ಇವರಿಗೆ ಏನಾಗಿದೆ

ಇವರಿಗೆ ಏನಾಗಿದೆ

" ನೀವು ಒಂದ್ಸಲ ಅದ್ಯಾರು ಅಂತ ಹೇಳಿ ರೂಪಕ್ಕ . ನಮ್ಮ ’ಚೇಲಾಗಳಿಗೆ ಹೇಳಿ ’ಡೀಲ್ ಮಾಡ್ಸಿದರೆ ಸಾಕು ’ಮಚ್ಹು ’ಲಾಂಗ್ ಎತ್ಕೊಂದು ಹೋಗಿ ಅವನ್ನ ”ಎತ್ತಾಕೊಂಡು ಬರ್ತಾರೆ ’ಪೀಸ್ ಪೀಸ್." ಪ್ರದೀಪ ಹೇಳುತ್ತಿದ್ದರೆ ನನಗೆ ಸಂಕಟ.
ಯಾರೊ ತೊಂದರೆ ಕೊಡ್ತಾರೆ ಎಂಬ ಸಣ್ಣ ಕಾರಣಕ್ಕೆ ಬಂದ ಉತ್ತರ ಇದು.

"ಏ ಪ್ರದೀಪ . ಯಾಕಪ್ಪ ಈ ಭಾಷೆ ಮಾತಾಡ್ತೀಯ" ಅಂದ್ರೆ " ರೂಪಕ್ಕ ಈಗೆಲ್ಲಾ ಹಿಂಗೆ ಮಾತಾಡಿದ್ರೆ ’ನನ್ಮಕ್ಕಳು ಹೆದರ್ಕೊಳ್ಳೋದು." ಅಂತಾನೆ.
ಹಾಗಂತ ಆತ ಏನು ರೌಡಿಯಲ್ಲ
ಕೇವಲ ೧೮ ಅಥವ ೧೯ ವಯಸು ಇರಬಹುದು ಅಷ್ಟೆ.

"ಐ ನನ್ಮ್ಗಗನೇ ’ಚಮ್ಡ ಸುಲಿದುಬಿಡ್ತೀನಿ. ’ಮೇಲಿಂದ ಉದ್ದುದ್ದಕ್ಕೆ ಕತ್ತರಿಸ್ತೀನಿ " ಇದು ಯಾರೊ ದೊಡ್ದವರು ಹೇಳುತ್ತಿರುವ ಮಾತಲ್ಲ . ನಮ್ಮ ಮನೆಯ ಮುಂದೆ ಕ್ರಿಕೆಟ್ ಆಡ್ಲು ಬರುವ ೧೦ರ ಪೋರ ಹೇಳುವ ಮಾತು.

"ಅದೇನೋ ಮಾಮು ಅವಳೆನೋ ದೊಡ್ಡ ಫಿಗರ್ ಅನ್ನೂ ಹಂಗೆ ಆಡ್ಥಾಳೆ . ಗುರಾಯಿಸೋದು ಬೇರೆ ಗುರಾಯಿಸ್ತಾಳೆ ಅ"
" ಮಚ್ಚ ಅದಕ್ಕೆಲ್ಲ ಫೀಲಿಂಗ್ ಯಾಕೊ ಅವಳೆನು ನಿನ್ನ ಡವ್ವಾ"

"ಸಕ್ಕತ್ ಹಾಟ್ ಮಗಾ"

"ಬ್ಲೇಡ್ ಹಾಕೋದು"

ಇದೆಲ್ಲಾ ಈಗಿಗ ಕನ್ನಡ ಭಾಷೆಯ ಒಂದು ಅಂಗವೇನೊ ಅಂಬಷ್ಟು ಹುಡುಗರ ಮಾತಿನಲ್ಲಿ ಕೂಡುತ್ತಿವೆ. ನಮ್ಮ ಸಿನಿಮಾಗಳಿಂದ ಇದನ್ನು ಕಲಿತಾರೊ. ಇಲ್ಲ ಸಿನಿಮದವರೇ ನಮ್ಮನ್ನು ಕಾಪಿ ಮಾಡ್ತಾರೊ ಗೊತ್ತಿಲ್ಲ.

ಮಾತೆತ್ತಿದರೆ
A , ಜೋಗಿ, ಕಲಾಸಿಪಾಳ್ಯ ನಂತಹ ರೌಡಿಸಂ ಫಿಲ್ಮ್‍ನ ಡೈಲಾಗ್

ಆದರೆ ನನ್ನನ್ನು ನಿಜಕ್ಕೂ ಆತಂಕಕ್ಕೆ ಈಡು ಮಾಡುತ್ತಿರುವುದು ಅದಲ್ಲ

ಡೈಲಾಗ್ ತಾನೆ ಹೋದರೆ ಹೋಗಲಿ ಎಂದರೆ ನಡುವಳಿಕೆಯಲ್ಲೂ ಅವರನ್ನೆ ಅನುಸರಿಸುತ್ತಾರೆ

ಆರು ತಿಂಗಳ ಹಿಂದೆ ಎಬ್ಬರು ಹುಡುಗರು(೧೦ ವರ್ಷ)ತಮ್ಮ ಸಹಪಾಟಿಯೂಬ್ಬನನ್ನು ಕೊಂದದ್ದೇ ಆಗಲಿ.
೧೫ ವರ್ಶ್ಜದ ಹುಡುಗನೊಬ್ಬ ಒಬ್ಬ ಹುಡುಗಿಯನ್ನು ಅತ್ಯಾಚಾರ ಮಾಡಿದ್ದಾಗಲಿ
೧೮ ವರ್ಷದ ಹುಡುಗನೊಬ್ಬ 75 ವರ್ಷ್ದದ ಹಿರಿಯರಿಗೆ ೧ ಕೋಟಿ ಟೋಪಿ ಹಾಕಿದ್ದು
ಇದು ಕೇವಲ ಉದಾಹರಣೆಗಳಷ್ಟೆ . ದಾಖಲೆಯಾಗದ್ದು ಅದದ್ದೂ ಇನ್ನೂ ಇದೆ

ಇದೆಲ್ಲಾ ಗಮನಿಸಿದಾಗ ಎಲ್ಲಿಗೆ ಸಾಗುತ್ತಿದೆ ನಮ್ಮ ಯುವ ಜನಾಂಗ ಅನ್ನಿಸುತ್ತದೆ.

ಎಲ್ಲಿ ಹೋಗಿದೆ ಆ ಮಿತ್ರತ್ವ . ಆ ಸಭ್ಯತೆ,

ಹಣ ಎಂಬುದು ಈ ಎಳೆಯರಲ್ಲೂ ಅಮಲೇರಿಸಿದೆಯೇ?

ಚಿತ್ರಗಳು ಇವರನ್ನು ಉತ್ತೇಜಿಸುತ್ತವೋ

ಇವರುಗಳು ಇಂತಹ ಚಿತ್ರ ಮಾಡಲು ಪ್ರೇರಿಪಿಸುತ್ತಾರೊ ತಿಳಿಯದು

ಆದರೆ ಯುವ ಜನಾಂಗವಂತೂ ದಾರಿ ತಪ್ಪಿದೆ ತಪ್ಪುತ್ತಿದೆ ಎನ್ನುವುದು ಖಂಡಿತಾ.

ಇದಕ್ಕೆ ಪರಿಹಾರವೆಂಬುದು ಇದೆಯಾ? ಗೊತ್ತಿಲ್ಲ

Rating
No votes yet

Comments