No votes yet

Comments

Submitted by kavinagaraj Sat, 08/17/2013 - 14:49

ಇಂಥವರೂ ಇರುತ್ತಾರೆ. ಒಬ್ಬರು ತಮಗೆ ಸಿಕ್ಕಿದ ಪರ್ಸ್ ಅನ್ನು ಜೋಪಾನವಾಗಿ ಅದರ ಮಾಲೀಕರಿಗೆ ತಲುಪಿಸಿದ್ದರು, ಪರ್ಸ್ ಒಳಗಿದ್ದ ಹಣವನ್ನು ಬಿಟ್ಟು!!

ಹೌದು. ಜ್ಞಾಪಕಕ್ಕೆ ಬಂತು. ನಮ್ಮ ಆಫೀಸಿನಲ್ಲಿ ನನ್ನ ಗೆಳೆಯರೊಬ್ಬರು ಜುಲೈ ೩೧ ಕ್ಕೆ ನಿವೃತ್ತರಾಗುವವರಿದ್ದರು. ಅದಕ್ಕೆ ಮೊದಲೇ ತಾವು ಒಂದು ಚಿಕ್ಕ ಪಾರ್ಟಿ ಕೊಡಲು ಆಶಿಸಿ ನನ್ನನ್ನು ಆಹ್ವಾನಿಸಿದರು. ಹೇಗೂ ಜುಲೈ ೩೧ ಕ್ಕೆ 'ಆಫೀಸಿನವರು ಕೊಡುವ ಸೆಂಡ್ ಆಫ್ ಪಾರ್ಟಿ'ಗೆ ಹೋಗಲು ಸಾಧ್ಯವಾಗುವುದೊ ಇಲ್ಲವೋ ಎಂದು ಯೋಚಿಸಿ, ಜುಲೈ ೧೭ ರಂದು ಒಪ್ಪಿಕೊಂಡೆ. ಮನೆಯಿಂದ ೭ ನೆ ನಂಬರ್ ಬಸ್ಸಿನಲ್ಲಿ ಕುಳಿತು ಮಹೇಶ್ವರಿ ಉದ್ಯಾನ್ ಸ್ಟಾಪ್ ನಲ್ಲಿ ಇಳಿದೆ ಅಲ್ಲಿಂದ ನಡೆದೇ ಹೋಗಬಹುದಾದಷ್ಟು ಹತ್ತಿರದ ರಸ್ತೆಯಲ್ಲಿ ಆಫೀಸ್ ಮುಟ್ಟಿದೆ. ಬಹಳ ದಿನಗಳ ಭೇಟಿಯಾಗಿದ್ದರಿಂದ ಸ್ವಲ್ಪ ಆತಿಥ್ಯ ವಿಶೇಷವಾಗಿಯೇ ಇತ್ತು. ಲೋಕಾಭಿರಾಮವಾಗಿ ಮಾತುಕತೆಯ ನಂತರ ನನ್ನ ಸೈಡ್ ಬ್ಯಾಗ್(ಜೋಳಿಗೆ) ಯನ್ನು ತೆಗೆದು ಏನೋ ತೋರಿಸಲು ಹೋದರೆ ನನ್ನ ಕೆಲವು ವಸ್ತುಗಳು ಕೆಳಗೆ ಉದುರಿದವು. ನನಗೆ ಒಮ್ಮೆಲೇ ಆಶ್ಚರ್ಯವಾಯಿತು. ಆಷ್ಟರಲ್ಲಿ ಪೋಲೀಸ್ ಠಾಣೆಯಿಂದ ನನಗೆ ಫೋನ್ ಕಾಲ್ ಬಂತು. ನನಗೂ ಪೋಲೀಸಿಗೂ ಏನುಸಂಬಂಧ ಕಾಲ್ ನನ್ನದಲ್ಲ ಎಂದು ಮೊಬೈಲ್ ಸ್ವಿಚ್ ಆಫ್ ಮಾಡುವಷ್ಟರಲ್ಲೇ ನನ್ನ ಗೆಳೆಯ ’ಆಪ್ ಕಾ ಕಾಲ್ ಹೈ, ಸಾಬ್ ಮುಝೆ ದೊ,’ ಬಾತ್ ಕರ್ತಾ ಹೈ’ ಎಂದು ಉತ್ತರಿಸಿದನು. ’ಆಪ್ ಕಾ ಫೋಟೊ, ’ಸೀನಿಯರ್ ಸಿಟಿಜ಼ನ್ ಕಾರ್ಡ್’,’ಪ್ಯಾನ್ ಕಾರ್ಡ್’, ’ಆಧಾರ್ ಕಾರ್ಡ್’ ನಮ್ಮ ಬಳಿ ಇದೆ. ’ಬಂದು ನಿಮ್ಮ ಗುರುತು ತಿಳಿಸಿ ಪಡೆದುಕೊಳ್ಳಿ’, ಎಂದು ಆಕಡೆಯಿಂದ ತಿಳಿಸಿದ ಧ್ವನಿ ನನಗೆ ಸ್ವಲ್ಪ ಭಯವನ್ನೇ ತಂದಿತು. ಆಗ ನಾನು ಗಬಗಬನೆ ನನ್ನ್ ಬ್ಯಾಗ್ ಒಳಗೆ ಕೈಹಾಕಿ ಏನಿದೆ ಇಂದು ಹುಡುಕಲು ಪ್ರಯತ್ನಿಸಿದಾಗ ಪಕ್ಕದಲ್ಲಿ ಬ್ಲೇಡಿನಲ್ಲಿ ಉದ್ದಕ್ಕೂ ಕತ್ತರಿಸಿದ ಮಾರ್ಕ್ ಕಾಣಿಸಿ ಅದು ಬಾಯಿಬಿಟ್ಟಿತು. ಬಸ್ಸಿನಲ್ಲಿ ಸೀನಿಯರ್ ಸಿಟಿಝನ್ ಕುಳಿತುಕೊಳ್ಳುವ ಸೀಟ್ ನಲ್ಲೇ ಕುಳಿತಾಗ ನನ್ನ ಪಕ್ಕ್ಸ ಒಬ್ಬ ವ್ಯಕ್ತಿ ಸ್ವಲ್ಪ ನಕ್ಕು ನನ್ನ ಜೊತೆ ಸ್ನೇಹದಿಂದ ಒಂದೆರಡು ಮಾತಾಡಿದ. ಅವನ ಹಿಂದಿನ ಸೀಟಿನಲ್ಲಿದ್ದ ಇಬ್ಬರೂ ಅವನೊಂದಿಗೆ ಎನೇನೊ ಮಾತಾಡುತ್ತಿದ್ದರು. ನನ್ನ ಗಮನ ಆಫೀಸಿನ ಸ್ನೇಹಿತನ ಜೊತೆಗೆ ಕಳೆದ ಕ್ಷಣಗಳ ಬಗ್ಗೆ ಮಾತ್ರ ಇತ್ತು. ನಾನು ಇಳಿಯಲು ಎದ್ದಾಗಲೂ ನನ್ನ ಹಿಂದೆ ಇಬ್ಬರು ನಿಂತಿದ್ದರು ಮುಗುಳ್ನಗುತ್ತಿದ್ದರು. ಈಗ ನನಗೆ ಅದರ ಮನವರಿಕೆಯಾಯಿತು. ಸಧ್ಯ ಮೊಬೈಲ್ ನನ್ನ ಪ್ಯಾಂಟ್ ಕಿಸೆಯಲ್ಲಿತ್ತು. ಮತ್ತು ೭೦೦ ರೂಗಳ ಹಣ ಇನ್ನೊಂದು ಕಿಸೆಯಲ್ಲಿತ್ತು. ಸ್ನೇಹಿತನಿಗೆ ಕೊಡಲು ತಂದ ಉಡುಗೊರೆಯ ಕವರ್ ಪುಣ್ಯಕ್ಕೆ ಬ್ಯಾಗಿನ ಒಳಗೇ ಇತ್ತು. ನನ್ನ ಪ್ರೀತಿಯ ಡಿಜಿಟಲ್ ಕ್ಯಾಮರಾ, ಪರ್ಸ್ ಮಾಯವಾಗಿತ್ತು. ಅದರಜೊತೆಗೆ ಹಣ ಸಹಿತ ! ತಕ್ಷಣ ನನ್ನ ಮತ್ತೊಬ್ಬ ಯುವ ಗೆಳೆಯ ನಾನೂ ಟ್ಯಾಕ್ಸಿಯಲ್ಲಿ 'ಸಯಾಂ ಸರ್ಕಲ್ ನ ಪೋಲಿಸ್ ಶಾಖೆ'ಗೆ ಹೋಗಿ ಸಿಕ್ಕ ೪-೫ ಕಾರ್ಡ್ ಗಳನ್ನು ಪಡೆದು ತಂದೆವು.
'ಆಧಾರ್ ಕಾರ್ಡ್' ಕಳೆದಿದ್ದರೆ ಮತ್ತೆ ಕಂಪ್ಲೇಂಟ್ ಕೊಟ್ಟು ಪೋಲಿಸ್ ಠಾಣೆಗೆ ಓಡಾಡಿ ಒದ್ದಾಡಬೇಕಿತ್ತು. ದೇವರ ಕೃಪೆ. ಅಷ್ಟ್ರರಲ್ಲೇ ತೊಂದರೆ ನಿವಾರಣೆಯಾಯಿತು. ಹಣವಿದ್ದ ಪರ್ಸ್, ಮತ್ತು ಒಳ್ಳೆಯ 'ಡಿಜಿಟಲ್ ಕ್ಯಾಮರ' ಹೋಗಿದ್ದರಿಂದ ಬಹಳ ಬೇಸರವೇನೊ ಆಯಿತು. ಆದರೆ ಬುದ್ಧಿಬಂತು ! ಇದು ನನ್ನ ಇತ್ತೀಚಿನ ತಾಜಾ ಅನುಭವ.

ಜೀವನ ಪಾಠಶಾಲೆಯ ಅನುಭವಗಳೆ ಅನನ್ಯ....

ಧನ್ಯವಾದಗಳೊಂದಿಗೆ,
 ನಾಗೇಶ ಮೈಸೂರು

ಖಂಡಿತ ನಾಗೇಶ್ ರವರೆ.

ನಾವು ಅಮೆರಿಕ ಮತ್ತು ಕೆನಡಾ ಪ್ರವಾಸ ಮಾಡಿದೆವು. ಒಂದು ಚಿಕ್ಕ ಸಾಮಾನನ್ನು ಕಳೆದುಕೊಳ್ಳಲಿಲ್ಲ. ಅಮೆರಿಕದಲ್ಲಿದ್ದಾಗಲೇ ಸುಮಾರು 5-6 ನಗರಗಳಿಗೆ ವಿಮಾನದಲ್ಲಿ ಕೆಲವು ವೇಳೆ ಇಬ್ಬರೇ ಹೋಗಿ ಬಂದೆವು. ಒಂದು ಸಾಮಾನು ಬಿಡಲಿಲ್ಲ/ಕಳೆದುಕೊಳ್ಳದೆ ಸುಖವಾಗಿ ಸ್ವದೇಶಕ್ಕೆ ಬಂದೆವು.
ನನ್ನ 50 ವರ್ಷಗಳ ಮುಂಬೈ ವಾಸ್ತವ್ಯದಲ್ಲಿ ಇದು 3 ನೆಯ ಬಾರಿ ಹೀಗೆ ಹಣ ಕಳೆದುಕೊಂಡಿರುವುದು. ನಿಜಕ್ಕೂ ಕ್ಯಾಮರಾ ಹೋಗಿದ್ದು ಬಹಳ ವ್ಯಥೆಯಾಯಿತು. ( ಸುಮಾರು 2,500 ಚಿತ್ರಗಳನ್ನು ಅದರಲ್ಲಿ ತೆಗೆದಿದ್ದೆ.)

ನಾಗೇಶ್ ರವರನ್ನು ಕ್ಷಮೆ ಕೋರಿ.

ನನ್ನ ಮೇಲಿನ ಲೇಖನಕ್ಕೆ ತಾವು ಸ್ಪಂದಿಸಿದ್ದಕ್ಕೆ ಧನ್ಯವಾದಗಳು. ಆದರೆ ನಿಮ್ಮ ಸ್ಪಂದನೆಯನ್ನು ನಾನು ಅರ್ಥಮಾಡಿಕೊಳ್ಳುವ ಮೂಡ್ ನಲ್ಲಿರಲಿಲ್ಲ. ಇಲ್ಲವೇ ನನಗೆ ಅರಿವಿನ ಕೊರತೆ ಮತ್ತು ವಯಸ್ಸಿನ ಜಾಡ್ಯ ಇದೆ ಎನ್ನುವುದು ಸಾಬೀತಾಗಿದೆ. ನಾನು ಮತ್ತೆ ಹೇಳುವಾಗ ಇನ್ನೇನಾದರು ಸಮರ್ಪಕ ಉಪಮೇಯ ಕೊಡುವ ಬದಲು, ನನ್ನ ಪರ್ಸ್ ಕದ್ದ ಕಿಸೆಕಳ್ಳರ ಹಗರಣದ ಕುರಿತು ಬರೆದು ತಮಗೆ ಬೇಸರಮಾಡಿದ್ದಕ್ಕೆ ಕ್ಷಮೆಕೋರುತ್ತೇನೆ.

ಕಿಸೆಗಳ್ಳರೇನು ಪರ್ಸ್ ತಂದು ಹಣದ ಸಮೇತ ನಿಮ್ಮ ಕೈಗೆ ಕೊಡಬೇಕಿತ್ತೆ ? ಎನ್ನುವ ಮಾತನ್ನು ಸದ್ಯ ಅವರು ನನಗೆ ಹೇಳಲಿಲ್ಲ. ಎಷ್ಟೇ ಅಗಲಿ ಮೈಸೂರುವಾಸಿ ನಾಗರಿಕರರವರು. ನಮ್ಮಂತಹವರಿಗೆ ಯಾರಾದರೂ ಕೇಳಲು ಹತ್ತಿರಬಂದರೆ ಸಾಕು; ಕಾದಿದ್ದು ಏನೇನೊ ಹೇಳಿ ಬೋರ್ ಮಾಡುತ್ತೇವೆ.

ಕ್ಷಮಿಸಿ. ಬರೆಯುತ್ತಿರಿ. ಸ್ಪಂದಿಸುತ್ತಿರಿ, ನಾಗೇಶ್ ರವರೆ !