ಇವತ್ತು 'ಗಂಡಸರ ದಿನ' ಗೊತ್ತಾ?

ಇವತ್ತು 'ಗಂಡಸರ ದಿನ' ಗೊತ್ತಾ?

ದೃಶ್ಯ 1 ಟೇಬಲ್ ಮೇಲಿರುವ ಪತ್ರವೊಂದನ್ನು ಅಪ್ಪ ತೆಗೆದು ಓದುತ್ತಾನೆ. ಕಣ್ಣೀರು ಸುರಿಸುತ್ತಾ, ನಡುಗುವ ಕೈಗಳಿಂದ ಆ ಪತ್ರವನ್ನು ಹಿಡಿದು ಅಮ್ಮೂ....ನೀನೇ ನನ್ನ ಬದುಕು ಕಣೇ...ಇವತ್ತು ನೀನು ಆ ವಿಶ್ವಾಸವನ್ನು ಕಳೆದುಕೊಂಡಿದ್ದೀಯಾ... ದೃಶ್ಯ -2 ಮನೆ ಬಿಟ್ಟು ಪ್ರಿಯಕರನೊಂದಿಗೆ ಓಡಿ ಹೋಗಲು ತೀರ್ಮಾನಿಸಿದ್ದ ಮಗಳು ಅಮ್ಮು...ಅಳುತ್ತಾ ಅರ್ಧ ದಾರಿಯಿಂದ ಮತ್ತೆ ಮನೆಗೆ ಬರುತ್ತಾಳೆ. ದೃಶ್ಯ-3 ಮನೆಗೆ ಬಂದವಳೇ ಅಪ್ಪನನ್ನು ತಬ್ಬಿಕೊಂಡು ಅಳುತ್ತಾಳೆ.... ಹಿನ್ನೆಲೆಯಲ್ಲಿ 'ವಿಶ್ವಾಸವೇ ಮಿಗಿಲು ಅಲ್ಲವೇ?' ಎಂಬ ಸ್ಲೋಗನ್್ನೊಂದಿಗೆ 'ಕಲ್ಯಾಣ್ ಜ್ಯುವೆಲ್ಲರ್ಸ್್'ನ ಜಾಹೀರಾತು ಟಿವಿ ಸ್ಕ್ರೀನ್್ನಲ್ಲಿ ಮೂಡಿಬರುತ್ತದೆ. (ನಾನು ಈ ಜಾಹೀರಾತು ನೋಡಿದ್ದು ಮಲಯಾಳಂ ವಾಹಿನಿಯಲ್ಲಿ, ಅದರ ಕನ್ನಡ ಅನುವಾದ ಇದು) ದೃಶ್ಯ-4 ಇದಾದ ನಂತರ ಕಾರಿನ ಪಕ್ಕ ತನ್ನ ಪ್ರೇಯಸಿಗಾಗಿ ಕಾಯುತ್ತಾ ನಿಂತಿರುವ ಹುಡುಗ... ಈ ದೃಶ್ಯ ಮಿಂಚಿ ಮರೆಯಾಗುತ್ತದೆ. ಅಪ್ಪನ ಬಳಿಗೆ ಹಿಂತಿರುಗಿ ಬಂದ ಮಗಳು ವಿಶ್ವಾಸ ಉಳಿಸಿಕೊಂಡಳಲ್ವಾ ಎಂದು ನಿಟ್ಟುಸಿರು ಬಿಟ್ಟು, ಜಾಹೀರಾತು ತಂತ್ರಕ್ಕೆ ಭೇಷ್ ಎನ್ನುವಾಗ ಕೊನೆಯ ದೃಶ್ಯದಲ್ಲಿ ಕಂಡು ಬರುವ ಆ ಹುಡುಗನನ್ನು ಯಾರೂ ಕ್ಯಾರೇ ಅನ್ನಲ್ಲ ಅಲ್ವಾ? ಆಕೆ ಆತನೊಂದಿಗೆ ಮಾಡಿದದ್ದು 'ವಿಶ್ವಾಸ ವಂಚನೆ' ಅಲ್ವಾ ಎಂಬುದು ಹುಡುಗರ ಪ್ರಶ್ನೆ! ಇದೊಂದು ಉದಾಹರಣೆಯಷ್ಟೇ. ಜಾಹೀರಾತು ವಿಷಯ ಬಿಟ್ಹಾಕಿ.... ಇವತ್ತು ಗಂಡಸರ ದಿನ ಅಂತೆ. ಅಂದ್ರೆ ವರುಷದಲ್ಲಿ ಅಪ್ಪನ ದಿನ, ಅಮ್ಮನ ದಿನ, ಪ್ರೇಮಿಗಳ ದಿನ ಬಂದಂತೆ ಗಂಡಸರಿಗೂ ಒಂದು ದಿನ ಇದೇರಿ. ಮಹಿಳಾ ದಿನಾಚರಣೆ ಅಂದ ಕೂಡಲೇ ಮಹಿಳಾ ಮಣಿಗಳಲ್ಲಾ ಹೋರಾಟದ ನೆನಪುಗಳನ್ನು ಸವಿಯುತ್ತಾ, ದೌರ್ಜನ್ಯಗಳ ವಿರುದ್ದ ಕೂಗುತ್ತಾ, ಚರ್ಚಾಗೋಷ್ಠಿಗಳನ್ನು ಮಾಡುತ್ತಿರುವುದು ಸಾಮಾನ್ಯ. ಹಾಗಾದ್ರೆ ಗಂಡಸರು ಯಾವ ರೀತಿ ತಮ್ಮ ದಿನವನ್ನು ಆಚರಿಸುತ್ತಾರೆ? ಹೇಳೋಕೆ ಹೋದ್ರೆ ಗಂಡಸರೂ ಮಹಿಳೆಯರಿಂದ ಶೋಷಣೆಗೊಳಗಾಗುತ್ತಾರೆ. ಮನೆಯಲ್ಲಿ ಹೆಂಡತಿಯ ಕಿರಿಕಿರಿ, ಕೈಕೊಟ್ಟು ಹೋದ ಹುಡುಗಿ, ಗಾಸಿಪ್ ಹಬ್ಬಿಸಿದ ವಾಚಾಳಿ ಹೆಂಗಸರಿಂದ ಮನೆ ಮುರಿದವರು, ಮನ ಮುರಿದವರು ಎಷ್ಟಿಲ್ಲ ಹೇಳಿ? ಆದ್ರೆ ಗಂಡಸರು ಯಾರೂ ಇದನ್ನು ಬಾಯ್ಬಿಟ್ಟು ಹೇಳಲ್ಲ. ಹೇಳಿದ್ರೂ ಯಾರೂ ನಂಬಲ್ಲ ಅಂತಾ ಅವರಿಗೆ ಗೊತ್ತು. ಇನ್ನೊಂದು ವಿಷ್ಯ, ಯಾವುದೇ ಮಹಿಳೆ ಪುರುಷನ ಬಗ್ಗೆ ಹೇಳುವುದಾದರೆ ಆಕೆ ಅವನ ಕೆಟ್ಟ ಗುಣಗಳನ್ನೇ ಮೊದಲು ಬೊಟ್ಟು ಮಾಡುತ್ತಾಳೆ. ಪುರುಷ ಎಷ್ಟು ಒಳ್ಳೆಯವನೇ ಇರಲಿ, ಏನಾದರೂ ಚಿಕ್ಕ ತಪ್ಪೆಸಗಿದರೂ ಸಾಕು, ಆಲ್ ಮೆನ್ ಆರ್ ಸೇಮ್ ಎಂದು ಆಕೆ ನಿರ್ಧಾರ ಮಾಡಿಬಿಡುತ್ತಾಳೆ. ಈ ನಿಲುವು ಬದಲಾಗಬೇಕು. ಎಲ್ಲರಲ್ಲಿಯೂ ಒಳ್ಳೆಯ ಮತ್ತು ಕೆಟ್ಟ ಗುಣಗಳು ಇದ್ದೇ ಇರುತ್ತವೆ ಎಂದು ಗೊತ್ತಿದೆಯಲ್ವಾ ಮತ್ಯಾಕೆ ಈ ಹೋಲಿಕೆ? ಇವತ್ತು ಗಂಡಸರ ದಿನಾಚರಣೆ ಅಲ್ವಾ... ಈ ದಿನವಾದರೂ ಗಂಡು ಹೆಣ್ಣೆಂಬ ತಾರತಮ್ಯವನ್ನೆಲ್ಲ ಪಕ್ಕಕ್ಕಿಟ್ಟು ನಮ್ಮ ಜೀವನದಲ್ಲಿ ಅಪ್ಪನಾಗಿ, ಗಂಡನಾಗಿ, ಮಗನಾಗಿ, ಪತಿಯಾಗಿ ಆಫ್್ಕೋರ್ಸ್ ಬಾಯ್್ಫ್ರೆಂಡ್ ಆಗಿ ಪ್ರೀತಿಯನ್ನು ನೀಡುವ ಗಂಡಸರಿಗೊಂದು ಹ್ಯಾಟ್ಸ್ ಆಫ್ ಹೇಳೋಣವೇ?
Rating
No votes yet

Comments